ಹವ್ಯಕ ಸಭಾ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 15-03-2026ನೇ ಭಾನುವಾರ, ಶ್ರೀ ಭಾರತಿ ಕಾಲೇಜು ನಂತೂರು ಇಲ್ಲಿ ಬೆಳಿಗ್ಗೆ ೯ ರಿಂದ ಅಪರಾಹ್ನ 1 ದ ವರೆಗೆ ರಕ್ತದಾನ ಶಿಬಿರ ಜರುಗಿತು.
ಪೋಲಿಸ್ ಇಲಾಖೆಯ ಶ್ರೀ ಬಾಲಕೃಷ್ಣ ಭಟ್ ಕೊಂಚಾಡಿ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಚೂಂತಾರು ಸರೋಜಿನಿ ಪ್ರತಿಷ್ಟಾನದ ಕಾರ್ಯದರ್ಶಿ ಡಾ ಮುರಲೀ ಮೋಹನ್ ಚೂಂತಾರು ಮಾತನಾಡಿ ರಕ್ತದಾನ ಅತ್ಯಂತ ಶ್ರೇಷ್ಟ ದಾನ.ಅದಕ್ಕಿಂತ ಮಿಗಿಲಾದ ದಾನ ಇನ್ನೊಂದಿಲ್ಲ.ನಿರಂತರವಾಗಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದಲ್ಲಿ ರಕ್ತದ ಕೊರತೆ ಉಂಟಾಗದು ಎಂದು ತಿಳಿಸಿದರು.
ಹವ್ಯಕ ಸಭಾದ ಕಾರ್ಯದರ್ಶಿ ಸೌಜನ್ಯ ಸ್ವಾಗತಿಸಿದರು. ಹವ್ಯಕ ಸಮಾಜ ಸವಿತಾ,ದಂತವೈದ್ಯೆ ಡಾ ರಾಜಶ್ರೀ, ಮಕ್ಕಳ ತಜ್ಞ ಡಾ ಸದಾಶಿವರಾವ್,ತೇಜಸ್ವಿನಿ ಆಸ್ಪತ್ರೆಯ ಡಾ ಗಣೇಶ್,ಲಯನ್ಸ್ ಕ್ಲಬ್ ನ ಶ್ರೀ ಎ ಜಿ ಶರ್ಮ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಮಾರು ಹದಿನೈದು ಮಂದಿ ರಕ್ತದಾನ ಮಾಡಿದರು.ತೇಜಸ್ವಿನಿ ಆಸ್ಪತ್ರೆ ವೈದ್ಯರು ಶಿಬಿರ ನಡೆಸಿ ಕೊಟ್ಟರು.

