ಮೂಡುಬಿದಿರೆಯ ಗ್ರಾಮ ದೇವತೆ, ಚೌಟರ ಸೀಮೆಯ ಆರಾಧ್ಯ ಸಪರಿವಾರ ಸೋಮನಾಥೇಶ್ವರ ದೇವರು, ಮಹಿಷ ಮರ್ದಿನಿ ಅಮ್ಮನವರ ಬ್ರಹ್ಮಕಲಶೋತ್ಸವ ವರ್ಧಂತಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಾರ್ಚ್ 6 ರಂದು ಜರಗಿತು.

ಈ ಸಂದರ್ಭದಲ್ಲಿ ಶತರುದ್ರಾಭಿಷೇಕ, ದುರ್ಗಾ ನಮಸ್ಕಾರ ಪೂಜೆ, ರಂಗಪೂಜೆ ಗಳು ಅನುವಂಶಿಕ ಆಡಳಿತ ಮುಕ್ತೇಸರ ಕುಲದೀಪ್ ಎಂ, ಪ್ರಧಾನ ಅರ್ಚಕ ಅಡಿಗಳ್ ಅನಂತಕೃಷ್ಣ ಭಟ್ ನೇತೃತ್ವದಲ್ಲಿ ನಡೆಯಿತು. ಊರ ಮುಂದಾಳುಗಳು ಸಕಲ ಸಿದ್ಧತೆಗಳೊಂದಿಗೆ ಸಹಕರಿಸಿದರು.
ವರದಿ ರಾಯಿ ರಾಜ ಕುಮಾರ
.

