ಪಾಡ್ಯಾರು ಶಾಲೆಯಲ್ಲಿ ಮಕ್ಕಳ ಸಂತೆ ಶೂನ್ಯ ತ್ಯಾಜ್ಯ ಮೆಟ್ರಿಕ್ ಮೇಳ

0
55

ಮೂಡುಬಿದಿರೆ ಪಾಡ್ಯಾರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಮಕ್ಕಳ ಸಂತೆ ಮತ್ತು ಮೆಟ್ರಿಕ್ ಮೇಳ ನಡೆಯಿತು. ಪಡು ಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಯಾನಂದ ಪೈ, ಶಾಲಾ ಸ್‌ಡಿಎಂಸಿ ಅಧ್ಯಕ್ಷ ರಮೇಶ ಆಚಾರ್ಯ, ಸ್ಥಳೀಯ ನಿವಾಸಿ ಬಿ ವಿಶ್ವನಾಥ ಕಾಮತ್, ಎಮ್ ಸಿ ಎಸ್ ಬ್ಯಾಂಕ್ ಆಡಳಿತ ಮಂಡಳಿಯ ಸದಸ್ಯ ಜಾರ್ಜ್ ಮೋನಿಸ್, ಮೂಡುಬಿದ್ರೆ ಪುರಸಭೆಯ ಪರಿಸರ ಅಭ್ಯಂತರ ಶಿಲ್ಪ ಹಾಜರಿದ್ದರು. ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ಶೆಣೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಅತಿಥಿಗಳು ಗಿಡಗಳಿಗೆ ನೀರೆರೆಯುವ ಮೂಲಕ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ತರಕಾರಿಗಳನ್ನು ,ಫ್ಯಾನ್ಸಿ ಐಟಂಗಳು, ಸ್ಟೇಷನರಿ ಸಾಮಗ್ರಿಗಳು, ತಿಂಡಿ ತಿನಿಸುಗಳು, ಪಾನೀಯಗಳು ಮತ್ತು ಮೋಜಿನ ಆಟಗಳ ಮೂಲಕ ವ್ಯವಹಾರಗಳನ್ನು ನಡೆಸುವ ಜ್ಞಾನವನ್ನು ಪಡೆದುಕೊಂಡರು. ವಿದ್ಯಾರ್ಥಿಗಳು ವ್ಯಾಪಾರ ನಡೆಸುವಾಗ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ ಶೂನ್ಯ ತ್ಯಾಜ್ಯವನಾಗಿ ಪರಿವರ್ತಿಸಿದರು. ಪೋಷಕರು ಮತ್ತು ಗ್ರಾಮಸ್ಥರು ಭಾಗವಹಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ವರದಿ : ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here