ಕರ್ನಾಟಕ ಬ್ಯಾಂಕಿನ ಗ್ರಾಹಕರಾಗಿ ಬ್ಯಾಂಕನ್ನು ಬೆಳೆಸಿ -ನಿವೃತ್ತ ಜಿಎಂ ಚಂದ್ರಶೇಖರ್ ರಾವ್

0
6

ದೇಶಾದ್ಯಂತದ ಹಲವಾರು ಶಾಲೆ ಕಾಲೇಜು ಸಂಘ ಸಂಸ್ಥೆಗಳಲ್ಲಿ ಕರ್ನಾಟಕ ಬ್ಯಾಂಕು ನೀಡಿದ ವಿವಿಧ ಸೌಲಭ್ಯಗಳು ಇಂದಿಗೂ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಇದೆಲ್ಲದಕ್ಕೂ ಮುಖ್ಯವಾಗಿ ಕಾರಣ ಬ್ಯಾಂಕು ತನ್ನ ಲಾಭವನ್ನು ಸಾರ್ವಜನಿಕ ಉಪಯೋಗಕ್ಕೆ ವಿನಿಯೋಗಿಸಿದ್ದು. ಆದುದರಿಂದ ಬ್ಯಾಂಕಿನ ಗ್ರಾಹಕರಾಗಿ ಬ್ಯಾಂಕನ್ನು ಮುನ್ನಡೆಸುವ, ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬ ಗ್ರಾಹಕರಿಗೂ ಇದೆ. ಹೀಗಾಗಿ ಎಲ್ಲರೂ ಬ್ಯಾಂಕಿನ ಗ್ರಾಹಕರಾಗಿ ಕರ್ನಾಟಕ ಬ್ಯಾಂಕ್ ಅನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು ಎಂದು ಕರ್ನಾಟಕ ಬ್ಯಾಂಕ್ ನ ನಿವೃತ್ತ ಜಿಎಂ ಚಂದ್ರಶೇಖರ್ ರಾವ್ ವಿನಂತಿಸಿದರು.
ಅವರು ಮಾರ್ಚ್ 23ರಂದು ಮಹಾವೀರ ಕಾಲೇಜಿನ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕು ನೀಡಿದ ಸಿ ಎಸ್ ಆರ್ ಫಂಡನ ಪ್ರಾಯೋಜಕತ್ವದ ಸಾರ್ಥಕ ವಿನಿಯೋಗದ ಎಐ ಮತ್ತು ಎಂಎಲ್ ಲ್ಯಾಬ್ ಉದ್ಘಾಟಿಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಂಗಳೂರು ವಿಭಾಗದ ಕರ್ನಾಟಕ ಬ್ಯಾಂಕ್ ನ ಹಿರಿಯ ಪ್ರಬಂಧಕ ವಿಶ್ವನಾಥ್ ಎಸ್ ಆರ್ ಅವರು ಮಾರುಕಟ್ಟೆಯ ಸ್ಥಿತ್ಯಂತರಗಳನ್ನು ತಿಳಿದುಕೊಳ್ಳಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅತ್ಯಂತ ಸಹಾಯಕಾರಿಯಾಗಿದೆ. ಯಂತ್ರಗಳ ಸಹಾಯವಿಲ್ಲದೆ ಇಂದಿನ ದಿನಗಳಲ್ಲಿ ಯಾವುದು ಸಾಧ್ಯ ಇಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ಮಾನವ ಸಂಪನ್ಮೂಲವೂ ಕೂಡ ಕಡಿಮೆಯಾಗದಿರುವುದು ಸಾಬೀತಾಗಿದೆ ಎಂದರು.
ಮಾಜಿ ಸಚಿವ, ಆಡಳಿತ ಮಂಡಳಿಯ ಅಧ್ಯಕ್ಷ ಅಭಯ ಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಕರ್ನಾಟಕ ಬ್ಯಾಂಕಿನ ಮೂಡುಬಿದರೆ ಪ್ರಬಂಧಕ ರಕ್ಷಿತ್ ಶೆಟ್ಟಿ, ಕಾಲೇಜಿನ ಪ್ರಾಚಾರ್ಯ ಡಾ. ರಾಧಾಕೃಷ್ಣ ಹಾಜರಿದ್ದರು. ರಕ್ಷಿತಾ ತಂಡ ಪ್ರಾರ್ಥಿಸಿದರು. ಸ್ವಪ್ನ ಸ್ವಾಗತಿಸಿದರು. ಅನುಶ್ರೀ ಕಾರ್ಯಕ್ರಮ ನಿರ್ವಹಿಸಿ ಅತಿಥಿಗಳ ಪರಿಚಯಗೈದರು. ಪ್ರೇಕ್ಷಾ ವಂದಿಸಿದರು.


ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here