ಮಿಲಾಗ್ರಿಸ್ ಕಾಲೇಜಿನಲ್ಲಿ ‘ಎಕ್ಸೆಲ್ಸೋ-2026’ –ಪದವಿಮಟ್ಟದ ಅಂತರ್ ಕಾಲೇಜು ಸ್ಪರ್ದೆ

0
6

ಮಂಗಳೂರು : ಮಿಲಾಗ್ರಿಸ್ ಕಾಲೇಜು, ಮಂಗಳೂರು ಇಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (Iಕಿಂಅ) ಹಾಗೂ ವಾಣಿಜ್ಯ ಮತ್ತು ನರ‍್ವಹಣಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ವಾಣಿಜ್ಯ ಮತ್ತು ನರ‍್ವಹಣಾ ವಿಭಾಗದ ಉತ್ಸವ “ಎಕ್ಸೆಲ್ಸೊ–26” ಅನ್ನು ಆಯೋಜಿಸಲಾಯಿತು.

ಕರ‍್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ರಂಗನಾಥ್ ಸಿ. ಕಿಣಿ ಅವರು ಮಾತನಾಡಿ, ಇಂತಹ ಅಂತರಕಾಲೇಜು ಉತ್ಸವಗಳು ವಿದ್ಯರ‍್ಥಿಗಳ ಉತ್ತಮ ಜೀವನ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಸಹಾಯಕವಾಗುತ್ತವೆ ಎಂದು ಹೇಳಿದರು. ಇಂತಹ ಕರ‍್ಯಕ್ರಮಗಳು ವಿದ್ಯರ‍್ಥಿಗಳಿಗೆ ಸ್ರ‍್ಧಾತ್ಮಕ ಜಗತ್ತಿನತ್ತ ತಮ್ಮನ್ನು ತೆರೆದಿಡಲು ಉತ್ತಮ ವೇದಿಕೆಯನ್ನು ಒದಗಿಸುತ್ತವೆ ಎಂದರು.

ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ. ಫಾ. ಬೋನವೆಂಚರ್ ನಜರೇತ್ ಅವರು ಮಾತನಾಡಿ, ಪಠ್ಯ ಚಟುವಟಿಕೆಗಳ ಜೊತೆಗೆ ಇಂತಹ ಸ್ರ‍್ಧೆಗಳು ವಿದ್ಯರ‍್ಥಿಗಳು ತಮ್ಮ ಪ್ರತಿಭೆ, ಸೃಜನಶೀಲತೆ ಮತ್ತು ಸಾರ‍್ಥ್ಯಗಳನ್ನು ಪ್ರರ‍್ಶಿಸಲು ಬಹಳ ಮಹತ್ವದ್ದಾಗಿವೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಲ್ವಿನ್ ಸೆರಾವೊ ಅವರು ಕರ‍್ಯಕ್ರಮಕ್ಕೆ ಶುಭಾಶಯಗಳನ್ನು ತಿಳಿಸಿದರು. ಸುಮಾರು 25 ಪದವಿ ಕಾಲೇಜುಗಳಿಂದ 150 ವಿದ್ಯರ‍್ಥಿಗಳು ಈ ಸ್ರ‍್ಧೆಗಳಲ್ಲಿ ಭಾಗವಹಿಸಿದ್ದರು. ಪದವಿ ವಿದ್ಯರ‍್ಥಿಗಳಿಗಾಗಿ ಬೆಸ್ಟ್ ಮ್ಯಾನೇಜರ್, ಕ್ವಿಜ್, ಮರ‍್ಕೆಟಿಂಗ್, ಟ್ರೆಷರ್ ಹಂಟ್, ರೀಲ್ ಮೇಕಿಂಗ್ ಮೊದಲಾದ ಸ್ರ‍್ಧೆಗಳನ್ನು ಆಯೋಜಿಸಲಾಯಿತು.

ಕರ‍್ಯಕ್ರಮದಲ್ಲಿ ವಿದ್ಯಾರ್ಥಿ ಸಂಯೋಜಕಿಯಾದ ಲೀಶಾ ಲೋಬೊ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಯೋಜಕರಾದ ರಾಯ್ಸ್ಟನ್ ಡಿ’ಕುನ್ಹಾ ಅವರು ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿಯಾಗಿರುವ ಹಾಗೂ ಕರ‍್ಯಕ್ರಮದ ಸಂಯೋಜಕಿಯಾಗಿರುವ ರೋಹಿತಾ ಮೆಲಿಟಾ ವಂದಿಸಿದರು. ಕರ‍್ಯಕ್ರಮವನ್ನು ವಿದ್ಯರ‍್ಥಿನಿ ಸಾಲಿಹಾ ನಿರೂಪಿಸಿದರು.

LEAVE A REPLY

Please enter your comment!
Please enter your name here