ಬೆಂಗಳೂರು: ಸ್ಥೂಲಕಾಯ ಸಮಸ್ಯೆ ಪರಿಹಾರಕ್ಕೆ ತೂಕ ಇಳಿಕೆ, ಸಂಪೂರ್ಣ ದೇಹ ಪರಿವರ್ತನೆ ಜೊತೆಗೆ ಸೌಂದರ್ಯ ವರ್ಧನೆ ಮತ್ತು ಜೀರ್ಣಾಂಗದ [ಮೆಟಾಬಾಲಿಕ್] ಆರೋಗ್ಯ ಸುಧಾರಣೆಯನ್ನು ಗುರಿಯಾಗಿಟ್ಟುಕೊಂಡು, ವೆಂಕಟ್ ಸೆಂಟರ್ ಫಾರ್ ಏಸ್ಥೆಟಿಕ್ ಹೆಲ್ತ್ನಲ್ಲಿ ಆಧುನಿಕ ದೇಹ ಪರಿವರ್ತನಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ಪೋರ್ಟೀಸ್ ಆಸ್ಪತ್ರೆಗಳ ಸಿಇಒ ಡಾ. ವಿವೇಕ್ ಜವಳಿ ಬನಶಂಕರಿಯ ನೂತನ ಕೇಂದ್ರಕ್ಕೆ ಚಾಲನೆ ನೀಡಿದರು. ಹಿರಿಯ ಚಲನಚಿತ್ರ ನಟ ಶ್ರೀನಾಥ್ ಮತ್ತಿತರೆ ತಜ್ಞ ವೈದ್ಯರು ಉಪಸ್ಥಿತರಿದ್ದರು.
ವೆಂಕಟ್ ಸೆಂಟರ್ ಫಾರ್ ಏಸ್ಥೆಟಿಕ್ ಹೆಲ್ತ್ ನ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನೂತನ ಕೇಂದ್ರವನ್ನು ಆರಂಭಿಸಲಾಗಿದೆ. ಇಲ್ಲಿ ಅತಿಯಾದ ತೂಕದ ಸಮಸ್ಯೆಗೆ ಸಮಗ್ರ ಚಿಕಿತ್ಸೆ ಒದಗಿಸಲಿದೆ. ಸುರಕ್ಷಿತ, ಶಾಶ್ವತ ಮತ್ತು ವೈಜ್ಞಾನಿಕ ಆಧಾರಿತ ತೂಕ ಇಳಿಕೆಗೆ ಹಾಗೂ ತೂಕದಿಂದಾಗುವ ಸೌಂದರ್ಯ, ಚರ್ಮ ಹಾಗೂ ನಿದ್ರೆ, ಗೊರಕೆ ಸಮಸ್ಯೆಗಳಿಗೆ ಸಮಗ್ರ ಚಿಕಿತ್ಸೆಯನ್ನು ಒದಗಿಸಲಿದೆ.
ಈ ಕೇಂದ್ರದಲ್ಲಿ ವೈಜ್ಞಾನಿಕ ಔಷಧೋಪಚಾರ, ವೈಯಕ್ತಿಕ ಆಹಾರ ಯೋಜನೆ, ವ್ಯಾಯಾಮ ಮಾರ್ಗದರ್ಶನ ಮತ್ತು ಏಸ್ಥೆಟಿಕ್ ಚಿಕಿತ್ಸೆಗಳ ಸಂಯೋಜನೆಯಿದೆ. ಕ್ಲಿನಿಕಲ್ ಅಧ್ಯಯನಗಳ ಪ್ರಕಾರ, ಸರಿಯಾದ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ 15–22% ತೂಕ ಇಳಿಕೆ ಮಾಡಬಹುದು. ಇದರಿಂದ ಮದುಮೇಹ ನಿಯಂತ್ರಣ ಮತ್ತು ಹೃದಯ ಸಂಬಂಧಿತ ಅಪಾಯಗಳಲ್ಲೂ ಸುಧಾರಣೆ ಕಾಣಬಹುದಾಗಿದೆ.
