ಕಾರ್ಕಳ: ಯುವಕನಿಗೆ ತಲವಾರಿನಿಂದ ಹಲ್ಲೆಗೆ ಯತ್ನಿಸಿ ಜಾತಿ ನಿಂದನೆ ಮಾಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೌಡೂರು ಗ್ರಾಮದ ಚರಣ್ (22) ಎಂಬಾತ ಜೂ. 21ರಂದು ರಾತ್ರಿ 8.30ಕ್ಕೆ ಬೈಲೂರು ಪಳ್ಳಿ ಕ್ರಾಸ್ ಬಳಿಯಿರುವ ಸೂಪರ್ ಮಾರ್ಕೆಟ್ ಹತ್ತಿರ ನಿಂತುಕೊಂಡಿದ್ದಾಗ ಆಪಾದಿತರಾದ ಅಶ್ವಿನ್ ಮತ್ತು ವಿಷ್ಣು ಕುಡಿದು ಬಂದು ಚರಣ್ ಜೊತೆ ಜೋರಾಗಿ ಮಾತನಾಡಿರುತ್ತಾರೆ. ಮರುದಿನ ಅಶ್ವಿನ್ ಚರಣ್‌ಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುತ್ತಾನೆ ಸಂಜೆ 6 ಗಂಟೆಗೆ ಅಶ್ವಿನ್ ವಿಷ್ಣು ಮತ್ತು ಮಂಜುನಾಥ ಎಂಬವರೊಂದಿಗೆ ಸೇರಿಕೊಂಡು ಚರಣೆಗೆ ಫೋನ್ ಮಾಡಿ ಜೋಡುರಸ್ತೆಗೆ ಬರುವಂತೆ ಹೇಳಿದ್ದು ಬರಲು ಒಪ್ಪದಿದ್ದಾಗ ರಂಗನಪಲ್ಲೆಗೆ ಬರುವಂತೆ ತಿಳಿಸಿರುತ್ತಾರೆ. ಚರಣ್ ತಮ್ಮ ಚಿಕ್ಕಪ್ಪ ಜಗನ್ನಾಥ್, ಸುಂದರ್, ಕಿರಣ್, ರವಿ ಎಂಬವರೊಂದಿಗೆ ರಾತ್ರಿ 7.45ಕ್ಕೆ ರಂಗಪಲ್ಲೆಯ ಕೀರ್ತಿ ಬಾರ್ನನ ಪಕ್ಕದ ರಸ್ತೆಯಲ್ಲಿ ನಿಂತುಕೊಂಡಿದ್ದಾಗ ಆಪಾದಿತರಾದ ಬೈಲೂರಿನ ಸುಜಿತ್, ವಿಷ್ಯು ಅಶ್ವಿನ್, ಮಂಜುನಾಥ ಜಾರ್ಕಳ, ಯಶವಂತ್ ಹಾಗೂ ಇನ್ನೊಬ್ಬ ವ್ಯಕ್ತಿಯು ಮೋಟಾರ್ ಸೈಕಲ್‌ನಲ್ಲಿ ಬಂದು ಇವರಲ್ಲಿ ವಿಷ್ಣು ಎಂಬಾತನು ಚರಣ್‌ಗೆ ತಲವಾರಿನಿಂದ ಹೊಡೆಯಲು ಯತ್ನಿಸಿದ್ದು ಈ ವೇಳೆ ಜಗನ್ನಾಥ್ ಮತ್ತು ಸುಂದರ್ ತಡೆಯಲು ಮುಂದಾದಾಗ ಅವರಿಗೆ ಕೈಯಿಂದ ಹಲ್ಲೆ ಮಾಡಿರುತ್ತಾರೆ. ಈ ಬಗ್ಗೆ ಚರಣ್ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.