
ತನ್ನ ಬದುಕಿಗಾಗಿ ಬದುಕುವವರು ಹಲವರು; ಆದರೆ ಸಮಾಜದ ಒಳಿತಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಡುವವರು ಕೆಲವರು ಮಾತ್ರ, ಅಂತಹ ಅಪರೂಪದ ವ್ಯಕ್ತಿತ್ವಗಳಲ್ಲಿ ಒಬ್ಬರು ಲಯನ್ ಎಂಜೆಎಫ್ ಅರ್.ಜಿ. ಶ್ರೀನಿವಾಸ್ ಮೂರ್ತಿ, ಇವರು ನಿಸ್ವಾರ್ಥ ಸೇವೆಯನ್ನು ಜೀವನದ ಧ್ಯೇಯವನ್ನಾಗಿಸಿಕೊಂಡು, ಸಂಘಟನಾ ಚಾತುರ್ಯದಿಂದ ಅನೇಕರನ್ನು ಒಗ್ಗೂಡಿಸಿ, ಮಾನವೀಯ ಮೌಲ್ಯಗಳ ಮೂಲಕ ಸಮಾಜದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವ್ಯಕ್ತಿ.
ಆರ್.ಜಿ. ಶ್ರೀನಿವಾಸಮೂರ್ತಿ ಅವರ ಬದುಕಿನ ಪಯಣ ಮತ್ತು ಲಯನಿಸಂನಲ್ಲಿನ ಸಾಧನೆ ಸೇವೆ ಬಗ್ಗೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಪಿಎಂಜೆಎಫ್ ಲಯನ್ ಆರ್.ಜಿ. ಶ್ರೀನಿವಾಸಮೂರ್ತಿ ಅವರು ರಾಜನಹಳ್ಳಿ ಕುಟುಂಬದ ಲಯನ್ ಸಂಸ್ಥೆಗೆ ಸೇವೆ ಸಲ್ಲಿಸಿದ ದಿ. ಕಾಂತಲಕ್ಷö್ಮಮ್ಮ ರಾಜನಹಳ್ಳಿ ವಿ.ಗೋಪಾಲ ಕಿÈಷ್ಣ ಶೆಟ್ಟಿ ದಂಪತಿಗಳ ಸಂಸ್ಕಾರವAತ ಪುತ್ರರಾಗಿ ಮಾನವೀಯ ಮೌಲ್ಯಗಳು ಹಾಗೂ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು ಬೆಳೆದ ವ್ಯಕ್ತಿ. ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಗುರ್ತಿಸಿಕೊಂಡು ಹೆಸರು ಗಳಿಸಿರುವ ಇವರು, ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಕಂಡ ಆರ್.ಜಿ.ಶ್ರೀನಿವಾಸ್ ಮೂರ್ತಿ ಅವರು ಅನೇಕ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಂಡು, ಅವಕಾಶಗಳನ್ನು ಯಶಸ್ಸಾಗಿ ರೂಪಿಸಿಕೊಂಡ ವ್ಯಕ್ತಿ.
ಕುಟುಂಬ ಜೀವನದಲ್ಲಿಯೂ ಆದರ್ಶಗಳನ್ನು ಪಾಲಿಸಿಕೊಂಡು ಸಾಗಿದ್ದಾರೆ. ಸಮಾಜ, ಶಿಕ್ಷಣ, ಧಾರ್ಮಿಕ ಹಾಗೂ ಸಹಕಾರ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಕೊಡುಗೆ ನೀಡುತ್ತಾ, ಅನೇಕ ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವೆ ಮಾಡುವುದರ ಮೂಲಕ ಜೀವನದ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಕನ್ನಿಕಾ ಪರಮೇಶ್ವರಿ ಕೂ ಅಪ್ ಬ್ಯಾಂಕ್ ಅಧುನಿಕ ತಂತ್ರಜ್ಞಾನ ಅಳವಡಿಸಿ ಅಭಿವೃದ್ಧಿ ಪಡಿಸಿರುವುದು ಅವರ ಸಾದನೆ ಸೇವೆಗೆ ಒಂದು ದೊಡ್ಡ ಸಾಕ್ಷಿಯಾಗಿದೆ.
1995ರಲ್ಲಿ ಲಯನಿಸಂಗೆ ಪಾದಾರ್ಪಣೆ ಮಾಡಿದ ಅವರು, ದಾವಣಗೆರೆ ಲಯನ್ಸ್ ಕ್ಲಬ್‌ನೊಂದಿಗೆ ಸುಮಾರು 30 ವರ್ಷಗಳ ಸುದೀರ್ಘ ಸೇವಾ ಪಯಣ ನಡೆಸಿದ್ದಾರೆ. ಕ್ಲಬ್ ಅಧ್ಯಕ್ಷ, ವಲಯಾಧ್ಯಕ್ಷ, ಜಿಲ್ಲಾ ಮಟ್ಟದ ವಿವಿಧ ಜವಾಬ್ದಾರಿಗಳು, ಟ್ರಸ್ಟಿ ಸೇರಿದಂತೆ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಜಿಲ್ಲೆ, ಮಲ್ಟಿಪಲ್ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನಗಳಲ್ಲಿ ಭಾಗವಹಿಸಿ, ವಿದೇಶಗಳಲ್ಲಿ ತರಬೇತಿ ಹಾಗೂ ಅಧ್ಯಯನದ ಮೂಲಕ ತಮ್ಮ ಲಯನ್ಸ್ ಜ್ಞಾನ ಮತ್ತು ಅನುಭವವನ್ನು ವಿಸ್ತರಿಸಿಕೊಂಡಿದ್ದಾರೆ.
