ಮೇ 3ರಂದು ಕಸಾಪ ಉಡುಪಿ ತಾಲೂಕು ಸಮ್ಮೇಳನ

0
5

ಉಡುಪಿ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಭೀಷ್ಮೋತ್ಸವ ಮೇ 3ರಂದು ಹಿರಿಯ ಕಲಾವಿದ ಡಾ. ಭಾಸ್ಕರಾನಂದ ಕುಮಾರ್​ ಸಮ್ಮೇಳನಾಧ್ಯಕ್ಷತೆಯಲ್ಲಿ ಯಕ್ಷಗಾನ ಕಲಾರಂಗದ ಐ ವೈ ಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 8.30ಕ್ಕೆ ಶಾರದಾ ಮಂಟಪದಿಂದ ಮೆರವಣಿಗೆ ಪ್ರಾರಂಭವಾಗುತ್ತದೆ. ನಂತರ ಧ್ವಜಾರೋಹಣ ನೆರವೇರಲಿದೆ. ಸಾಹಿತಿ ರಾಮದಾಸ್​ ನೆನಪಿನ ಪುಸ್ತಕ ಮಳಿಗೆ, ಗಮಕ ಸೌರಭ, ಚಿತ್ರ ಕಲಾವಿದರಾದ ಆಸ್ಟ್ರೊಮೋಹನ್​ ಹಾಗೂ ಜನಾರ್ದನ ಕೊಡವೂರು ಸಂಪಾದಿತ ‘ಚಿತ್ರಮಯ ಉಡುಪಿ’ ಪ್ರದರ್ಶನ ಹಾಗೂ ನಿತ್ಯಾನಂದ ನಾಯಕ್​ ಅವರ ಮುರಲ್​ ಕಲಾಕೃತಿಗಳ ಪ್ರದರ್ಶನದ ಬೆಳಗ್ಗೆ 10 ಗಂಟೆಗೆ ಆಳ್ವಾಸ್​ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್​ ಆಳ್ವ ಸಮ್ಮೇಳನ ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರದ ಸಾಧಕರಾದ ತಿಲಕನಾಥ್​ ಮಂಜೇಶ್ವರ , ಗೋಪಾಲ್​ ಭಟ್​ ಎಂ, ವಿಮಲಾ ಚಂದ್ರಶೇಖರ್​, ಮರವಂತೆ ನಾಗರಾಜ್​ ಹೆಬ್ಬಾರ್​, ಕೆ.ರಂಜನ್​ , ಲಕ್ಷಿ$್ಮ ಹರಿಶ್ಚಂದ್ರ, ಅ. ರಾ. ಪ್ರಭಾಕರ್​ ಪೂಜಾರಿ, ವಿಘ್ನೇಶ್ವರ ಅಡಿಗ, ಪಿ.ಎಂ. ವೇಣು ಗೋಪಾಲ್​ ಹೆಬ್ಬಾರ್​, ಶ್ರೀಕಾಂತ್​ ಭಟ್​, ವಿದ್ಯಾಲತಾ ಯು. ಶೆಟ್ಟಿ ಇವರಿಗೆ ಕಸಾಪ ಉಡುಪಿ ತಾಲೂಕು ಗೌರವ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು. ಉಡುಪಿ ತಾಲೂಕಿನ ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ಸುಮಾರು 50 ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. 12 ಗಂಟೆಗೆ ಬಹುಮುಖಿ ಕನ್ನಡ ಕವಿ ಗೋಷ್ಠಿ ನಡೆಯಲಿದೆ. 1.15ಕ್ಕೆ ‘ನೃತ್ಯ ಸಿಂಚನ ‘ ಕಾರ್ಯಕ್ರಮ, ನಂತರ ಸುಹಾಸಂ ಅಧ್ಯೆ ಸಂಧ್ಯಾ ಶೆಣೈ ಉಡುಪಿ ಇವರಿಂದ ಹಾಸ್ಯ ಸಮಯ ‘ಆಪ್ತಮಿತ್ರರ ಕಚಗುಳಿ’ ನಡೆಯಲಿದೆ. ಮಧ್ಯಾಹ್ನ 3:35 ಕ್ಕೆ ಸಮ್ಮೇಳನಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್​ ಅವರೊಂದಿಗೆ ಮುಖಾಮುಖಿ ಚರ್ಚೆ ನಡೆಯಲಿದೆ. ಬನ್ನಂಜೆ ಸಂಜೀವ ಸುವರ್ಣ, ಮುರಳಿ ಕಡೆಕಾರ್​, ಉದ್ಯಾವರ ನಾಗೇಶ್​, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಭಾಗವಹಿಸಲಿದ್ದಾರೆ.
ಸಮಾರೋಪ
ಸಾಯಂಕಾಲ 4:30 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ. ಗಣನಾಥ್​ ಶೆಟ್ಟಿ ಎಕ್ಕಾರ್​ ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 23 ಮಂದಿ ಗಣ್ಯರನ್ನು ಮತ್ತು 5 ಸಂಘ ಸಂಸ್ಥೆಗಳನ್ನು ಗುರುತಿಸಿ ಗೌರವಿಸಲಾಗುವುದು.
ಸಂಜೆ 6 ಗಂಟೆಗೆ ರಾಜೇಶ್​ ಭಟ್​ ಪಣಿಯಾಡಿ ಅವರ ನಿರ್ದೇಶನದ ‘ಕತ್ತಲೆ ರಾಜ್ಯದ ಮರ್ಕಟ ರಾಜ ‘ ಎಂಬ ಮಕ್ಕಳನಾಟಕ ಪ್ರದರ್ಶನಕೊಳ್ಳಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕ ಸಾ ಪ ಉಡುಪಿ ತಾಲೂಕು ಗೌರವ ಸಲಹೆಗಾರ ವಿಶ್ವನಾಥ್​ ಶೆಣೈ, ಗೌರವ ಕಾರ್ಯದರ್ಶಿ ರಂಜಿನಿ ವಸಂತ್​, ಸ್ವಾಗತ ಸಮಿತಿ ಕಾರ್ಯದರ್ಶಿ ಸತೀಶ್​ ಕೊಡವೂರು, ಕಾನೂನು ಸಲಹೆಗಾರ ವಿನಯ್​ ಆಚಾರ್ಯ ಮುಂಡ್ಕೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here