ಆಫ್ರಿಕಾ: ಬಂಟರ ಸಂಘ ಮೂಡಾಯಿ ಆಫ್ರಿಕಾ, ಕೀನ್ಯ ಕೂಟ ಅಯೋಜಕತ್ವದಲ್ಲಿ 3ನೇ ವರ್ಷದ ಅದ್ದೂರಿ ಬಂಟ ಐಸಿರ ಕಾರ್ಯಕ್ರಮವು ಅಕ್ಟೋಬರ್ 25ರಂದು ಶನಿವಾರ ಸಂಜೆ 6 ಗಂಟೆಗೆ ಪ್ರೈಡ್ ಇನ್ ಹೋಟೆಲ್ ವೆಸ್ಟ್ ಲ್ಯಾಂಡ್ ರೋಡ್ ನೈರೋಬಿಯದಲ್ಲಿ ನಡೆಯಲಿದೆ. ಸಂಗೀತದ ರಸದೌತಣ ಉಣಿಸಲು ಮಂಗಳೂರಿನಿಂದ ರಕ್ಷಣ್ ಮಾಡೂರು ಹಾಗೂ ದಿವ್ಯ ನಿಧಿ ರೈ ಎರುಂಬು ಆಗಮಿಸಲಿದ್ದಾರೆ.
ತುಳುನಾಡಿನ ಸಂಪ್ರದಾಯದ ಉಡುಗೆ ತೊಡುಗೆಯಲ್ಲಿ ಬಂದು ಕಾರ್ಯಕ್ರಮವನ್ನು ಚಂದಕಾಣಿಸಿ ಕೊಡಬೇಕೆಂದು ಬಂಟರ ಸಂಘ ಮೂಡಾಯಿ ಆಫ್ರಿಕಾ ಕೀನ್ಯದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.