ದಾವಣಗೆರೆ : ಕೇರಳ ರಾಜ್ಯದ ಕಾಸರಗೋಡಿನಲ್ಲಿ ವಿವಿಧ ಆಧ್ಯಾತ್ಮಿಕ ಪರಂಪರೆಯ ಶಿಲ್ಪ ವೈಭವದ ಐತಿಹಾಸಿಕ ದಾಖಲೆ ಇದೆ. ಪ್ರತೀ ದೇವಸ್ಥಾನಗಳಲ್ಲಿ ದರ್ಶನ ಮಾಡುತ್ತಿರುವ ಸಾರ್ವಜನಿಕರು ಮಾನವನ ಜೀವನಕ್ಕೆ ಸಾರ್ಥಕತೆ ಬರುತ್ತದೆ. ಕಾಸರಗೋಡಿನ ದೇವಾಲಯಗಳಲ್ಲಿ ಪ್ರಸಿದ್ಧ ನಾಗರಿಕತೆಗಳ ಪ್ರತಿಫಲನವಿದೆ ಎಂದು ಕಾಸರಗೋಡಿನ ಸರ್ಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಬಾಲಕೃಷ್ಣ ಹೊಸಂಗಡಿ ತಮ್ಮ ಮನದಾಳದ ಮಾತುಗಳನ್ನು ವಿಚಾರ ಸಂಕಿರಣ ನಡೆಸಿಕೊಟ್ಟು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ವತಿಯಿಂದ ಇತ್ತೀಚಿಗೆ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ “ಸಾಕ್ಷಾತ್ಕಾರ’ ಮನೆಯಲ್ಲಿ ಧಾರ್ಮಿಕ ಸಾಹಿತ್ಯ ಅಭಿಯಾನ ಅವರು ನಡೆಸಿಕೊಟ್ಟರು.
ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಗೌರವ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್ ಅಧ್ಯಕ್ಷತೆ ವಹಿಸಿ ಈ ಪುಣ್ಯಭೂಮಿಯಲ್ಲಿ ದೈವಕ್ಷೇತ್ರ ದೇವಾಲಯಗಳು ಒಂದು ದಾಖಲೆ. ಮೊಟ್ಟ ಮೊದಲು ಭಾರತದಲ್ಲಿ ರಾಷ್ಟçಕವಿ ಮಂಜೇಶ್ವರ ಗೋವಿಂದ ಪೈಯವರ ಮನೆ ದೇವಾಲಯ ಇದ್ದಾಗಿದೆ ಎಂದರು.
ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಕಲಾಕುಂಚ ಗೌರವ ಅಧ್ಯಕ್ಷರು ನೂತನ ಅಧ್ಯಕ್ಷರಾದ ರಾಧಾಮಣಿ ಉಪಸ್ಥಿತರಿದ್ದರು. ದಿವ್ಯಾ ಚಂದನ ಕಾರಂತ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಅಪರೂಪದ ಸಮಾರಂಭಕ್ಕೆ ಕಾರ್ತಿಕ್ ಪಡ್ರೆ ಸ್ವಾಗತಿಸಿದರು. ವೇದಾಂತ ಕಾರಂತ್, ಪ್ರಣವ್ ಇವರಿಬ್ಬರು ಆಧ್ಯಾತ್ಮಿಕ ಹಾಡುಗಳೊಂದಿಗೆ ಸಮಾರಂಭಕ್ಕೆ ಮೆರಗು ತಂದರು. ರಾಜಾರಾಮ್‌ರಾವ್ ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಜಯಲಕ್ಷ್ಮಿ ರಾಮಚಂದ್ರ ಹೊಳ್ಳ ವಂದಿಸಿದರು.

