ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದಿಂದ ವಿದ್ಯಾರ್ಥಿಗಳಿಗೆ ಟ್ರ್ಯಾಕ್‌ಸೂಟ್ ವಿತರಣೆ

0
10

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ, ಪೆರ್ಡೂರು ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೂಪದಕಟ್ಟೆ ಬೈರಂಪಳ್ಳಿಯ ವಿದ್ಯಾರ್ಥಿಗಳಿಗೆ ಸಮವಸ್ತ್ರ (Track Suit)ಗಳನ್ನು ವಿತರಿಸುವ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಕುಲಾಲ್ ಪಕ್ಕಾಲು ವಿದ್ಯಾರ್ಥಿಗಳಿಗೆ ಶಿಸ್ತು, ಉತ್ತಮ ಶಿಕ್ಷಣ ಹಾಗೂ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಹಿತನುಡಿಗಳನ್ನು ನೀಡಿದರು. ಅಲ್ಲದೆ, ಶಾಲೆಯ ಅಭಿವೃದ್ಧಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಹಾಗೂ ಇತರ ಅಗತ್ಯ ವಸ್ತುಗಳ ಅವಶ್ಯಕತೆ ಇದ್ದಲ್ಲಿ, ಸಂಸ್ಥೆಯ ವತಿಯಿಂದ ನೆರವನ್ನು ಒದಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಹರೀಶ್ ಕುಲಾಲ್ ಹಂದಿಬೆಟ್ಟು, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀ ಸುಧಾಕರ ಕುಲಾಲ್ ಪಟ್ಲ, ನಿರ್ದೇಶಕ ಮಂಡಳಿಯ ಸದಸ್ಯರುಗಳಾದ ಶೇಖರ ಕುಲಾಲ್ ಕುಕ್ಕಿಕಟ್ಟೆ, ಯೋಗೀಶ್ ಕುಲಾಲ್ ಬೋಳುಗುಡ್ಡೆ, ಸುರೇಶ್ ಕುಲಾಲ್ ಗುಂಡ್ಯಡ್ಕ, ಗಣೇಶ್ ಕುಲಾಲ್ ಪಕ್ಕಾಲು, ಮಂಜುನಾಥ ಕುಲಾಲ್ ಕುಬ್ರಿ, ಪ್ರಫುಲ್ಲಾ ಎಸ್ ಕುಲಾಲ್ ಬೈರಂಪಳ್ಳಿ, ಶ್ಯಾಮಲಾ ಕೆ ಕುಲಾಲ್ ಪೆರ್ಡೂರು, ಕುಲಾಲ ಸಂಘ ಪೆರ್ಡೂರು ಇದರ ಅಧ್ಯಕ್ಷರಾದ ಶ್ರೀ ಕಾಳು ಕುಲಾಲ್, ಶಾಲೆಯ ಮುಕ್ಯೋಪಾಧ್ಯಾಯರಾದ ಶ್ರೀ ಗೋಪಾಲ್ ನಾಯ್ಕ್, ಶಾಲಾ SDMC ಅಧ್ಯಕ್ಷರಾದ ಸುಕೇಶ್ ಕುಲಾಲ್ ದೂಪದಕಟ್ಟೆ, ಶಿಕ್ಷಣ ಇಲಾಖೆಯ ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.

ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ನಮ್ಮ ಸಣ್ಣ ಪ್ರಯತ್ನವು ಅವರಿಗೆ ಮತ್ತಷ್ಟು ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ.

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ, ಪೆರ್ಡೂರು