ಸಮಾಜದ ಶ್ರೇಯೋಭಿವ್ರದ್ಧಿಗೆ ರೋಟರಿ ಸಂಸ್ಥೆಯ ಕೊಡುಗೆ ಅಪಾರ ಮತ್ತು ಅಮೂಲ್ಯ :ರೋ. ಡಾ. ರವಿಶಂಕರ್ ರಾವ್

0
13

ಮಂಗಳೂರು : ಅಂತರಾಷ್ಟಿçÃಯ ರೋಟರಿ ಸಂಸ್ಥೆಯು ವಿಶ್ವದಲ್ಲಿ ಮಾನ್ಯತೆ ಪಡೆದ ಪ್ರಥಮ ಸ್ವಯಂ ಪ್ರೇರಿತ ಸಂಸ್ಥೆಯಾಗಿದ್ದು, ವಿವಿಧ ದೇಶಗಳಲ್ಲಿ ರೋಟರಿ ಸದಸ್ಯರು ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಆರೋಗ್ಯ, ಶಿಕ್ಷಣ, ಆರ್ಥಿಕ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳಾದ ವಸತಿ, ಶುದ್ಧ ಕುಡಿಯುವ ನೀರು, ಶೌಚಾಲಯ ಮತ್ತಿತರ ಗಮನಾರ್ಹ ಸಮಾಜ ಸೇವಾ ಯೋಜನೆಗಳನ್ನು ಹಮ್ಮಿಕೊಂಡು ಸ್ವಹಿತ ಮೀರಿದ ಸೇವೆ ನೀಡಿ ಸಂಸ್ಥೆಗೆ ಗೌರವ ಸಂಪಾದಿಸಿದ್ದಾರೆ ಎಂದು ರೋಟರಿ ವಲಯ ಸಹಾಯಕ ಗವರ್ನರ್‌ರಾದ ರೋ. ಡಾ. ರವಿಶಂಕರ್ ರಾವ್‌ರವರು ಮಾಹಿತಿ ನೀಡಿದ್ದಾರೆ. ಅವರು ರೋಟರಿ ಮಂಗಳೂರು ಸಿಟಿ ಸಂಸ್ಥೆಯು ನಗರದ ಬಿಕರ್ನಕಟ್ಟೆ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಲಲಿತ ಗೀತಾ ಅನಾಥಾಶ್ರಮಕ್ಕೆÀ ಸುಮಾರು 50,000/- ಮೌಲ್ಯದ ರೆಫ್ರಿಜಿರೇಟರ್ (ಶೀತಲ ವಿದ್ಯುತ್ ಯಂತ್ರೋಪಕರಣ) ಮತ್ತು ವಾಷಿಂಗ್ ಮೆಶೀನ್ (ಬಟ್ಟೆ ತೊಳೆಯುವ ವಿದ್ಯುತ್ ಯಂತ್ರೋಪಕರಣ) ವನ್ನು ದಾನದ ರೂಪದಲ್ಲಿ ನೀಡುವ ತಾ: 19.03.2026ರಂದು ಆಶ್ರಮದ ಆವರಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಆಶ್ರಮದ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಮಾಜದ ಶ್ರೇಯೋಭಿವ್ರದ್ಧಿಗೆ ರೋಟರಿ ಸಂಸ್ಥೆಯ ಕೊಡುಗೆ ಅಪಾರ ಮತ್ತು ಅಮೂಲ್ಯ ಎಂದು ನುಡಿದು ರೋಟರಿ ಸಂಸ್ಥೆಯ ಜನಪರ ಸೇವೆಯು ಜನಾರ್ಧನ ಸೇವೆಗೆ ಸಮಾನವೆಂದು ಅಭೀಪ್ರಾಯ ವ್ಯಕ್ತಪಡಿಸಿದರು.

ರೋಟರಿ ಸಂಸ್ಥೆಯ ಸ್ಥಪನಾ ಅದ್ಯಕ್ಷರಾದ ಡಾ. ರಂಜನ್ ರಾವ್ ರವರು ಈ ಯೋಜನೆಯು ನಮ್ಮ ಸಂಸ್ಥೆಯ ಸಮುದಾಯ ಸೇವೆಯ ಅಂಗವಾಗಿದೆ ಎಂದು ಮಾಹಿತಿ ನೀಡಿ ಅನಾಥಾಶ್ರಮದ ಪ್ರಾಮಾಣಿಕ ಸೇವಾ ಕಾರ್ಯವಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಸಂಸ್ಥೆಯ ಅದ್ಯಕ್ಷೆ ರೋ. ಸಜ್ನಾ ಭಾಸ್ಕರ್‌ರವರು ಸ್ವಾಗತಿಸಿದರು. ಸಂಸ್ಥೆಯ ವಲಯ ಪ್ರತಿನಿಧಿ ರೋ. ಪ್ರಾಶಾಂತ್ ರೈ, ರೋ. ಮಂಗಳ ರೈ ಮತ್ತು ಸಂಸ್ಥೆಯ ಸಲಹೆಗಾರ ಹಾಗೂ ಉದ್ಯಮಿ ಪ್ರದೀಪ್ ಮಿಸ್ಕಿತ್ ಉಪಸ್ಥಿತರಿದ್ದರು. ಅನಾಥಾಶ್ರಮದ ಅದ್ಯಕ್ಷೆ ಶ್ರೀಮತಿ ಲಲಿತ ಅವರು ರೋಟರಿ ಸಂಸ್ಥೆಯ ಉದಾರ ಕೊಡುಗೆಗೆ ಕೃತಜ್ಞತೆ ಸಲ್ಲಿಸಿ ನಮ್ಮ ಆಶ್ರಮದಲ್ಲಿ 45 ಅನಾಥ ಪುರುಷರು ಮತ್ತು ಮಹಿಳೆಯರು ನಿವಾಸಿಯಾಗಿದ್ದು ಎಂದು ಮಾಹಿತಿ ನೀಡಿ ಬಳಿಕ ವಂದಿಸಿದರು.

LEAVE A REPLY

Please enter your comment!
Please enter your name here