ವಿದ್ಯುತ್ ಪಥದಡಿ ಸಮೃದ್ಧ ಕೃಷಿ : ಸಂಕಷ್ಟದ ನಡುವೆ ಅರಳಲಿ ಹೊಸ ಭರವಸೆ !

0
1


♦️ ಮಂದಾರ ರಾಜೇಶ್ ಭಟ್

​​ಉಡುಪಿಯಿಂದ ಕಾಸರಗೋಡಿಗೆ ಸಾಗುವ 400 ಕೆವಿ ವಿದ್ಯುತ್ ಪ್ರಸರಣ ಲೈನ್ ಕಾಮಗಾರಿಯಿಂದ ಕೃಷಿ ಜಮೀನು ನಾಶವಾಗುತ್ತಿದೆ ಎಂಬ ಆತಂಕ ರೈತರಲ್ಲಿದೆ. ಈ ಆತಂಕವನ್ನು ದೂರ ಮಾಡಲು, ಪರ್ಯಾಯ ಮಾರ್ಗೋಪಾಯಗಳನ್ನು ಹುಡುಕಲು ಮತ್ತು ದಶಕಗಳಿಂದ ಇಂತಹ ವಿದ್ಯುತ್ ಗೋಪುರಗಳ ನಡುವೆಯೇ ಕೃಷಿ ಮಾಡುತ್ತಿರುವ ಜೋಗದ ರೈತರ ನೈಜ ಸ್ಥಿತಿಯನ್ನು ಅರಿಯಲು ‘ಯಶ ಕರ್ನಾಟಕ’ ತಂಡವು ಪತ್ರಕರ್ತ ಹರೀಶ್ ಕೆ ಆದೂರು ನೇತೃತ್ವದಲ್ಲಿ ಅಧ್ಯಯನ ಪ್ರವಾಸ ಹಮ್ಮಿಕೊಂಡಿತ್ತು.

​ ಅಧ್ಯಯನ ಪ್ರವಾಸದ ವಿವರಣೆ

​ಮೂಡುಬಿದಿರೆಯ ಸುಮಾರು 12 ಜನ ಪತ್ರಕರ್ತರ ಮತ್ತು ಮಾಧ್ಯಮ ಮಿತ್ರರ ನಿಯೋಗವು ಜೋಗದ ಜಲವಿದ್ಯುತ್ ಯೋಜನಾ ವ್ಯಾಪ್ತಿಗೆ ಭೇಟಿ ನೀಡಿತು. ಅಲ್ಲಿ ಕಳೆದ 60 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 400 ಕೆವಿ ವಿದ್ಯುತ್ ಲೈನ್‌ಗಳ ಕೆಳಗೆ ಭತ್ತದ ಬೆಳೆ, ಕೆರೆಗಳು ಮತ್ತು ದನಕರುಗಳ ಮೇಯಿಸುವಿಕೆ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿರುವುದನ್ನು ತಂಡವು ಗಮನಿಸಿತು. ತಂತಿ ತುಂಡಾದ ಅಥವಾ ಗೋಪುರ ಬಿದ್ದ ಉದಾಹರಣೆಗಳಿಲ್ಲದಿರುವುದು ಸ್ಥಳೀಯರ ಅನುಭವದಿಂದ ದೃಢಪಟ್ಟಿತು.

​ ತಂತಿ ಕೆಳಗೆ ಬೆಳೆಯಬಹುದಾದ ಬೆಳೆಗಳು

​ವಿದ್ಯುತ್ ತಂತಿ ಹಾದುಹೋಗುವ ಜಾಗದಲ್ಲಿ ಎತ್ತರಕ್ಕೆ ಬೆಳೆಯುವ ತೆಂಗು ಮತ್ತು ಅಡಿಕೆ ಮರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬೆಳೆಗಳಿಗೆ ಅವಕಾಶವಿದೆ

​ ತರಕಾರಿ ಬೆಳೆಗಳು

ನಾಮದ ಸೌತೆ (ಕರಾವಳಿಯಲ್ಲಿ ಹೆಚ್ಚು ಬೇಡಿಕೆ), ಗಡ್ಡೆ-ಗೆಣಸುಗಳು.
​ವಾಣಿಜ್ಯ ಬೆಳೆಗಳು: ಕಾಳುಮೆಣಸು (ಮುಖ್ಯವಾಗಿ ಬುಷ್ ಪೆಪ್ಪರ್), ಕಬ್ಬು, ಜೋಳ.
​ಆಹಾರ ಬೆಳೆ: ಭತ್ತವನ್ನು ಯಾವುದೇ ಆತಂಕವಿಲ್ಲದೆ ಬೆಳೆಯಬಹುದು.
​ಮೇವು: ದನಕರುಗಳಿಗೆ ಬೇಕಾದ ಹಸಿರು ಹುಲ್ಲು ಬೆಳೆಸಲು ಇದು ಸೂಕ್ತ ಜಾಗ.

​ ಬೆಳೆಯುವ ಕ್ರಮ

ಗೋಪುರಗಳ ನಡುವಿನ ಖಾಲಿ ಜಾಗವನ್ನು ಹಸನುಗೊಳಿಸಿ, ಮಣ್ಣಿನ ಗುಣಕ್ಕೆ ತಕ್ಕಂತೆ ಅಲ್ಪಾವಧಿ ಅಥವಾ ಮಧ್ಯಮ ಅವಧಿಯ ಬೆಳೆಗಳನ್ನು ನಾಟಿ ಮಾಡಬಹುದು. ತಂತಿಗಳ ಎತ್ತರವನ್ನು ಗಮನದಲ್ಲಿಟ್ಟುಕೊಂಡು ಕೃಷಿ ಚಟುವಟಿಕೆ ನಡೆಸಬೇಕು.

