ಕಾಸರಗೋಡು : ಕನ್ನಡ ಭವನದಲ್ಲಿ ಇತ್ತೀಚೆಗೆ ನಡೆದ ಗಡಿನಾಡು ಕನ್ನಡ ಸಮ್ಮೇಳನ–2026 ಕಾರ್ಯಕ್ರಮದಲ್ಲಿ ಭಾಗವಹಿಸಲು ಅಥವಾ ಗೌರವ ಪ್ರಶಸ್ತಿಗಳನ್ನು ಸ್ವೀಕರಿಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಗಸ್ಟ್ 2ರಂದು (ಭಾನುವಾರ) ಬೆಳಿಗ್ಗೆ 11 ಗಂಟೆಗೆ ಕನ್ನಡ ಭವನಕ್ಕೆ ಆಗಮಿಸಿ ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸುವಂತೆ ಕನ್ನಡ ಭವನದ ಸ್ಥಾಪಕ ಸಂಚಾಲಕರಾದ ಡಾ ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಭರವಸೆಯ ಬೆಳಕು’ ಪ್ರಶಸ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳು : ಸಾನ್ವಿ ರಾವ್ (ಮುಲ್ಕಿ), ಅನನ್ಯ (ಮಂಗಳೂರು), ಶ್ರೇಯ (ಬೈಂದೂರು), ತೇಜಸ್ (ಮದ್ದೋಡಿ), ನಿನಾದ್ ರಾವ್, ಧೃತಿ ಜಿ (ಮಂಗಳೂರು), ಶ್ರೇಯಸ್ ಹಾಗೂ ಅದಿತಿ (ಬೇಕಲ್), ನಮೃತ, ದೀಕ್ಷಿತಾ
‘ಭರವಸೆಯ ಶಿಕ್ಷಣ ರತ್ನ’ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು: ವಿನತ ಕೆ., ನಾಗರಾಜ ಮದ್ದೋಡಿ ಹಾಗೂ ಯಶೋಧ ಪಿ, ಶೋಭಾ ಶರತ್, ಸುಜಾತ ಅಶೋಕ.
ಇದೇ ವೇಳೆ ಕಾಸರಗೋಡಿನ ಯುವ ಗಾಯಕಿ ಅನ್ವಿತಾ ಶೆಣೈ ಇವರೀಗೆ “ಕನ್ನಡ ಪಯಸ್ವಿನಿ ನಾದ ರತ್ನ “ಅಚೀವ್ಮೆಂಟ್ ಅವಾರ್ಡ್ ಪ್ರದಾನ ಮಾಡಲಾಗುವುದು.
ಆಯ್ಕೆಯಾದ ಎಲ್ಲ ಪ್ರಶಸ್ತಿ ಪುರಸ್ಕೃತರು ನಿಗದಿತ ದಿನ ಹಾಗೂ ಸಮಯಕ್ಕೆ ಕನ್ನಡ ಭವನಕ್ಕೆ ಹಾಜರಾಗಿ ಗೌರವ ಪ್ರಶಸ್ತಿಯನ್ನು ಸ್ವೀಕರಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

