ಮೊಗ್ರು : ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.)ಅಲೆಕ್ಕಿ -ಮುಗೇರಡ್ಕ ಮೊಗ್ರು ಶ್ರೀರಾಮ ಮಂದಿರದ ಮಕ್ಕಳ ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ನೂತನ ಕಟ್ಟಡದ ಶಿಲಾನ್ಯಾಸವನ್ನು ಉದ್ಯಮಿಗಳಾದ ಶ್ರೀ ಶಶಿಧರ ಶೆಟ್ಟಿ ಬರೋಡ ನವಶಕ್ತಿ ಗುರುವಾಯನಕೆರೆ ಇವರು ನೆರವೇರಿಸಿದರು .

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಅಶೋಕ ಗೌಡ ಪಾಂಜಾಳ, ಜೈ ಶ್ರೀರಾಮ್ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷರಾದ ಉದಯ ಭಟ್ ಕೊಳಬ್ಬೆ, ಅಧ್ಯಕ್ಷರಾದ ಅಶೋಕ ಗೌಡ ಬರುoಗುಡೇಲು, ಬಂದಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ ದoಬೆತ್ತಿಮಾರು,ಮಾಜಿ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಟ್ರಸ್ಟ್ ನ ಪದಾಧಿಕಾರಿಗಳು, ಮಾತಾಜಿಯವರು,ಪೋಷಕರು, ಪುಟಾಣಿಗಳು ಉಪಸ್ಥಿತರಿದ್ದರು.

