ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನಂತಶಯನ ಒಕ್ಕೂಟದ ವತಿಯಿಂದ ಚತುರ್ಮುಖ ಬಸದಿಯ ಸುತ್ತ ಮುತ್ತ ಸ್ವಚ್ಛತಾ ಆಂದೋಲನ

0
4

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನಂತಶಯನ ಒಕ್ಕೂಟದ ವತಿಯಿಂದ ಚತುರ್ಮುಖ ಬಸದಿಯ ಸುತ್ತ ಮುತ್ತ ಸ್ವಚ್ಛತೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀ ಕೂಷ್ಮಾಂಡಿನಿ ಸ್ವ ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಗೀತಾ, ಶ್ರೀಮತಿ ಹೇಮಾ, ಶ್ರೀಮತಿ ಸುಂದರಿ, ಸುನಂದಾ, ಸುಶೀಲಾ, ಹಾಗೂ ಪ್ರಜ್ವಲ್ ಸ್ವ ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಶಾರದಾ, ಪ್ರೇಮಾ, ಲೀಲಾ ಹಾಗೂ ಒಕ್ಕೂಟದ ಅಧ್ಯಕ್ಷರಾದ ಸುಧಾಕರ್ ದಾನಶಾಲೆ ಹಾಗೂ ಸೇವಾ ಪ್ರತಿನಿಧಿಯಾದ ಶ್ರೀಮತಿ ಸುಜಾತರವರು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.