ಗೆಳೆಯರ ಬಳಗ ಬಲ್ಲಂಗುಡೆಲು ವತಿಯಿಂದ ಸಂಭ್ರಮದ ಸ್ವಾತಂತ್ರೋತ್ಸವ ಆಚರಣೆ

0
35

ಮಜಿಬೈಲು : ಗೆಳೆಯರ ಬಳಗ (ರಿ) ಬಲ್ಲಂಗುಡೆಲು ಮಜಿಬೈಲು ವತಿಯಿಂದ 80 ನೇ‌ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಂಘದ ಕಟ್ಟಡದ ಆವರಣದಲ್ಲಿ ಆಚರಿಸಲಾಯಿತು.
ಬಳಗದ ಅಧ್ಯಕ್ಷರಾದ ಕಾರ್ತಿಕ್ ಶೆಟ್ಟಿ ಮಜಿಬೈಲು ಧ್ವಜಾರೋಹಣಗೈದು ಸ್ವಾತಂತ್ರ್ಯೋತ್ಸವದ ಮಾಹಿತಿಯ ಬಗ್ಗೆ ಭಾಷಣ ಮಾಡಿ ಎಲ್ಲಾರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಳಗದ ಗೌರವ ಅಧ್ಯಕ್ಷರಾದ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು,ಮಾಜಿ ಅಧ್ಯಕ್ಷರಾದ ಮಾದವ ಉಳಿಯ,ಪ್ರದಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬಲ್ಲಂಗುಡೆಲು,ಕೋಶಾಧಿಕಾರಿ ಬಶೀರ್ ಮೂಡಂಬೈಲು,ಬಳಗದ ಪದಾಧಿಕಾರಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ಕರಿಬೈಲು, ಕಿರಣ್ ಆಳ್ವ ಪಟ್ಟತ್ತಮೊಗರು,ರಾಜೇಶ್ ಬಲ್ಲಂಗುಡೆಲು,ಸುಂದರ ಕರಿಬೈಲು,ಸೀತರಾಮ ಗಾಣದಮೂಲೆ,ರಂಜೀತ್ ಬಲ್ಲಂಗುಡೆಲು,ಸತೀಶ್ ಶೆಟ್ಟಿ ಕರಿಬೈಲು,ಕೇಶವ ಹೊಸಗದ್ದೆ,ಜಯಕುಮಾರ್ ಕರಿಬೈಲು,ಯತೀಶ್ ಹೊಸಗದ್ದೆ ಹಾಗೂ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಬಳಗದ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬಲ್ಲಂಗುಡೆಲು ಸ್ವಾಗತಿಸಿ ಕೋಶಾಧಿಕಾರಿ ಬಶೀರ್ ಮೂಡಂಬೈಲು ಧನ್ಯವಾದವಿತ್ತರು.ಕಾರ್ಯಕ್ರಮದ ಕೊನೆಗೆ ಅಧ್ಯಕ್ಷರಾರ ಕಾರ್ತಿಕ್ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಲಘು ಉಪಹಾರ ವಿತರಿಸಲಾಯಿತು.