ಎ.7 ರಿಂದ ಎ.11 ರ ತನಕ ಎಕ್ಕಾರು ಕಾಯ್ದಂಡ ನೇಮೋತ್ಸವ

0
126

ಬಜಪೆ:ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧಪಟ್ಟ ಎಕ್ಕಾರು ಕಾಯ್ದಂಡ ನೇಮೋತ್ಸವವು ಎ.7 ರಿಂದ ಎ.11 ರ ತನಕ ವಿಜೃಂಭಣೆಯಿಂದ ಜರುಗಲಿದೆ.
ಎ.6 ರ ರವಿವಾರದಂದು ರಾತ್ರಿ ರಾಮ ನವಮಿಯಂದು ಕಾವರಮನೆಯಿಂದ ದೈವಗಳ ಭಂಡಾರ ಹೊರಟು ಸವಾರಿಯ ಗದ್ದೆಗೆ ಆಗಮಿಸಿ ಕಾಯ್ದಂಡ ನೇಮೋತ್ಸವವು ಜರುಗುತ್ತದೆ.ಎ. 7 ರ ಸೋಮವಾರ ಬೆಳಿಗ್ಗೆ 10 ಕ್ಕೆ ಶ್ರೀಉಲ್ಲಾಯ ದೈವದ ನೇಮ, ಮಧ್ಯಾಹ್ನ 1 ರಿಂದ ಅನ್ನ ಸಂತರ್ಪಣೆ ಹಾಗೂ ರಾತ್ರಿ 10 ರಿಂದ ಶ್ರೀಕೊಡಮಣಿತ್ತಾಯ ದೈವದ ನೇಮ ನಡೆಯಲಿದೆ.ಎ.8 ರ ಮಂಗಳವಾರದಂದು ರಾತ್ರಿ 10 ರಿಂದ ಶ್ರೀಕಾಂತೇರು ಜುಮಾದಿ ದೈವದ ನೇಮ,ಎ.9 ಬುಧವಾರ ರಾತ್ರಿ 10 ರಿಂದ ಜಾರಂದಾಯ ಬಂಟ ದೈವದ ನೇಮ,ಎ.10 ರ ಗುರುವಾರ ರಾತ್ರಿ 10 ರಿಂದ ಶ್ರೀ ಸರಳ ಜುಮಾದಿ ದೈವದ ನೇಮ,ಎ.11 ರ ಶುಕ್ರವಾರ ರಾತ್ರಿ 10 ರಿಂದ ಪಿಲಿಚಾಮುಂಡಿ ದೈವದ ನೇಮ ನಂತರ ದೈವಗಳ ಭಂಡಾರ ಇಳಿಯುವುದು ಎಂದು ಪ್ರಕಟಣೆ ತಿಳಿಸಿದೆ.ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ
ಎ.7 ರಂದು ಸಂಜೆ 6:30 ರಿಂದ
ದುರ್ಗಾ ಕಲ್ಚರಲ್ ಅ್ಯಂಡ್ ಕ್ರಿಕೆಟ್ ಕ್ಲಬ್ ಎಕ್ಕಾರು ಹಾಗೂ ದುರ್ಗಾ ಮಹಿಳಾ ಮಂಡಳಿ ಇವರ ಪ್ರಾಯೋಜಕತ್ವದಲ್ಲಿ ಬಾಲಗೋಕುಲ ಮಕ್ಕಳಿಂದ ಹಾಗೂ ದುರ್ಗಾ ಮಹಿಳಾ ಮಂಡಳಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ,ದುರ್ಗಾ ಯಕ್ಷ ನಾಟ್ಯ ತರಗತಿಯ ಮಕ್ಕಳಿಂದ ಯಕ್ಷಗಾನ ಮಹಿಷ ಮರ್ಧಿನಿ ,ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು,ಎ.9 ರಂದು ಸಂಜೆ 6:30 ರಿಂದ ವಿಜಯ ಯುವ ಸಂಗಮ(ರಿ)ಎಕ್ಕಾರು ಪ್ರಾಯೋಜಕತ್ವದಲ್ಲಿ ಥಂಡರ್ ಗೈಸ್ ಫೌಂಡೇಶನ್ (ರಿ)ಬಜಪೆ, ಸೂರಜ್ ಶೆಟ್ಟಿ ಬಜ್ಪೆ ನಿರ್ದೇಶನದಲ್ಲಿ ಕ್ಷೇತ್ರ ಪುರಾಣ ಮಂಜರಿ ಭಕ್ತಿ ಭಾವದ ನೃತ್ಯ ಸಂಗಮ,ಎ.10 ರಂದು ಸಂಜೆ 6:30 ರಿಂದ ಕಾಯ್ದಂಡ ಯುವಕ ಮಂಡಲ (ರಿ)ಎಕ್ಕಾರು ಪ್ರಾಯೋಜಕತ್ವದಲ್ಲಿ ಅಭಿನಯ ಕಲಾವಿದರು ಉಡುಪಿ ಅಭಿನಯಿಸುವ ಶಾಂಭವಿ ತುಳು ಹಾಸ್ಯಮಯ ನಾಟಕ,ಎ.11 ರಂದು ಚೈತನ್ಯ ಕಲಾವಿದರು ಬೈಲೂರುಇವರಿಂದ ಅಷ್ಟೆಮಿ ತುಳು ನಾಟಕ ನಡೆಯಲಿದೆ.

LEAVE A REPLY

Please enter your comment!
Please enter your name here