ಮೂಡುಬಿದಿರೆ : ಏ.04 – 05ರವರೆಗೆ ಶ್ರೀ ಸತ್ಯ ಸಾರಮಾನಿ ದೈವಗಳ ಪಾತ್ರಿದರ್ಶನ ಮತ್ತು ಹಲೇರ ಪಂಜುರ್ಲಿ ಬೆಲಟಂಗರ ಮತ್ತು ತಂಗಡಿ ಹಾಗೂ ಗುಳಿಗ ದೈವಗಳ 37ನೇ ವರ್ಷದ ನೇಮೋತ್ಸವ

0
126

ಮೂಡುಬಿದಿರೆ : ಶ್ರೀ ಸತ್ಯ ಸಾರಮಣಿ ಸೇವಾ ಸಮಿತಿ (ರಿ.)ಅಲಂಗಾರು, ಏ.04 – 05ರವರೆಗೆ ಶ್ರೀ ಸತ್ಯ ಸಾರಮಾನಿ ದೈವಗಳ ಪಾತ್ರಿದರ್ಶನ ಮತ್ತು ಹಲೇರ ಪಂಜುರ್ಲಿ ಬೆಲಟಜ್ಜ ಮತ್ತು ತಂಗಡಿ ಕೊರತಿ ಹಾಗೂ ಗುಳಿಗ ದೈವಗಳ 37ನೇ ವರ್ಷದ ನೇಮೋತ್ಸವ ಜರಗಲಿದೆ.

ಕರ್ಯಕ್ರಮಗಳ ವಿವರ

ಏ.04 ಶನಿವಾರದಂದು ಸಂಜೆ ಗಂಟೆ 4-00ರಿಂದ ಗಣಹೋಮ ಮತ್ತು ದೈವಗಳ ಶುದ್ದೀಕರಣ ನಡೆಯಲಿದೆ. ಸಂಜೆ ಗಂಟೆ 6-00ಕ್ಕೆ ಭಂಡಾರ ತರುವುದು,ಸಂಜೆ ಗಂಟೆ 8-00ರಿಂದ ಗಂಟೆ 10-00ರವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9-00ರಿಂದ ಶ್ರೀ ಸತ್ಯಸಾರಮನಿ ದೈವಗಳ ಪಾತ್ರಿದರ್ಶನ ಹಾಗೂ ರಾತ್ರಿ ಗಂಟೆ 11-00ರಿಂದ ಧರ್ಮದೈವ ಹಲೇರ ಪಂಜುರ್ಲಿ ದೈವದ ಗಗ್ಗರ ಸೇವೆ ನಡೆಯಲಿರುವುದು .

ಏ.05 ಆದಿತ್ಯವಾರದಂದು ಬೆಳಿಗ್ಗೆ ಗಂಟೆ 4-00ಕ್ಕೆ ದೈವರಾಜ ಬೆಲಟಂಗರ ಮತ್ತು ತಂಗಡಿ ಕೊರತಿ ದೈವಗಳ ಗಗ್ಗರ ಸೇವೆ ಹಾಗೂ ಬೆಳಿಗ್ಗೆ 8-00ಕ್ಕೆ ಕ್ಷೇತ್ರಪಾಲ ಗುಳಿಗ ದೈವದ ಗಗ್ಗರ ಸೇವೆ ನಡೆಯಲಿರುವುದು.

LEAVE A REPLY

Please enter your comment!
Please enter your name here