ಮೂಡುಬಿದಿರೆ : ತೆಂಗಿನಕಾಯಿ ಕೊಯ್ಯುವ ವೇಳೆ ಮರವೇರಿದ್ದ ಕಾರ್ಮಿಕನೊಬ್ಬ ಕಾಲು ಜಾರಿ ಕೆಳಕ್ಕೆ ಬಿದ್ದು ಮೃತಪಟ್ಟಿ ದುರ್ಘಟನೆ ಮಾಂಟ್ರಾಡಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಮಾಂಟ್ರಾಡಿ ಗ್ರಾಮದ ಕೂಲಿಕಾರ್ಮಿಕ ರಮೇಶ್ (38) ಮೃತ ವ್ಯಕ್ತಿ. ಸೋಮವಾರ ಬೆಳಗ್ಗೆ ಮನೆಯೊಂದರ ಆವರಣದಲ್ಲಿ ತೆಂಗಿನ ಮರಕ್ಕೆ ರಮೇಶ್ ತೆಂಗಿನಕಾಯಿ ಕೊಯ್ಯಲು ಮರವೇರಿದ್ದು, ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತಲೆಗೆ ಹಾಗೂ ದೇಹಕ್ಕೆ ತೀವ್ರ ಗಾಯಗಳಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

