ಬಂಟ್ವಾಳ : ಮಹಿಳೆಯರು ಸ್ವಾವಲಂಬಿಯಾಗುವುದರೊಂದಿಗೆ ತಮ್ಮ ಮೇಲಾಗುತ್ತಿರುವದೌರ್ಜನ್ಯ, ಅತ್ಯಾಚಾರ, ಹಿಂಸೆ, ಅಸಮಾನತೆಯನ್ನುಧೈರ್ಯವಾಗಿ ಎದುರಿಸಿ ಪುರುಷರಿಗೆ ಸಮಾನವಾಗಿ ಬದುಕಬೇಕೆಂದು ಬಿ.ಆರ್.ಎಂ.ಪಿ.ಸಿ.ಶಾಲೆಯ ಪ್ರಾಂಶುಪಾಲರಾದ ಪೂರ್ಣೇಶ್ವರಿ ಭಟ್‌ಕರೆನೀಡಿದರು.ಇವರು ಶ್ರೀ ವೆಂಕಟರಮಣಸ್ವಾಮೀ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಎಸ್.ವಿ.ಎಸ್.ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಡಿ.ಮಂಚಿ ಮಾತನಾಡಿ ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರು ಸಮಪಾಲು-ಸಮಬಾಳು ಮಾತಿಗೆ ಬದ್ಧರಾಗಿ ಎಲ್ಲಾರಂಗದಲ್ಲೂ ಪ್ರಗತಿಸಾಧಿಸಿ ಸಮಾಜದಲ್ಲಿತಮ್ಮ ಸ್ಥಾನಮಾನದಅಗತ್ಯತೆಯನ್ನು ಸಾಬೀತುಪಡಿಸಬೇಕಾದಅಗತ್ಯವಿದೆ. ಮಹಿಳೆ ಜಾಗೃತಗೊಂಡಾಗ ಸಂಘಟಿತರಾದಾಗಆಕೆಯೂ ಪುರುಷನಿಗೆ ಸಮಾನವಾಗಿ ಬೆಳೆಯಬಹುದೆಂದು ಹೇಳಿದರು.
ವೇದಿಕೆಯಲ್ಲಿಎಸ್.ವಿ.ಎಸ್.ಪದವಿಪೂರ್ವಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಶಶಿಧರ್ ಕೆ, ಎಸ್.ವಿ.ಎಸ್.ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದಶ್ರೀಮತಿ ಚೈತ್ರಾ ಶೆಟ್ಟಿ, ಪೂರ್ವಪ್ರಾಥಮಿಕ ಶಾಲೆಯ ವೀಣಾದೇವಾಡಿಗ ಉಪಸ್ಥಿತರಿದ್ದರು.
ಬಿ.ಸಿ.ಎ.ವಿಭಾಗದ ಮುಖ್ಯಸ್ಥರಾದ ಸಹನಾ ಸ್ವಾಗತಿಸಿ, ಎಸ್.ವಿ.ಎಸ್.ಪದವಿಪೂರ್ವಕಾಲೇಜಿನ ವಾಣಿಜ್ಯಶಾಸ್ತçಉಪನ್ಯಾಸಕಿ ಭವಿತಾ ವಂದಿಸಿದರು. ರಾಲ್ವಿನ್ ಲೋಯ್ಡ್ರೋಡ್ರಿಗಸ್ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ವೀಕ್ಷಿತಾಗಟ್ಟಿ ನಿರೂಪಿಸಿ, ನಿಧಿ ತಂಡದವರು ಪ್ರಾರ್ಥಿಸಿದರು.

