ವರದಿ : ಮಂದಾರ ರಾಜೇಶ್ ಭಟ್
ಪುತ್ತೂರು : ಸಾಹಿತ್ಯದ ಹಾದಿಯಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ಲೇಖಕಿ ಶ್ವೇತಾ ದಿಲೀಪ್ ಕುತ್ಲೂರು ನಾರಾವಿ ಅವರ ಚೊಚ್ಚಲ ಕೃತಿ ‘ಜೀವನದ ಬೆಳಕು’ ಮಾರ್ಚ್ 8 ರಂದು ಪುತ್ತೂರಿನಲ್ಲಿ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿತು.

ಪುತ್ತೂರಿನ ವಿದ್ಯಾಮಾತ ಅಕಾಡೆಮಿ ಸಭಾಂಗಣದಲ್ಲಿ ನಡೆದ ‘ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ’ಯ ಪುತ್ತೂರು ತಾಲೂಕು ಘಟಕದ ಪದಗ್ರಹಣ ಹಾಗೂ ‘ಆಮಂತ್ರಣ ಟೀಮ್ ಗಾನಯಾನ’ದ ಜೋಡಿಗಾಯನ ಸಮಾರಂಭದಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಗಣ್ಯರಿಂದ ಕೃತಿ ಲೋಕಾರ್ಪಣೆ
ಹಿರಿಯ ಮುತ್ಸದ್ದಿ ಹಾಗೂ ಆಮಂತ್ರಣ ಸಂಸ್ಥೆಯ ಗೌರವ ಸಲಹೆಗಾರರಾದ ಬಿ. ಭುಜಬಲಿ ಧರ್ಮಸ್ಥಳ ಅವರು ಕೃತಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅವರು ಲೇಖಕಿಯ ಪರಿಚಯ ಮಾಡಿಕೊಟ್ಟರು.
ಉಪಸ್ಥಿತರಿದ್ದ ಪ್ರಮುಖರು
ಲೇಖಕಿ : ಶ್ವೇತಾ ದಿಲೀಪ್ ನಾರಾವಿ , ಸ್ವರ್ಣಲತಾ ವೀರೇಂದ್ರ ಕುಮಾರ್ ಕಾಯರ್ತಡ್ಕ, ಅಮ್ಮಾಜಿ ಬಿ. ಜೈನ್, ದಿಲೀಪ್ ಕುಮಾರ್ ಜೈನ್, ಪೃಥ್ವಿರಾಜ್ ಜೈನ್ (ಬೆಂಗಳೂರು), ಆದಿತ್ಯ ಜೈನ್.
ಸಾಹಿತ್ಯಿಕ ಗಣ್ಯರು
ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ದ.ಕ. ಜಿಲ್ಲಾ ಆಮಂತ್ರಣ ಅಧ್ಯಕ್ಷೆ ವಿಂಧ್ಯಾ ಎಸ್. ರೈ ಕಡೇಶಿವಾಲಯ, ಉಡುಪಿ ಜಿಲ್ಲಾಧ್ಯಕ್ಷೆ ಪುಷ್ಪಪ್ರಸಾದ್, ಪುತ್ತೂರು ಕಸಾಪ ಅಧ್ಯಕ್ಷ ಉಮೇಶ್ ನಾಯಕ್, ಮಲ್ಲಿನಾಥ್ ಜೈನ್ ಧರ್ಮಸ್ಥಳ.
ಸಂಘಟನಾ ಪ್ರಮುಖರು
ಪುತ್ತೂರು ಆಮಂತ್ರಣ ವೇದಿಕೆಯ ನೂತನ ಅಧ್ಯಕ್ಷೆ ಆಶಾಮಯ್ಯ, ಟ್ರಸ್ಟಿ ಅರುಣ್ ಅರುವ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.
ಗಮನಾರ್ಹ: ಮಹಿಳಾ ದಿನಾಚರಣೆಯಂದೇ (ಮಾ. 8) ಓರ್ವ ಮಹಿಳಾ ಲೇಖಕಿಯ ಚೊಚ್ಚಲ ಕೃತಿ ಬಿಡುಗಡೆಯಾಗಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
“ಲೇಖನಿಯಿಂದ ಮೂಡಿದ ಪ್ರತಿ ಪದವೂ ಬದುಕಿನ ದಾರಿಗೆ ದೀಪವಾಗಲಿ, ‘ಜೀವನದ ಬೆಳಕು’ ಕೃತಿಯು ಓದುಗರ ಮನದ ಕತ್ತಲೆಯನ್ನು ಅಳಿಸಿ ಜ್ಞಾನದ ಹೊಸ ಹಾದಿಯನ್ನು ತೋರಿಸಲಿ. ಸಾಹಿತ್ಯ ಲೋಕಕ್ಕೆ ಶ್ವೇತಾ ದಿಲೀಪ್ ಅವರ ಕೊಡುಗೆ ಹೀಗೆಯೇ ನಿರಂತರವಾಗಿರಲಿ.”

