ಮಾರ್ಚ್ 25 ರಿಂದ ಶೀರೂರಿನಲ್ಲಿ ರಾಮನವಮಿ ಉತ್ಸವ

0
24

ಉಡುಪಿ : ಹಿರಿಯಡ್ಕ ಸಮೀಪದ ಜಾಬಾಲಿ ಋಷಿ ತಪೋನಿರತ ಪಾಪಾನಶಿನಿ ಸುವರ್ಣ ನದಿಯ ತಟದಲ್ಲಿರುವ ಶೀರೂರಿನಲ್ಲಿ 72ನೇ ರಾಮನವಮಿ ಮಹೋತ್ಸವ 25 ರಿಂದ 28 ರವರೆಗೆ ನಡೆಯಲಿದೆ ಎಂದು ಶಿರೂರು ಮಠದ ದಿವಾನ್ ಡಾ. ಉದಯ ಸರಳತ್ತಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾರ್ಚ್ 25 ರಂದು ಶ್ರೀ ಪೇಜಾವರ ಮಠಾಧೀಶರಾದ ಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಪಟ್ಟದ ದೇವರ ಪೂಜೆ, 26ರಂದು ಸಂಜೆ ಕಟ್ಟೆ ಪೂಜೆ, 27ರಂದು ಬೆಳಿಗ್ಗೆ 7 ರಿಂದ ಪಂಚಾಮೃತ ಸಹಿತ ವಿಶೇಷ ಪೂಜೆ, ಪವಮಾನ ಕಲಶಾಭಿಶೇಕ, ಶ್ರೀಮುಖ್ಯಪ್ರಾಣ ದೇವರ ಪೂಜೆ, ಪಲ್ಲ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ರಿಂದ ರಾಯಚೂರು ಶೇಷಗಿರಿದಾಸರು ಮತ್ತು ಬಳಗದಿಂದ ದಾಸವಾಣಿ ಕಾರ್ಯಕ್ರಮ ಜರಗಲಿದೆ. ಇದೇ ಸಂದರ್ಭದಲ್ಲಿ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರಿಂದ ಸಂಸ್ಥಾನ ಪೂಜೆ ನಡೆಯಲಿದೆ. ರಾತ್ರಿ 8ಕ್ಕೆ ಗೆಜ್ಜೆಗಿರಿ ಮೇಳದಿಂದ ಶ್ರೀಕೃಷ್ಣ ಲೀಲಾಮೃತ ಯಕ್ಷಗಾನ ಬಯಲಾಟ, ಸಾಯಂಕಾಲ 4.30ಕ್ಕೆ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಆಗಮನ ಮತ್ತು ಪ್ರಾಣದೇವರಿಗೆ ರಂಗಪೂಜೆ, 7ಘಂಟೆಗೆ ಮಹಾರಥೋತ್ಸವ ಹಾಗೂ ಓಲಗಮಂಟಪ ಪೂಜೆ ನಡೆಯಲಿದೆ. 28ರಂದು ಬೆಳಿಗ್ಗೆ 9ಕ್ಕೆ ಹಗಲು ರಥೋತ್ಸವ ಮತ್ತು ಸುವರ್ಣ ನದಿಯಲ್ಲಿ ಅವಭೃತ ಸ್ನಾನ ಹಾಗೂ ಶ್ರೀಕೃಷ್ಣಾಪುರ ಮಠಾಧೀಶರ ಸಂಸ್ಥಾನ ಪೂಜೆ ನಡೆಯಲಿದೆ. ಸಂಜೆ ಮಠದ ದೈವವಾದ ಬೊಬ್ಬರ್ಯ ದೈವದ ಕೋಲ ನಡೆಯಲಿದೆ ಎಂದು ಮಹಿತಿ ನೀಡಿದರು.
ಭಕ್ತರಿಗೆ ಪಾನಕ ವ್ಯವಸ್ಥೆ
ಕೃಷ್ಣನ ದರ್ಶನಕ್ಕೆ ಸರತಿ ಸಾಲಿನಲ್ಲಿ ಕೆಲವು ನಿಯಮಗಳನ್ನು ಮಾರ್ಪಾಡುಗೊಳಿಸಲು ನಿರ್ಧರಿಸಲಾಗಿದೆ. ಭಕ್ತರು ಶ್ರೀಚಂದ್ರಮೌಳೀಶ್ವರ ದೇವಸ್ಥಾನ, ಉಡುಪಿ ಅಧಿದೇವತೆ ಅನಂತೇಶ್ವರ, ಮಧ್ವಾಚಾರ್ಯರು ಅದೃಶ್ಯರಾಗಿ ಇರುವ ಆಚಾರ್ಯರ ಸನ್ನಿಧಾನಕ್ಕೆ ನಮಸ್ಕರಿಸಿ ಆಮೇಲೆ ಶ್ರೀಕೃಷ್ಣದೇವರ ದರ್ಶನಕ್ಕೆ ಮಠಕ್ಕೆ ಪ್ರವೇಶ ಮಾಡಿ ಕೃಷ್ಣ ದರ್ಶನಕ್ಕೆ ಕನಕನ ಕಿಂಡಿಯಿAದಹೊಸ ಸರತಿ ಸಾಲನ್ನು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಅನ್ನದಾನ ಶುಲ್ಕ ಪಾವತಿಸಬೇಕಿದೆ.
ಇದರ ಜೊತೆಗೆ ಪಾರ್ಕಿಂಗ್ ಏರಿಯಾದಿಂದ ನಡೆದುಕೊಂಡು ಬಂದು ಅಲ್ಲಿಂದ ಕಟ್ಟಿಗೆ ರಥದ ಸಮೀ ಮೂರು ಅಥವಾ ಐದು ಸಾಲುಗಳ ಸರತಿಯಿಂದ ದರ್ಶನಕ್ಕೆ ಬರುವ ವ್ಯವಸ್ಥೆಯ ಕಾರ್ಯ ನಡೆಯುತ್ತಿದೆ. ಭಕ್ತರಿಗೆ ಬೇಸಿಗೆಯಲ್ಲಿ ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 12ರವರೆಗೆ ನಿಂಬೆಹಣ್ಣು, ಕಬ್ಬು , ಇನ್ನಿತರ ವಿಧದ ರೀತಿಯ ಪಾನೀಯಗಳನ್ನು ವಿತರಿಸಲು ವ್ಯವಸ್ಥೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here