Saturday, April 26, 2025
HomeUncategorizedಕಾಸರಗೋಡು ಜಿಲ್ಲಾ ಚುಟುಕು ಸ್ಪರ್ಧೆಗೆ ಆಹ್ವಾನ

ಕಾಸರಗೋಡು ಜಿಲ್ಲಾ ಚುಟುಕು ಸ್ಪರ್ಧೆಗೆ ಆಹ್ವಾನ

ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸಹಕಾರದಲ್ಲಿ, ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ಚುಟುಕು ರಚನಾ ಸ್ಪರ್ಧೆ -2025 ನಡೆಯಲಿದೆ. ಚುಟುಕಕ್ಕೆ ವಿಷಯ ನಿರ್ಬಂಧ ಇಲ್ಲ. ಒಬ್ಬರು 4 ಸಾಲಿನ ಉತ್ತಮ ಎನಿಸುವ ಐದು ಚುಟುಕವನ್ನು ಕಳುಹಿಸಬೇಕು. ಸ್ಪರ್ಧಾ ವಿಜೇತರಿಗೆ ಕಾಸರಗೋಡು ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಘಟಕರ ತೀರ್ಮಾನವೇ ಅಂತಿಮ. ಆಸಕ್ತರು ಏ. 15ರ ಮೊದಲು 9746093552 ಅಥವಾ 9633073400 ಸಂಖ್ಯೆಗೆ ವಾಟ್ಸಪ್ ಮೂಲಕ ಚುಟುಕಗಳನ್ನು ಕಳುಹಿಸಬಹುದು. ಚುಟುಕಗಳ ಜತೆಗೆ ಸ್ಪಷ್ಟ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯಬೇಕು ಎಂದು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular