ಎ.25: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ತುಳು ಭಾಷೆ ಬದ್ಕ್ – ಗೇನದ ಪೊಲಬು -ತುಲಿಪು’

0
165

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಮಿಜಾರು ಇಲ್ಲಿ ‘ತುಳು ಭಾಷೆ ಬದ್ಕ್ ಗೇನದ ಪೊಲಬು -ತುಲಿಪು’ ಒಂದು ದಿನದ ವಿಚಾರ ಸಂಕಿರಣ ಎ.25 ರಂದು ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರು ವಿಚಾರ ಸಂಕಿರಣವನ್ನು ಉದ್ಘಾಟಿಸುವರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿಯಾದ ವಿವೇಕ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಂ.ಆರ್ .ಪಿ.ಎಲ್ ನ ಕಾರ್ಪೊರೇಟ್ ಕಮ್ಯುನಿಕೇಶನ್ ವಿಭಾಗದ ಚೀಫ್ ಜನರಲ್ ಮ್ಯಾನೇಜರ್ ರುಡಾಲ್ಫ್ ನೊರೊನ್ಹ , ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಙಾನ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪೀಟರ್ ಫೆರ್ನಾಂಡಿಸ್ ಮತ್ತು ಆಳ್ವಾಸ್ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಯೋಗೀಶ್ ಕೈರೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿಚಾರಗೋಷ್ಠಿ ನಡೆಯಲಿವೆ. ಮೊದಲ ಗೋಷ್ಠಿಯಲ್ಲಿ ‘ವಿದೇಶಿ ಪ್ರವಾಸಿಗೆರ್ ಬೊಕ್ಕ ವ್ಯಾಪಾರಿಲು ಬರೆತಿನ ಪ್ರಾಚೀನ ತುಳುನಾಡ್ದ ಚಿತ್ರಣ’ ವಿಷಯದ ಬಗ್ಗೆ ಡಾ. ರುಡಾಲ್ಫ್ ನೊರೊನ್ಹ ಮಾತನಾಡಲಿದ್ದಾರೆ . ಎರಡನೇ ಗೋಷ್ಠಿಯಲ್ಲಿ ‘ತುಳುನಾಡ್ದ ಸಾಮರಸ್ಯ ಪರಂಪರೆ’ ವಿಷಯದ ಬಗ್ಗೆ ಆಳ್ವಾಸ್ ಬಿ.ಎಡ್ ಕಾಲೇಜಿನ ವಿದ್ಯಾರ್ಥಿ ರಿಯಾಜ್ ಕಾರ್ಕಳ ಇವರು ಮಾತನಾಡಲಿದ್ದಾರೆ. ಮೂರನೇ ಗೋಷ್ಠಿಯಲ್ಲಿ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಅವರು ‘ತುಳುವೆರೆನ ಸಂಸ್ಕ್ರತಿಡ್ ಅಪ್ಪೆನ ಸ್ಥಾನಮಾನ’ ದ ಬಗ್ಗೆ ಮಾತನಾಡಲಿದ್ದಾರೆ.

ನಾಲ್ಕನೇ ಗೋಷ್ಠಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಬಂಗಾಳ ಬಾಬು ಕೊರಗ ಅವರು ‘ತುಳು ಭಾಷೆ ಮತ್ತು ಕೊರಗ ಭಾಷೆಯ ಸಂಬಂಧ’ದ ಬಗ್ಗೆ ಮಾತನಾಡುವರು. ಕೊನೆಯ ಗೋಷ್ಠಿಯಲ್ಲಿ ಚಲನಚಿತ್ರ ನಟ ಹಾಗೂ ಗಾಯಕರಾದ ಮೈಮ್ ರಾಮ್ ದಾಸ್ ಅವರು ‘ತುಳು ಜನಪದ ಪದೊಕುಲ್’ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here