ಮಳೆಹಾನಿಯಿಂದ ಉಂಟಾದ ನಷ್ಟ, ಕುಸಿದು ಬಿದ್ದ ಗೋಡೆ – ಕಾಮಗಾರಿಗಳನ್ನು ಪುನರ್ ಕೈಗೆತ್ತಿಕೊಳ್ಳಲು ಸರಕಾರದಿಂದ 10ಕೋಟಿ ರೂಪಾಯಿ ಅನುದಾನ

0
8


ಐವನ್ ಡಿʼಸೋಜಾ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಮಳೆಹಾನಿಯಿಂದ ಕುಸಿದುಬಿದ್ದ ನಷ್ಟಗೊಂಡ ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಪುನರ್ ಕೈಗೊಳ್ಳಲು ರಾಜ್ಯ ಸರ್ಕಾರದಿಂದ ಸುಮಾರು 10ಕೋಟಿ ಬಿಡುಗಡೆಗೊಂಡು ಸುಮಾರು 18 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಈ ಕಾಮಗಾರಿಗಳಿಗೆ ಈಗ ಟೆಂಡರ್ ಕರೆಯಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿಗಳು ಪ್ರಾರಂಭಗೊಂಡು ಮಳೆಗಾಲಕಿಂತ ಮೊದಲೇ ಈ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ಅಧಿಕಾರಿಗಳಿದೆ ಐವನ್ ಡಿʼಸೋಜಾರವರು ಸೂಚಿಸಿದರು.

ಜೊತೆಗೆ ಎಲ್ಲಾ ಕಾಮಗಾರಿಗಳು ನಡೆಯಬೇಕಿದ್ದ ಪ್ರದೇಶಗಳಿಗೆ ಇಂಜಿನಿಯರ್ ಹಾಗೂ ಸ್ಥಳೀಯ ನಾಯಕರೊಂದಿಗೆ ಭೇಟಿ ನೀಡಿದರು. ಬಿಜೈ 31ನೇ ವರ‍್ಡಿನ ಆನೆಗುಂಡಿ ಆಶ್ರಯ ಆಶ್ರಮದ ಬಳಿ ಹಾಗೂ ನಂದಗೋಕುಲ ಅಪರ‍್ಟ್ಮೆಂಟ್ ಬಳಿ ರಾಜಕಾಲುವೆ ನರ‍್ಮಾಣ ಕಾಮಗಾರಿಗೆ 30.ಲಕ್ಷ ರೂಪಾಯಿ, ಕೊಡಿಯಾಲ್ಬೈಲ್ ವರ‍್ಡಿನ ಹಿಂಭಾಗದ ಸ್ಟೆಲ್ಲಾಡೋರ್ ವೇಗಸ್ ಮನೆ ಬಳಿ ಹಾಗೂ ಬಳ್ಳಾಲ್ ಬಾಗ್ ಶರಾವತಿ ಅಪರ‍್ಟ್ಮೆಂಟ್ ಬಳಿ ರಾಜ ಕಾಲುವೆ ಬದಿ ತಡೆಗೋಡೆ ನರ‍್ಮಣ ಕಾಮಗಾರಿ ಸುಮಾರು 30.ಲಕ್ಷ ರೂಪಾಯಿ, ವರ‍್ಡ್ ಸಂಖ್ಯೆ 32ರ ಕದ್ರಿ ಉತ್ತರ ರ‍್ಕಿಟ್ ಹೌಸ್ ನ ಬಳಿ ತಡೆಗೋಡೆ ನರ‍್ಮಾಣ ಕಾಮಗಾರಿಗೆ ಇದು ಅತ್ಯಂತ ಪ್ರಮುಖವಾದ ರಸ್ತೆ ಈ ಕಾಮಗಾರಿಗೆ 1ಕೋಟಿ 90ಲಕ್ಷ ರೂಪಾಯಿ, ವರ‍್ಡ್ ಸಂಖ್ಯೆ 40ರ ಮಂಗಳೂರು ಕರ‍್ಟ್ ವರ‍್ಡ್ನ ಸಿಟಿ ಹಾಸ್ಪಿಟಲ್ ಎದರುಗಡೆ ರಾಜಕಾಲುವೆ ನರ‍್ಮಾಣ ಕಾಮಗಾರಿಗೆ 30ಲಕ್ಷ ರೂಪಾಯಿ, ವರ‍್ಡ್ ಸಂಖ್ಯೆ 38ರ ಮಂಗಳೂರು ಬೆಂದೂರ್ ವೆಲ್ನ ಗೀತಾಂಜಲಿ ಎದುರು ತಡೆಗೋಡೆ ಅಭಿವೃದ್ದಿ ಕಾಮಗಾರಿಗೆ 30ಲಕ್ಷ ರೂಪಾಯಿ, ಈ ಸ್ಥಳೀಯ ಕಾಮಗಾರಿಗಳನ್ನು ಪರಿಶೀಲಿಸಿ ಐವನ್ ಡಿʼಸೋಜಾರವರು ಜೊತೆ ಅಧಿಕಾರಿಗಳು ಕೂಡ ಈ ಪ್ರದೇಶಕ್ಕೆ ಬೇಟಿ ನೀಡಿದ್ದು, ಸದ್ರಿ ಕಾಮಗಾರಿಗಳನ್ನು ಕೂಡಲೇ ಕರ‍್ಯಗತಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಅನೇಕ ನೀರು ಹರಿಯುವ ತೋಡುಗಳಲ್ಲಿ ಹೂಳು (ಮಣ್ಣು) ತುಂಬಿ ನೀರು ಸರಾಗವಾಗಿ ಹರಿಯಲು ತೊಂದರೆ ಉಂಟಾಗುತ್ತಿದ್ದು ಈ ಹೂಳೆತ್ತುವ ಕೆಲಸವನ್ನು ಕೂಡಲೇ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹೂಳೆತ್ತುತ್ತವ ಕಾಮಗಾರಿಗೆ ಸುಮಾರು ರೂ.3.50ಕೋಟಿ ರೂಪಾಯಿಗಳು ರಾಜ್ಯ ರ‍್ಕಾರದಿಂದ ಮಂಜೂರಾಗಿದ್ದು, ಎಲ್ಲೆಲ್ಲಿ ಹೂಳೆತ್ತುವ ಕಾಮಗಾರಿ ಇದೆಯೋ ಅದನ್ನು ಗುರುತಿಸಿ ಕೆಲಸ ಕರ‍್ಯಗಳನ್ನು ಕೈಗತ್ತಿಕೊಳ್ಳಬೇಕೆಂದು ಐವನ್ ಡಿಸೋಜಾರವರು ತಿಳಿಸಿದರು.

