ಮೂಲ್ಕಿ: ಇವೆಂಟ್ ಮ್ಯಾನೇಜ್ ಮೆಂಟ್ ನಲ್ಲಿ ವಿಶೇಷ ಪ್ರಸಿದ್ದಿ ಮಾಡಿರುವ ಮಂಗಳೂರಿನ ಸ್ಯಾಂಡಿಸ್ ಕಂಪನಿ ಅರ್ಪಿಸುವ ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ 2025ನೇ ನಾಲ್ಕನೇ ಆವೃತ್ತಿಯು ಮೂಲ್ಕಿಯ ಸುಂದರರಾಮ ಶೆಟ್ಟಿ ಕನ್ವೆನ್ಷನಲ್ ಸೆಂಟರ್ ಕೋಲ್ನಾಡ್ ಇಲ್ಲಿ ಬಹಳ ಅದ್ದೂರಿಯಾಗಿ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಶಾಸಕ ಉಮಾನಾಥ ಎ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ, ತುಳು ಚಿತ್ರರಂಗ ಬೆಳವಣಿಗೆಗೆ ಇಂತಹ ಕಾರ್ಯಕ್ರಮ ಅಗತ್ಯ, ಯಾವುದೇ ಸಿನಿಮಾರಂಗಕ್ಕೂ ಕಡಿಮೆ ಇಲ್ಲದೆ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ವೇದವ್ಯಾಸ ಕಾಮತ್, ಚಿತ್ರ ನಟ ಅಶೋಕ್ ಬೆಂಗಳೂರು, ಶಿವಧ್ವಜ್ ಶೆಟ್ಟಿ, ಸಾಹಿತಿ ರಾಮ ಎಲ್.ಅಂಚನ್, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್, ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್, ಹರೀಶ್ ಶೇರಿಗಾರ್, ಪಮ್ಮಿ ಕೊಡಿಯಾಲ್ ಬೈಲ್, ಕ್ಯಾಟ್ಕದ ಅಧ್ಯಕ್ಷ ಲಂಚುಲಾಲ್ ಕೆಎಸ್ , ಗಿರೀಶ್ ಎಂ ಶೆಟ್ಟಿ ಕಟೀಲು, ನಿಶಾಂತ್ ಭಂಡಾರಿ, ಹರಿಪ್ರಸಾದ್ ರೈ, ಬೋಳ ಪ್ರಕಾಶ್ ಕಾಮತ್,
ಶಶಿಧರ್ ಕೋಡಿಕಲ್, ಮೊಹಮ್ಮದ್ ಹಯಾದ್, ಅಡ್ಯಾರ್ ಮಾಧವ ನಾಯಕ್ ಸೂರಜ್ ಕುಮಾರ್, ಗೌತಮ್ ಕೋಡಿಕಲ್, ರಥನ್ ಕೊಟ್ಟಾರಿ ಸಚಿನ್ ಉಪ್ಪಿನಂಗಡಿ. ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಕಾಂತಿ ಶೆಟ್ಟಿ ಬೆಂಗಳೂರು, ಶಮಿತಾ ಶೆಟ್ಟಿ, ಪ್ರಮಲ್ ಪೂಜಾರಿ ಕಾರ್ಕಳ ಮತ್ತಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಸ್ಯಾಂಡಲ್ ವುಡ್ ತಾರೆಯರಾದ ರಚನಾ ರೈ, ವೃಂದ ಆಚಾರ್ಯ, ರೂಪೇಶ್ ಶೆಟ್ಟಿ, ಪೃಥ್ವಿ ಅಂಬರ್ ಹಾಗೂ ನಟಿ ಸೋನಲ್ ಮೊಂತೆರೋ ಮತ್ತು ತುಳು ಚಿತ್ರರಂಗದ ನಿರ್ಮಾಪಕರು, ತಂತ್ರಜ್ಞರು,ಹಿರಿಯ ಮತ್ತು ಕಿರಿಯ ನಟ ನಟಿಯರು ಮತ್ತು ಇನ್ನಿತರ ಗಣ್ಯರು ಭಾಗವಹಿಸಿದ್ದರು.
ಈ ವರ್ಣರಂಜಿತ ಕಾರ್ಯಕ್ರಮದ ಆಕರ್ಷಣೆಯಾಗಿ ತುಳು ಚಿತ್ರರಂಗದ ನಟ ನಟಿಯರಿಂದ, ಮತ್ತು ಸಿಜಿಲಿಂಗ್ ಗಾಯ್ಸ್ ತಂಡದಿಂದ ನೃತ್ಯ,ರಸಮಂಜರಿ ಹಾಗೂ ಕಾಮಿಡಿ ಕಾರ್ಯಕ್ರಮ ನಡೆಯಿತು.
ಕರಾವಳಿಯ ಪ್ರಸಿದ್ದ ಕಾರ್ಯಕ್ರಮ ನಿರೂಪಕರಾದ ಶರ್ಮಿಳಾ ಅಮೀನ್ ಮತ್ತು ನಟ ವಿನೀತ್ ಕುಮಾರ್ ಕಾರ್ಯಕ್ರಮ ನಿರೂಪಣೆ ನಡೆಸಿಕೊಟ್ಟರು. ಅಲ್ಲದೆ ತುಳು ರಂಗಭೂಮಿ ಮತ್ತು ತುಳು ಚಿತ್ರರಂಗದಲ್ಲಿ ಎರಡರಲ್ಲೂ ಸಾಧನೆಗೈದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಸಂಯೋಜಕ ಸಂದೇಶ್ ರಾಜ್ ಬಂಗೇರ ಸ್ವಾಗತಿಸಿದರು.
2024ರಲ್ಲಿ ಸೆನ್ಸಾರ್ ಅಗಿ ತೆರೆಕಂಡಿರುವ ಒಟ್ಟು 8 ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. ಒಟ್ಟು 30 ವಿಭಾಗಗಳಲ್ಲಿ ಸ್ಪರ್ಧೆ ನಡೆದು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ಸಿನಿಮಾವಾಗಿ ದಸ್ಕತ್ ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲೈಫ್ ಟೈಮ್ ಅಚೀವೆಂಟ್ ಅವಾರ್ಡ್ಸ್‌ನ್ನು ಹಿರಿಯ ಕಲಾವಿದೆ ಶ್ರೀಮತಿ ರೋಹಿಣಿ ಜಗರಾಂ ಹಾಗೂ ವರ್ಸಟೈಲ್ ಆಕ್ಟರ್ ಅವಾರ್ಡ್ ನ್ನು ಕಲಾವಿದ ಪ್ರಕಾಶ್ ತೂಮಿನಾಡು ಅವರಿಗೆ, ವಿಶೇಷ ಪ್ರಶಸ್ತಿಯನ್ನು ಲಂಚುಲಾಲ್ ಕೆ ಎಸ್ ಅವರಿಗೆ ನೀಡಿ ಗೌರವಿಸಲಾಯಿತು.