ವಿಶ್ವ ಕೊಂಕಣಿ ಕೇಂದ್ರದಲ್ಲಿ- “ಪ್ರಸಾದ  ಎಸಳು” ಸಂಪ್ರದಾಯದ ಬಗ್ಗೆ ಚರ್ಚಾ ಗೋಷ್ಠಿ

0
11

ದಿ. 21-03-2026 ವಿಶ್ವ ಕೊಂಕಣಿ ಕೇಂದ್ರದಲ್ಲಿ— ಪ್ರಾಚೀನ ಸಂಪ್ರದಾಯದಂತೆ ಗೋವಾದಲ್ಲಿ ಹೆಚ್ಚು ಪ್ರಚಲಿತವಿರುವ  “ಪ್ರಸಾದ ಎಸಳು” ಎಂಬ ಅಧ್ಯಯನದ ಬಗ್ಗೆ ಪುರೋಹಿತರ  ಮೂಲಕ ಭಕ್ತನು ದೇವರಲ್ಲಿ ಪ್ರಾರ್ಥಿಸಿಕೊಂಡಾಗ ಮೂರ್ತಿ ಅಥವಾ ಪೀಠದಲ್ಲಿ ಹಚ್ಚಿದ ಹೂವಿನ ಎಸಳು ಕೆಳಗೆ ಬೀಳುತ್ತದೆ.  ಈ ಸಂಪ್ರದಾಯವು ತುಂಬಾ ದೈವಿಕ ಪ್ರಜ್ನೆಯಿಂದ ಕೂಡಿದ್ದು ಇಂದು ನಶಿಸಿ ಹೋಗುತ್ತಿದೆ. ಈ ‘ಪ್ರಸಾದ ಎಸಳು’ (ಪ್ರಸಾದ ಪಾಕಳಿ) ದೈವಿಕ ಪರಿಕಲ್ಪನೆಯ ಬಗ್ಗೆ ಮಾನವಿಕಾ ಶಾಸ್ತ್ರದ ಹಿನ್ನಲೆಯಲ್ಲಿ ಸಂಶೋಧನೆ ನಡೆಸುತ್ತಿರುವ ಗೋವಾದ ಡಾ. ಬಾಲಾಜಿ ಶೆಣೈಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ವಿವರಣಾತ್ಮಕ ಸಂಶೋಧನಾ ಅಧ್ಯಯನದ ಚರ್ಚಾ ಗೋಷ್ಠಿಯಲ್ಲಿ  ಧಾರ್ಮಿಕ ಚಟುವಟಿಕೆಯ ಬಗ್ಗೆ ಸಭಿಕರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಾ ವಿವಿಧ ದೇವಾಲಯಗಳಲ್ಲಿ ಹೂವಿನ ಎಸಳುಗಳನ್ನು ಹಚ್ಚುವ ವಿನ್ಯಾಸ ಮತ್ತು ಅರ್ಥವನ್ನು ವಿವರಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ  ಸಿ ಎ ನಂದಗೋಪಾಲ ಶೆಣೈಯವರು ಸ್ವಾಗತಿಸಿದರು.  ಕಾಯ್ರಕ್ರಮದಲ್ಲಿ ಹಿರಿಯರಾದ ಪಯ್ಯನೂರು ರಮೇಶ ಪೈ, ಸಿ.ಎ. ಜಯಂತ ಶೆಣೈ ನಗರ್, ಎಮ್ ಗಣೇಶ್ ಭಟ್, ವಸಂತ ಶೆಣೈ, ಸಿ. ಎ. ಎಮ್ ಎನ್ ಪೈ, ಪ್ರೊ ಪ್ರಕಾಶ ಮಲ್ಯ, ಅನ್ನು ಮಂಗಳೂರು, ಸ್ಥಳೀಯ ದೇವಸ್ಥಾನದ ಪ್ರತಿನಿಧಿಗಳು ಹಾಗೂ ಇತರ ಗಣ್ಯರು ಆಸಕ್ತ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ಸುಚಿತ್ರಾ ಎಸ್ ಶೆಣೈ ಕಾರ್ಯಕ್ರಮ ನಿರೂಪಿಸಿ ಅಧ್ಯಯನ ಯೋಜನೆಯ ಸಂಶೋಧಕರನ್ನು ಪರಿಚಯಿಸಿದರು.  ಕೇಂದ್ರದ ಸಿ ಎ.ಒ ಡಾ ಬಿ ದೇವದಾಸ ಪೈ ವಂದಿಸಿದರು.ಈ ಸಂಧರ್ಭದಲ್ಲಿ  ಸಂಶೋಧಕ ಗೋವಾದ ಡಾ. ಬಾಲಾಜಿ ಶೆಣೈರವರನ್ನು ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here