ಹೆಬ್ರಿ : ಮುದ್ರಾಡಿ ಗ್ರಾಮದಲ್ಲಿ ಹುಟ್ಟಿ ಬೆಳೆದು, ಕನ್ನಡ ಮಧ್ಯಮ ಶಾಲೆಗಳಲ್ಲಿ ಕಲಿತು, ಉನ್ನತ ವ್ಯಾಸಂಗ ಮಾಡಿ, ಉನ್ನತ ರ‌್ಯಾಂಕ್ ಪಡೆದು ತೇರ್ಗಡೆ ಹೊಂದಿ,ಇದೀಗ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವು ಹೆಬ್ರಿ ಬಿ. ಜೆ. ಪಿ.ಶಕ್ತಿ ಕೇಂದ್ರ ವತಿಯಿಂದ ಮುದ್ರಾಡಿ ಸಮುದಾಯ ಭವನದಲ್ಲಿ ಮಾ 15 ರಂದು ಜರಗಿತು.
ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ ಎ. ಬಿ. ಎಡ್ ಪದವಿ ಪಡೆದು ದ್ವಿತೀಯ ರ‌್ಯಾಂಕ್ ಅಲ್ಲಿ ತೇರ್ಗಡೆ ಹೊಂದಿದ ಮುದ್ರಾಡಿಯ ಕೃಷ್ಣ ಶೆಟ್ಟಿಗಾರ್, ಪೂರ್ಣಿಮ ದಂಪತಿಯ ಪ್ರಥಮ ಪುತ್ರಿ ಶಿವಾನಿ,ಮತ್ತೊಬ್ಬಳು ಉಪ್ಪಳ ಮಲ್ಲಿಕಾರ್ಜುನ, ಗುಲಾಬಿ ದಂಪತಿಗಳ ಮಗಳಾದ ರಮ್ಯ ರವರು ಎಂ. ಎ. ಬಿ ಎಡ್ ನಲ್ಲಿ ಪ್ರಥಮ ರ‌್ಯಾಂಕ್ ಗಳಿಸಿ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದು ಸಾಧನೆ ಮಾಡಿದ ಇಬ್ಬರನ್ನು ಸನ್ಮಾನಿಸಲಾಯಿತು.
ಹೆಬ್ರಿ ಬಿ.ಜೆ.ಪಿ ಶಕ್ತಿ ಕೇಂದ್ರ ವತಿಯಿಂದ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಭಾ ಅಧ್ಯಕ್ಷರು ಹಾಗೂ ಗಣ್ಯರು ಸನ್ಮಾನಿಸಿ ಅಭಿನಂದಿಸಿದರು. ಇಬ್ಬರು ಸಾಧಕರೂ ಅಭಿನಂದನೆಗೆ ಕೃತಜ್ಞತೆ ಸಲ್ಲಿಸುತ್ತಾ ಮಾತನಾಡಿ ತಮ್ಮ ತಂದೆ, ತಾಯಿಯವರ ಪ್ರೋತ್ಸಾಹ, ಭೋಧಕರು ಕಲಿಕೆಗೆ ನೀಡಿದ ಮಾರ್ಗದರ್ಶನ, ನಮ್ಮೀ ಸಾಧನೆಗೆ ನೆರವಾಯಿತು ಎಂದರು.
ಪಕ್ಷದ ಮುಖಂಡರಾದ ಗಣಪತಿ ಎಂ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಕ್ತಿ ಕೇಂದ್ರದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ನಾಯಕ್ ರವರು ಮಾತನಾಡಿ ಕನ್ನಡ ಶಾಲೆಯಲ್ಲಿ ಕಲಿತು ಕಷ್ಟದಲ್ಲೂ ಉನ್ನತ ವ್ಯಾಸಂಗಮಾಡಿ ಛಲ ಒಂದಿದ್ದರೆ ಯಾವುದೇ ಶಿಕ್ಷಣಕ್ಕೆ ಅಡ್ಡಿಯಾಗುವುದ್ದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಇಲ್ಲಿಯ ತಂಡ ಒಳ್ಳೆಯ ಕೆಲಸ ಮಾಡಿ ಶಿಕ್ಷಣದಲ್ಲಿ ಸಾಧನೆ ಮಾಡಿದ ಇಬ್ಬರನ್ನು ಅಭಿನಂದಿಸುವ ಕಾರ್ಯ ಮಾಡಿದೆ ಎಂದರು.
ಬಿಜೆಪಿ ಮಂಡಲ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ, ಮುದ್ರಾಡಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಉಪಾಧ್ಯಕ್ಷೆ ರಮ್ಯಕಾಂತಿ, ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ ಮುದ್ರಾಡಿ ಖ್ಯಾತ ವೈದ್ಯರಾದ ಎಂ. ಎಸ್. ರಾವ್ ರವರು ಇಬ್ಬರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ರಮೇಶ್ ಕುಮಾರ್ ಶಿವಪುರ, ಮುದ್ರಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ವಸಂತಿ ಪೂಜಾರಿ, ನಿಕಟಪೂರ್ವ ಸದಸ್ಯರಾದ ಜಗದೀಶ ಪೂಜಾರಿ ಉಪಸ್ಥಿತರಿದ್ದರು.ಗಣಪತಿ ಎಂ. ಸ್ವಾಗತಿಸಿ ವಂದಿಸಿದರು. ಮುದ್ರಾಡಿ ಬಿ. ಜೆ. ಪಿ. ಸಮಿತಿ ಪದಾಧಿಕಾರಿಗಳು, ಸದಸ್ಯರು, ನಿಕಟಪೂರ್ವ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಸನತ್ ಕುಮಾರ್, ಪೋಷಕರು ಹಾಜರಿದ್ದರು.

