ರಾಹೆ 169 : ಸಾಣೂರು ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ: ಪೈಪ್ ಲೈನ್ ದುರಸ್ತಿ ಕಾರ್ಯ ಪೂರ್ಣ..!

0
5


ಯುಗಾದಿಯ ದಿನ ಮಾರ್ಚ್ 19 ಗುರುವಾರ 2026 ಮಧ್ಯಾಹ್ನ 12:40 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 169 ಸಾಣೂರು ಶಾಂಭವಿ ಸೇತುವೆ ಬಳಿ ಒಡೆದಿದ್ದ ಪೈಪ್ ಲೈನ್ನ್ನು ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರು ಸರಿಪಡಿಸಿರುತ್ತಾರೆ.

6 ದಿನಗಳಿಂದ ನಿರಂತರ ಧಾರಾಕಾರವಾಗಿ ಕಾಲುವೆಯ ರೀತಿಯಲ್ಲಿ ಹರಿದು ಪೋಲಾಗುತ್ತಿದ್ದ ಕುಡಿಯುವ ನೀರಿಗೆ ಕೊನೆಗೂ ತಡೆ ಬಿದ್ದಂತಾಯಿತು.

ತುರ್ತಾಗಿ ಮಾಡಬೇಕಾದ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ಕಾರ್ಯವನ್ನು ಐದರಿಂದ ಆರು ದಿನ ವಿಳಂಬವಾಗಿ ಮಾಡಿದರೆ ಅದರ ಹೊಣೆಗಾರಿಕೆಯನ್ನು ಸ್ಥಳಿಯ ಪಂಚಾಯತ್ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರೇ ವಹಿಸಿಕೊಳ್ಳಬೇಕು.

.. ಇನ್ನಾದರೂ ಹೆದ್ದಾರಿ ಇಲಾಖೆ ಎಚ್ಚೆತ್ತು ಈ ರೀತಿ ಅಮೂಲ್ಯವಾದ ನೀರು ಹರಿದು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು!?!?

LEAVE A REPLY

Please enter your comment!
Please enter your name here