ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ವಿಟ್ಲ ತಾಲೂಕಿನ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮುಡಿಪು ವಲಯದ ಮುಡಿಪು ಸರಕಾರಿ ಶಾಲೆಯಲ್ಲಿ ನಡೆದ 3 ತಿಂಗಳ ಟ್ಯೂಷನ್ ಕ್ಲಾಸ್ ಸಮಾರೋಪವನ್ನು ವಿನೋದ್ ಪಜೀರ್ ಒಕ್ಕೂಟದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಶಾಲಾ ಪ್ರಾಂಶುಪಾಲರಾದ ಪ್ರಾನ್ಸಿಸ್ರವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಸವಲತ್ತು ಕಡಿಮೆ ಇರುವ ಇಂತಹ ಸಂಧರ್ಭದಲ್ಲಿ ಈ ಕಾರ್ಯಕ್ರಮ ವನ್ನು ನಮ್ಮ ಶಾಲೆಯಲ್ಲಿ ಆಯೋಜನೆ ಮಾಡಿರುವುದು ಖುಷಿಯ ವಿಚಾರ ಇದರಿಂದ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಹಕಾರಿಯಾಗಿದೆ ಶಾಲೆಯ ಪರವಾಗಿ ಧನ್ಯವಾದ ಸಲ್ಲಿಸಿದರು. ಟ್ಯೂಷನ್ ನೀಡಿದ ಶಿಕ್ಷಕಿ ಬಿಂದ್ಯ ಈ ಕಾರ್ಯಕ್ರಮಗಳಿಂದ ಟ್ಯೂಷನ್ ಕೊಡಲು ಹುಮ್ಮಸ್ಸು ಹಾಗೂ ಪ್ರೇರಣೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷರು ಪೂಜ್ಯ ಖಾವಂದರು ಹಾಗೂ ಮಾತೃ ಶ್ರೀ ಅಮ್ಮನವರು ಇಂತಹ ಹತ್ತು ಹಲವಾರು ಕಾರ್ಯಕ್ರಮ ನಡೆಸುತ್ತಿದ್ದು ಗ್ರಾಮೀಣ ಪ್ರದೇಶದ ಮಕ್ಕಳು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಧಿಕಾರಿ ಸ್ವಾಗತಿಸಿ , ಸೇವಾಪ್ರತಿನಿಧಿ ಧನ್ಯವಾದ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