ಈ ಕೇಂದ್ರವು ತೂಕ ಇಳಿಕೆಗೆ ಮೀರಿದ ಸಮಗ್ರ ಪರಿವರ್ತನೆಯನ್ನು ಒದಗಿಸಲಿದ್ದು, ನಿದ್ರೆಯ ಸಮಸ್ಯೆ ನಿವಾರಣೆ, ಗೊರಕೆಗೆ ವಿನೂತನ ಚಿಕಿತ್ಸೆ, ಚರ್ಮದ ಗಟ್ಟಿತನ, ಸ್ಟ್ರೆಚ್ ಮಾರ್ಕ್ಸ್ಗೆ ಏಸ್ಥೆಟಿಕ್ ಚಿಕಿತ್ಸೆಗಳು ನೆರವಾಗಲಿವೆ. ದೇಹ ನಿಯಂತ್ರಣ ವಿಧಾನಗಳು, ಅಗತ್ಯವಿದ್ದಲ್ಲಿ ಲಿಪೋಸಕ್ಷನ್ ಮತ್ತು ಚರ್ಮದ ಬಿಗಿವಿಕೆ ಶಸ್ತ್ರಚಿಕಿತ್ಸೆಗಳನ್ನು ಸಹ ನಡೆಸಲಾಗುತ್ತದೆ.
ವೈಯಕ್ತಿಕ ವೈದ್ಯಕೀಯ ಮಾರ್ಗದರ್ಶನದ ಜೊತೆಗೆ ಪ್ರತಿ ರೋಗಿಗೂ ಅವರ ಆರೋಗ್ಯ ಹಿನ್ನೆಲೆ, ದೇಹ ಸಂರಚನೆ ಮತ್ತು ಅಭಿರುಚಿಗಳ ಆಧಾರದ ಮೇಲೆ ವೈದ್ಯರು, ಪ್ಲಾಸ್ಟಿಕ್ ಸರ್ಜನ್, ಚರ್ಮ ರೋಗ, ಮೂಗು ಹಾಗೂ ಗಂಟಲು, ಸ್ತ್ರೀ ರೋಗ, ಆಹಾರ ತಜ್ಞರು. ಫಿಸಿಯೊಥೆರಪಿ, ಕ್ರೀಡಾ ಔಷಧ ತಜ್ಙರ ತಂಡದಿಂದ ವೈಯಕ್ತಿಕ ಚಿಕಿತ್ಸಾ ಯೋಜನೆಯನ್ನು ರೂಪಿಸಲಾಗುತ್ತದೆ.
ನಿಯಮಿತ ಫಾಲೋ-ಅಪ್ ಮತ್ತು ಪ್ರಗತಿ ಪರಿಶೀಲನೆ, ಡಯಟ್ ಮತ್ತು ವ್ಯಾಯಾಮದಿಂದ ಮಾತ್ರ ಫಲಿತಾಂಶ ಪಡೆಯಲಾಗದವರಿಗೆ ಈ ಕೇಂದ್ರ ವರದಾನವಾಗಿದೆ. ವೈದ್ಯಕೀಯ ಮೇಲ್ವಿಚಾರಣೆಯಲ್ಲಿನ ಶಾಶ್ವತ ತೂಕ ಇಳಿಕೆಯ ಜೊತೆ ಸೌಂದರ್ಯ ಬಯಸುವವರು ದೀರ್ಘಕಾಲೀನ ಪರಿವರ್ತನೆಗೆ ಒತ್ತು ನೀಡಲಾಗುತ್ತದೆ.
ತಜ್ಞ ವೈದ್ಯರಾದ ಡಾ ಅನಿಕೇತ್ ಮಾತನಾಡಿ, “ಇದು ತ್ವರಿತ ಪರಿಹಾರವಲ್ಲ, ಇದು ವೈಜ್ಞಾನಿಕವಾಗಿ ಮಾರ್ಗದರ್ಶನ, ದೀರ್ಘಕಾಲೀನ ದೇಹ ಪರಿವರ್ತನೆ,” ಎಂದು ತಿಳಿಸಿದ್ದಾರೆ. “ನಾವು ತೂಕ ಇಳಿಕೆಯನ್ನು ಮಾತ್ರವಲ್ಲದೆ, ಮೆಟಾಬಾಲಿಕ್ ಆರೋಗ್ಯ ಮತ್ತು ಶಾಶ್ವತ ಫಲಿತಾಂಶಗಳತ್ತ ಗಮನ ಹರಿಸುತ್ತೇವೆ.” ಎಂದು ಹೇಳಿದರು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 8008004586
• www.venkatcenter.com
Home Uncategorized ವೆಂಕಟ್ ಸೆಂಟರ್ ಫಾರ್ ಏಸ್ಥೆಟಿಕ್ ಹೆಲ್ತ್ನಲ್ಲಿ ಆಧುನಿಕ ದೇಹ ಪರಿವರ್ತನಾ ಮತ್ತು ಸೌಂದರ್ಯ ವರ್ಧಕ ಕೇಂದ್ರ...

