ಕೆರ್ಜಾಡಿ ಗರೋಡಿ ಬ್ರಹ್ಮ ಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0
1

ಹೆಬ್ರಿ : ಕೆರ್ಜಾಡಿ ಶ್ರೀ ಬ್ರಹ್ಮ ಬೈದರ್ಕಳ, ಶಿವರಾಯ ಗರೋಡಿ ಮತ್ತು ಸಪರಿವಾರ ದೈವಗಳ ನೂತನ ಗರ್ಭಗುಡಿಯ ಲೋಕಾರ್ಪಣೆ ಮತ್ತು ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮಾ. 23 ರಂದು ಗರೋಡಿ ವಠಾರದಲ್ಲಿ ನಡೆಯಿತು.

ಗರೋಡಿಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಯಾನಂದ ಆರ್. ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಪುರಾತನ ಇತಿಹಾಸ ಹೊಂದಿರುವ ಗರೋಡಿಯ ಜೀರ್ಣೋದ್ದಾರ ಕಾರ್ಯಗಳಲ್ಲಿ ಗ್ರಾಮದ ಪ್ರತಿಯೊಬ್ಬರು ಕೈ ಜೋಡಿಸಬೇಕು ಈ ಪುಣ್ಯ ಕಾರ್ಯಕ್ಕೆ ಭಕ್ತರ ತನು ಮನ ಧನದ ಸಹಕಾರ ಬೇಕಾಗಿದೆ ಎಂದರು.

ತಂತ್ರಿಗಳಾದ ವೇದಮೂರ್ತಿ ಶ್ರೀ ಸದಾಶಿವ ಭಟ್ ಬೆಳಂಜೆ ಮತ್ತು ವೇದಮೂರ್ತಿ ಶ್ರೀ ಶ್ರೀನಿವಾಸ ಬಾಯರಿ ಬೆಪ್ದೆ ಇವರ ಮಾರ್ಗದರ್ಶನದಲ್ಲಿ ಬ್ರಹ್ಮಬೈದರ್ಕಳ, ಶಿವರಾಯ ಶಿಲಾಮಯ ಹಾಗೂ ಸಪರಿವಾರ ದೈವಗಳ ನೂತನ ಗರ್ಭಗುಡಿಯ ಕೆಲಸಕಾರ್ಯಗಳು ಭರದಿಂದ ಸಾಗುತ್ತಿದ್ದು, ಪುನರ್ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವವು ಏಪ್ರಿಲ್ 10 ರಿಂದ ಎ.12 ರ ತನಕ ವಿಜೃಂಭಣೆಯಿಂದ ನಡೆಯಲಿದೆ, ಜೀರ್ಣೋದ್ದಾರ ಸಮಿತಿಯೊಂದಿಗೆ ವಿವಿಧ ಉಪಸಮತಿಗಳನ್ನು ರಚಿಸಿದ್ದು ಈಗಾಗಲೇ ಉಪಸಮಿತಿಗಳು ಕಾರ್ಯಪ್ರವೃತ್ತವಾಗಿವೆ.

ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ವಿಜಯ್ ಕುಮಾರ್ ಶೆಟ್ಟಿ ಮಡಾಮಕ್ಕಿ, ಆಡಳಿತ ಸಮಿತಿ ಅಧ್ಯಕ್ಷ ಜಯಂತ್ ಕುಮಾರ್ ಹೆಗ್ಡೆ, ಕಾರ್ಯದರ್ಶಿ ಸೀತಾರಾಮ ಪೂಜಾರಿ ಬೆಪ್ದೆ, ಉದಯ ಶೆಟ್ಟಿ,ಚೆನ್ನಯ್ಯ ಹೆಗ್ಡೆ, ಬಾಬು ಶೆಟ್ಟಿ,ಶಿವರಾಮ ಶೆಟ್ಟಿ, ಸುದೀಪ್ ಹೆಗ್ಡೆ,ಗರಡಿ ಪೂಜಾರಿ ದಯಾನಂದ ಪೂಜಾರಿ,ಸತೀಶ್ ಶೆಟ್ಟಿ,ಚಂದ್ರ ನಾಯ್ಕ ಹಾಗೂ ಜೀರ್ಣೋದ್ದಾರ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು, ಗರೋಡಿಯ ಪೂಜಾರಿ ವೃಂದದವರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here