ಮಣಿಪಾಲ್ ಸ್ಕೂಲ್ ಆಫ್ ಕಾಮರ್ಸ್ಆಂಡ್ ಎಕನಾಮಿಕ್ಸ್, ಮಣಿಪಾಲ ಇಲ್ಲಿ ನಡೆದಎರಡು ದಿನಗಳ ರಾಷ್ಟç ಮಟ್ಟದ ವಿಚಾರಗೋಷ್ಟಿಯಲ್ಲಿಶ್ರೀ ಮಹಾವೀರಕಾಲೇಜು, ಮೂಡಬಿದಿರೆಇಲ್ಲಿಯ 14 ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಶೈಕ್ಷಣಿಕ ಸಾಧನೆತೋರಿದ್ದಾರೆ.

ತೃತೀಯ ಬಿಕಾಂ ವಿದ್ಯಾರ್ಥಿಗಳಾದ ಶ್ರೇಯಾಎಸ್ ಶೆಟ್ಟಿ ಹಾಗೂ ಕುಶಾಗ್ರಎಸ್ ಪ್ರಭು ಮಂಡಿಸಿದ ‘ವಿಕಸಿತ ಭಾರತ 2047 ಚೌಕಟ್ಟಿನಲ್ಲಿ ವಲಸೆ ಮಹಿಳೆಯರ ಪಾತ್ರ ಮತ್ತುಅವರ ಸ್ಥಿತಿಗತಿಗಳು’ಎಂಬ ಪ್ರಬಂಧಕ್ಕೆ‘ಅತ್ಯುತ್ತಮ ಪ್ರಬಂಧ ಮಂಡನೆ’ಪ್ರಶಸ್ತಿ ಲಭಿಸಿದೆ. ಹಾಗೆಯೇ ಪ್ರಥಮ ಬಿ.ಎ ವಿದ್ಯಾರ್ಥಿನಿ ನೆಬಿಸತ್‌ರಿಹಾನ ಈ ವಿಚಾರಗೋಷ್ಟಿಯ ಬಗ್ಗೆ ನೀಡಿದ ಪ್ರತಿಕ್ರಿಯೆಗೆ‘ಅತ್ಯುತ್ತಮ ಪ್ರತಿಕ್ರಿಯೆಪ್ರಶಸ್ತಿ’ ಲಭಿಸಿತು.