ರಾಜ್ಯ ರ‍್ಕಾರ ಇವತ್ತು ಯುಜಿಡಿ ಕೆಲಸಕ್ಕೆ ಬಹಳಷ್ಟು ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಒಳಚರಂಡಿ ನೀರು, ನೀರು ಹರಿಯುವ ತೋಡುಗಳಲ್ಲಿ ಹರಿಯುವುದನ್ನು ತಡೆಗಟ್ಟಲು ದೊಡ್ಡ ರೀತಿಯ ಕರ‍್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಸರಕಾರವನ್ನು ಈಗಾಗಲೇ ಐವನ್ ಡಿʼಸೋಜಾ ಒತ್ತಾಯಿಸಲಾಗಿದ್ದು 1250 ಕೋಟಿ ರೂಪಾಯಿಯ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯನ್ನು ಜಾರಿಗೆ ತರಲು ವಿಧಾನ ಪರಿಷತ್ನಲ್ಲಿ ಸಚಿವರ ಮತ್ತು ಸರಕಾರದ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಐವನ್ ಡಿʼಸೋಜಾ ತಿಳಿಸಿದ್ದಾರೆ.

ಈ ಒಂದು ಕಾಮಗಾರಿಗಳು ನಡೆಯುವ ಸಂರ‍್ಭದಲ್ಲಿ ಅತ್ಯಂತ ವೇಗವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಿಯತಕಾಲದಲ್ಲಿ ಕಾಮಗಾರಿಗಳನ್ನು ಮುಗಿಸಿಕೊಡಬೇಕೆಂದು ಅಧಿಕಾರಿಗಳಿಗೆ ಐವನ್ ಡಿʼಸೋಜಾ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಕರ‍್ಪೋರೇಟರ್‌ಗಳಾದ ನವೀನ್ ಡಿಸೋಜಾ, ಲ್ಯಾನ್ಸ್ಲಾಟ್ ಪಿಂಟೋ, ಡಿ.ಕೆ. ಅಶೋಕ್, ಪ್ರಕಾಶ್ ಸಾಲಿಯಾನ್, ವಿನಯ್ ರಾಜ್, ಪ್ರೇಮ್ ಬಲ್ಲಾಳ್‌ಬಾಗ್, ಮ.ನ.ಪ ಎಂಜಿನಿಯರ್ ನಿತ್ಯಾನಂದ, ಮಂಜುನಾಥ್ ಚಿನ್ಮಯಿ, ಸೈದಾ, ವರ‍್ಡ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವರುಣ್ ದೇವಾಡಿಗ, ಓಸ್ವಾಲ್ಡ್ ಬೆಂದೂರುವೆಲ್, ರಾಜೇಶ್ ಬೆಂಗ್ರೆ ಕಾಂಗ್ರೆಸ್ ಪಕ್ಷದ ನಾಯಕರುಗಳಾದ, ಆಲಿಸ್ಟನ್ ಡಿ’ಕುನ್ನಾ, ಜಯ ಪೂಜಾರಿ, ಜಗದೀಶ್ ಕುಲಾಲ್, ವಸಂತ್ ಬಿಜೈ, ಗೌತಮ್ ಕಾಪಿಕಾಡ್, ಸುದೀರ್ ಬಿಜೈ, ಸಂತೋಷ್ ಬಿಜೈ, ಕ್ಲೈಡ್ ಡಿಸೋಜಾ ಜೊತೆಗಿದ್ದರು.

LEAVE A REPLY

Please enter your comment!
Please enter your name here