ಕಾರ್ಕಳ : ಕಾರ್ಕಳ : ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಹಾಗೂ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಇದರ ಜಂಟಿ ಆಶ್ರಯದಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಜರಗಿತು.
ಸಂಪನ್ಮೂಲ ವ್ಯಕ್ತಿ ಗಳಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾರ್ಕಳ ಇದರ ಸಂಚಾಲಕಿ ರಾಜಯೋಗಿನಿ ಬ್ರಹ್ಮ ಕುಮಾರಿ ವಿಜಯಲಕ್ಷ್ಮಿ ಯವರು ತಮ್ಮ ಮಾತಿನಲ್ಲಿ ಮಹಿಳಾ ಸಬಲೀಕರಣ ಪುರಷರ ವಿರುದ್ಧ ಸ್ಪರ್ಧೆಯಲ್ಲ, ಮಹಿಳೆಯರು ತಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸಬೇಕು, ತಮ್ಮ ಅಂತರಿಕ ಸೌಂದರ್ಯ ವ್ಯಕ್ತಿತ್ವ ಬೆಳವಣಿಗೆ ಯತ್ತ ಗಮನ ಹರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗೀತಾ ಜಿ ವಹಿಸಿದ್ದರು. ಮಹಿಳಾ ಸಬಲೀಕರಣದ ನಿರ್ದೇಶಕಿ ವಿನುತಾ ಕಾಮತ್ ಸ್ವಾಗತಿಸಿ ದರು. ಕುಮಾರಿ ಸುಚಿತ್ರ ವಂದಿಸಿದರು. ಕುಮಾರಿ ಮಂಜುಳಾ ಕಾರ್ಯಕ್ರಮ ನಿರ್ದೇಸಿದರು.