​ ಅನುಭವಿಗಳ ಮಾತು, ಭರವಸೆಯ ನುಡಿಗಳು

​ಪೂರ್ಣಪ್ರಜ್ಞ ಬೇಳೂರು: “ವಿದ್ಯುತ್ ಯೋಜನೆಗಳಿಂದ ಭೂಮಿ ಕಳೆದುಕೊಂಡೆವು ಎಂದು ಕೈಕಟ್ಟಿ ಕೂರುವ ಬದಲು, ಕೃಷಿಯಲ್ಲಿ ಮೌಲ್ಯವರ್ಧನೆ ಮಾಡುವುದು ಹೇಗೆ ಎಂದು ಯೋಚಿಸಬೇಕು. ಸಂಘಟಿತ ಕೃಷಿಯಿಂದ ಮಾತ್ರ ಆದಾಯ ಹೆಚ್ಚಿಸಲು ಸಾಧ್ಯ.”

​ದುರ್ಗಪ್ಪ (ಸ್ಥಳೀಯ ರೈತ ): “60 ವರ್ಷಗಳಿಂದ ಇಲ್ಲಿ ತಂತಿ ಕೆಳಗೆ ಕೃಷಿ ಮಾಡುತ್ತಿದ್ದೇವೆ, ಮಳೆಗಾಲದಲ್ಲೂ ಯಾವುದೇ ಅನಾಹುತ ನಡೆದಿಲ್ಲ. ಹೆದರುವ ಅಗತ್ಯವಿಲ್ಲ.”

​ ಗಣೇಶ್ (ಕೃಷಿಕ): “ಬುಷ್ ಪೆಪ್ಪರ್ ಮತ್ತು ತರಕಾರಿ ಕೃಷಿಗೆ ಈ ಜಾಗಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು.”

ಚಂದಪ್ಪ ರೈತ : ಕಬ್ಬು ಬೆಳೆಗೆ ಯಾವುದೇ ಸಮಸ್ಯೆ ಇಲ್ಲ

​ ಬದಲಾವಣೆ ಎಂಬುದು ಅನಿವಾರ್ಯ. ಅಭಿವೃದ್ಧಿ ಯೋಜನೆಗಳು ಬಂದಾಗ ಕೃಷಿಕರು ಧೃತಿಗೆಡಬಾರದು . ಲಭ್ಯವಿರುವ ಭೂಮಿಯಲ್ಲೇ ತಾಂತ್ರಿಕತೆ ಮತ್ತು ಹೊಸ ಬೆಳೆಗಳ ಪ್ರಯೋಗ ಮಾಡುವ ಮೂಲಕ ಆ ಭೂಮಿಯನ್ನು ‘ಚಿನ್ನದ ಗಣಿ’ಯನ್ನಾಗಿ ಪರಿವರ್ತಿಸಬಹುದು. ಕೃಷಿಯಲ್ಲಿ ಮೌಲ್ಯವರ್ಧನೆ (Value Addition) ಮಾಡಿದರೆ ಮಾತ್ರ ಮಾರುಕಟ್ಟೆಯಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯ. ಎಂಬುದು ಅನುಭವಿಗಳ ಮಾತು

ಭಿವೃದ್ಧಿಯ ನಡುವೆ ಕೃಷಿಕರ ಬದುಕು ಸಾಧ್ಯವಿದೆ

​ವಿದ್ಯುತ್ ಆಧುನಿಕ ಬದುಕಿನ ಅವಶ್ಯಕತೆ ಎಂಬುದು ಎಷ್ಟು ನಿಜವೋ, ಕೃಷಿ ನಮ್ಮ ಅನ್ನದ ಮೂಲ ಎಂಬುದು ಅಷ್ಟೇ ಸತ್ಯ. ಈ ಎರಡೂ ಒಂದಕ್ಕೊಂದು ಪೂರಕವಾಗಿ ಸಾಗಲು ಸಾಧ್ಯವಿದೆ ಎಂಬುದಕ್ಕೆ ಜೋಗದ ಪರಿಸರವೇ ಸಾಕ್ಷಿ. ವಿದ್ಯುತ್ ತಂತಿಗಳ ಕೆಳಗೆ ಕೃಷಿ ಮಾಡುವುದು ಕೇವಲ ಅನಿವಾರ್ಯತೆಯಲ್ಲ, ಅದೊಂದು ಹೊಸ ರೀತಿಯ ಕೃಷಿ ಅವಕಾಶ. ರೈತರು ವಿಜ್ಞಾನ ಮತ್ತು ಅನುಭವವನ್ನು ಮೇಳೈಸಿಕೊಂಡು ಮುನ್ನಡೆದರೆ, ಬದುಕು ಸಾಧ್ಯ ಎಂದು ಹರೀಶ್ ಆದೂರು ನೇತೃತ್ವದ ಅಧ್ಯಯನ ತಂಡ ಕಂಡುಕೊಂಡ ಸತ್ಯ

ಅಭಿವೃದ್ಧಿಯ ನಡುವೆಯೂ ಹಸಿರು ಸಮೃದ್ಧಿಯನ್ನು ಕಾಪಾಡಿಕೊಳ್ಳಬಹುದು. ಎಂಬುದು ಅಧ್ಯಯನ ಪ್ರವಾಸದಿಂದ ತಿಳಿದು ಬಂದ ಸತ್ಯ

LEAVE A REPLY

Please enter your comment!
Please enter your name here