ಬಚ್ಚಪ್ಪು ಮೇಲ್ಜಡ್ಡು ಕ್ಷೇತ್ರದಲ್ಲಿ ಚಂಡಿಕಾಯಾಗ, ನೇಮೋತ್ಸವ

0
5

ಹೆಬ್ರಿ : ಇಲ್ಲಿನ ಬಚ್ಚಪ್ಪು ಮೇಲ್ಜಡ್ಡು ಶ್ರೀ ಧೂಮಾವತೀ ಸನ್ನಿಧಿಯಲ್ಲಿ ಅರ್ಚಕ ವೇ.ಮೂ. ರಮೇಶ ಸೋಮಯಾಜಿ ಇವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಚಕ್ರಾಬ್ಬ ಮಂಡಲಪೂಜೆ, ಯಥಾಶಕ್ತಿವೇದ ಸರ್ವಮೂಲಪಾರಾಯಣ, ಚಂಡಿಕಾಹೋಮ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಶ್ರೀ ಧೂಮಾವತೀ ದೇವಿಗೆ ಪಂಚವಿಂಶತಿದ್ರವ್ಯ ಕಲಶ ಸ್ಥಾಪನೆ, ಪ್ರಧಾನ ಹೋಮ, ಕಲಶಾಭಿಷೇಕ, ಪರಿವಾರ ಭೈರವ ಗುಳಿಕಗಳಿಗೆ ನವಕಪ್ರಧಾನ, ಬ್ರಹ್ಮಸ್ಥಾನ, ನಾಗಸ್ಥಾನ, ಸ್ಥಾನಗಳಲ್ಲಿ ನವಕಪ್ರಧಾನ, ಮಲಸಾವಿರ ಸ್ಥಾನದಲ್ಲಿ ಪನಿವಾರಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಯಕ್ಷಗಾನ ತಾಳಮದ್ದಳೆ, ಭರತನಾಟ್ಯ ರಾತ್ರಿ ದರ್ಶನ ಸೇವೆ, ಶ್ರೀ ನಾಗದೇವರಿಗೆ ಹಾಲಿಟ್ಟು ಸೇವೆ, ಶ್ರೀ ಬ್ರಹ್ಮದೇವರಿಗೆ ಢಕ್ಕೆಬಲಿ ಸೇವೆ, ಶ್ರೀ ಧೂಮಾವತಿ ನೇಮೋತ್ಸವ, ಹರಕೆ ಕೋಲ ಇತ್ಯಾದಿ ಕಾರ್ಯಕ್ರಮಗಳು ವೇದಮೂರ್ತಿ ವಿದ್ವಾನ್ ಮಹೇಂದ್ರ ಸೋಮಯಾಜಿ ಇವರ ಸಹಕಾರದಲ್ಲಿ, ಸ್ಥಳವಂದಿಕ ಮಾಡಿಗೆ ಶಿವರಾಮ ಹೆಗ್ಡೆ ಸಮ್ಮುಖದಲ್ಲಿ ಮಾ.9 ರಂದು ನಡೆಯಿತು.

ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಅರ್ಚಕ ನಾಗರಾಜ ಜೋಯಿಸ್, ಶಿಕ್ಷಕ ನರಸಿಂಹ ಸೋಮಯಾಜಿ ಮತ್ತಿತರರು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು. ಊರ ಪರವೂರ ಸಾವಿರಾರು ಗ್ರಾಮಸ್ಥರು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.

LEAVE A REPLY

Please enter your comment!
Please enter your name here