ಲಯನ್ಸ್ ಸೇವಾ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸೇವಾ ಕಾರ್ಯಕ್ರಮ

0
9

ಕದ್ರಿ ಹಿಲ್ಸ್ ಮಂಗಳೂರು : ಲಯನ್ಸ್ ಕ್ಲಬ್ ಕಾರ್ಕಳ ಸೆಂಟ್ರಲ್, ಲಯನ್ಸ್ ಕ್ಲಬ್ ಬ್ರಹ್ಮಗಿರಿ , ಇದರ ಸಂಯುಕ್ತ ಆಶ್ರಯದಲ್ಲಿ ವಿಜೇತ ವಿಶೇಷ ಶಾಲೆಯಲ್ಲಿ ಮಹಿಳಾ ದಿನಾಚರಣೆ ಹಾಗೂ ಸೇವಾ ಕಾರ್ಯಕ್ರಮವನ್ನು ಲೈನ್ಸ್ ಜಿಲ್ಲೆ, 317 ಸಿ ಇದರ ಉಪಜಿಲ್ಲ ಗವರ್ನರ್ ಹರಿಪ್ರಸಾದ್ ರೈ ಅವರು ಉದ್ಘಾಟಿಸಿದರು.

ವಿಜೇತ ವಿಶೇಷ ಶಾಲೆಯಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಿ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅವರನ್ನು ಹಾಗೂ ಸಿಬ್ಬಂದಿ ವರ್ಗದವರನ್ನು ಗೌರವಿಸಿದರು. ಹಾಗೂ ಶಾಲಾ ಶ್ರೇಯೋಭಿವೃದ್ಧಿಗಾಗಿ ದೇಣಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಜಿಲ್ಲಾ ಉಪ ಗವರ್ನರ್ ಹರಿಪ್ರಸಾದ್ ರೈ, ಪ್ರಾಂತೀಯ ಅಧ್ಯಕ್ಷ ಲಯನ್ ಗಿರೀಶ್ ರಾವ್, ಲಯನ್ ಸಂಜೀವ್ ಗೌಡ, ಸ್ಮಿತಾ ಮಹೇಶ್,ಬಿನೇಶ್, ಶೈನಿ ಸತ್ಯಭಾಮ ಮಾಲಾ ಕಿಶೋರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here