ಲಯನ್ಸ್ ಸೇವೆಯ ಜೊತೆಗೆ ಹೊಸ ಸದಸ್ಯರ ಸೇರ್ಪಡೆ, ಕ್ಲಬ್‌ಗಳ ವಿಸ್ತರಣೆ, ನಾಯಕತ್ವ ತರಬೇತಿ, ಶಿಕ್ಷಕರಿಗೆ ಸನ್ಮಾನ, ಹಸಿದವರಿಗೆ ಅನ್ನ ನೀಡುವಂತಹ ಸೇವಾ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಪ್ರತಿವರ್ಷ ಸುಮಾರು 1,500 ಉತ್ತಮ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿರುವುದು ಅವರ ಸೇವಾ ಮನೋಭಾವದ ಮಹತ್ವದ ಉದಾಹರಣೆಯಾಗಿದೆ.
ಅವರ ಸೇವಾ ಸಾಧನೆಗೆ “ಸಹಕಾರ ರತ್ನ”, “ಆದರ್ಶ ಸಹಕಾರಿ”, “ದೈವಭಕ್ತ ಸಂಪನ್ನ” ಸೇರಿದಂತೆ ವಿವಿಧ ಗೌರವಗಳು ಸಂದಿವೆ. ಸೇವೆಯನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುವ ಅವರ ನಿಸ್ವಾರ್ಥ ಮನೋಭಾವವೇ ಅವರ ವ್ಯಕ್ತಿತ್ವದ ಪ್ರಮುಖ ಶಕ್ತಿ.
ಲಯನ್ಸ್ ಜಿಲ್ಲೆ 317-ಅ ವಿಭಜನೆಯ ನಂತರ ಉದಯಗೊಂಡ ನೂತನ ಜಿಲ್ಲೆ 317-ಊರ 2026-27ನೇ ಸಾಲಿನ ಪ್ರಪ್ರಥಮ ಜಿಲ್ಲಾ ಗವರ್ನರ್ ಆಗಿ ಸರ್ವಾನುಮತದಿಂದ ಆಯ್ಕೆಯಾಗಿರುವುದು ಅವರ ದೀರ್ಘಕಾಲದ ಲಯನ್ಸ್ ಸೇವೆಗೆ ದೊರೆತ ಮಹತ್ವದ ಗೌರವವಾಗಿದೆ.
ನಾಯಕತ್ವ ಒಂದು ಪದವಿಯಲ್ಲ – ಅದು ಒಂದು ಜವಾಬ್ದಾರಿ.” ಈ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಆರ್.ಜಿ. ಶ್ರೀನಿವಾಸಮೂರ್ತಿ ಅವರು, ಸೇವೆ, ಸಂಘಟನೆ, ನಾಯಕತ್ವ ಮತ್ತು ಮಾನವೀಯತೆಯ ಸಮನ್ವಯದ ಮೂಲಕ ಲಯನಿಸಂಗೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿರುವ ಶ್ರೇಷ್ಠ ಸೇವಾನಿಷ್ಠ ನಾಯಕರು.
ಇವರ ಧರ್ಮಪತ್ನಿ ಹೇಮಶ್ರೀನಿವಾಸ್. ಇವರಿಗೆ ಏಕೈಕ ಪುತ್ರ ಶ್ರೀಕರ್ ಪುನೀತ್ ಹಾಗೂ ಸೊಸೆಯ ಸೌಮ್ಯ ಮಾನಸ ಇದ್ದು, ಇಬ್ಬರು ಮೊಮ್ಮಕ್ಕಳೊಂದಿಗೆ ಇವರದು ಅನ್ಯೋನ್ಯತೆ, ಪ್ರೀತಿ ಹಾಗೂ ಸಂತಸದಿAದ ಕೂಡಿದ ಸುಖೀ ಕುಟುಂಬ.
317 – ಊ ನ ಜಿಲ್ಲಾ ಗೌರ್ನರ್ ಅಗಿ ಇಂದು ಅಧಿಕಾರ ಸ್ವಿಕರಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ಮತ್ತು ಸಂತೋಷ ಇವರಿಗೆ ಭಗವಂತ ಅರೋಗ್ಯ ನೆಮ್ಮದಿ ಕಲ್ಪಿಸಲಿ ಎಂದು ಹಾರೈಸೋಣ.

ಹೆಚ್.ವಿ.ಮಂಜುನಾಥಸ್ವಾಮಿ
