ಜಗಜ್ಜಾಹೀರುಗೊಂಡ ಪಾಕ್ ನ ಹೇಡಿತನ ಮತ್ತು ಟ್ರಂಪ್ ನ ಡಬಲ್ ಗೇಮ್!
ಮಂಗಳೂರು: ಕಾಶ್ಮೀರದ ಪಹಲ್ಗಾಮನಲ್ಲಿ 26 ಮಂದಿ ಅಮಾಯಕ ಭಾರತೀಯರನ್ನು ಪಾಪಿ ಪಾಕಿಸ್ತಾನ ಕೃಪಾಪೋಷಿತ ಉಗ್ರರ ರುಂಡ ಗಳನ್ನು ಚೆಂಡಾಡಿ ಉಗ್ರರ ಭದ್ರ ನೆಲೆಗಳನ್ನು ಛಿದ್ರ ಗೊಳಿಸಲೇಬೇಕೆಂದು ಪಣತೊಟ್ಟು ಆಪರೇಷನ್ ಸಿಂಧೂರ್ ಹೆಸರಲ್ಲಿ ಕಾರ್ಯಾಚರಣೆಗಿಳಿದಿದ್ದ ಭಾರತದ ಪ್ರಧಾನಿ ಮೋದಿ ಹಾಗೂ ಭಾರತದ ಮೂರು ಸೇನೆಗಳ ಯುದ್ಧೋತ್ಸಾಹಕ್ಕೆ ಹೆದರಿ ಪಾಪಿ ಪಾಕ್, ಅಮೇರಿಕಾದ ಅಧ್ಯಕ್ಷ ಟ್ರಂಪ್ ನ ಕಾಲಿಗೆ ಬಿದ್ದು ಅಂಗಾಲಾಚಿ ಕೊಂಡ ಪರಿಣಾಮ ಟ್ರಂಪ್ ಮಧ್ಯಪ್ರವೇಶಿಸಿ ಅಡ್ಡಬಂದ ಕಾರಣ ಉಗ್ರರ ಸ್ವರ್ಗವೆನಿ ಸಿಕೊಂಡಿರುವ ಪಿಓಕೆಯನ್ನು ವಶಪಡಿಸಿಕೊಳ್ಳುವ ಮೂಲಕ ಭಯೋತ್ಪಾದನೆಯ ಮೂಲವನ್ನೇ ಮಟ್ಟ ಹಾಕಬೇಕೆಂಬ ಯತ್ನದಲ್ಲಿದ್ದ ಭಾರತದ ಕನಸು ಹಾಗೂ ಪ್ರಯತ್ನಕ್ಕೆ ಕದನ ವಿರಾಮದಿಂದಾಗಿ ಅಲ್ಪವಿರಾಮ ಸಿಕ್ಕಂತಾಗಿದೆ.
ಆಪರೇಷನ್ ಸಿಂಧೂರ್ ಹೆಸರಲ್ಲಿ ಆಕ್ರಮಿತ ಕಾಶ್ಮೀರ ಸೇರಿದಂತೆ ಪಾಕ್ ನ ನೆಲದಲ್ಲಿ ನೆಲೆ ನಿಂತಿದ್ದ ಉಗ್ರರ ನೆಲೆಗಳನ್ನು ಧ್ವಂಸಗೆಯುತ್ತಾ ಉಗ್ರರನ್ನು ಛಿದ್ರಗೊಳಿಸುತ್ತಲೇ ಪಾಪಿ ಪಾಕಿಸ್ತಾನದ ಪ್ರತಿರೋಧಕ್ಕೆ ಭಾರತದ ಮೂರು ಸೇನೆಗಳು ದಿಟ್ಟವಾಗಿ ತೀಕ್ಷ್ಣ ಪ್ರತ್ಯುತ್ತರ ಕೊಡುತ್ತಾ ಜಂಭ ಕೊಚ್ಚಿಕೊಳ್ಳುತ್ತಿದ್ದ ಪಾಕ್ ನ ಪ್ರಧಾನಿ ಮತ್ತು ಪಾಕ್ ನ ರಕ್ಷಣಾ ಸಚಿವರೇ ಬಂಕರ್ ಗಳಲ್ಲಿ ಅಡಗಿ ಕುಳಿತುಕೊಳ್ಳುವಂತೆ ಮಾಡಿ ಪಾಪಿಸ್ಥಾನದ ಜಂಘಾ ಬಲವನ್ನೇ ಅಡಗಿಸುವಲ್ಲಿ ಭಾರತದ ಮೂರು ಸೇನೆಗಳು ಸಫಲವಾಗಿದ್ದವು.
ಪಾಕ್ ನ ನೆಲದೊಳಕ್ಕೆ ನುಗ್ಗಿ ಹೊಡೆದು ಕಂಡು ಕೇಳರಿಯದಂತೆ ಬಗ್ಗು ಬಡಿಯುವ ಭಾರತದ ಒಂದೊಂದು ಏಟನ್ನೂ ಜೀರ್ಣಿಸಿಕೊಳ್ಳಲಾರದ ಪಾಕ್, ಕೊನೆಗೂ ಭಾರತ ಪಿಓಕೆ ಯನ್ನು ವಶಪಡಿಸಿಕೊಂಡು ತನ್ನನ್ನು ಮಕಾಡೆ ಮಲಗಿಸುತ್ತದೆ ಎಂಬ ಭಯದಿಂದ ನೇರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ ನ ಕಾಲಿಗೆ ಅಡ್ಡ ಬಿದ್ದು ಭಾರತದ ಏಟಿನಿಂದ ತನ್ನನ್ನು ಬಚಾವ್ ಮಾಡಬೇಕೆಂದು ಅಂಗಾಲಾಚಿಕೊಂಡಿತ್ತು.
ಆದರೆ ಟ್ರಂಪ್ ಗೂ ಕೂಡ ಇದೇ ಬೇಕಾಗಿತ್ತು.ಪಾಕ್ ಯಾವತ್ತಾದರೂ ತನ್ನ ಮುಂದೆ ಅಡ್ಡ ಬಿದ್ದು ಅಂಗಾಲಾಚಿ ಕೊಂಡೇಕೊಳ್ಳುತ್ತದೆ; ಆಗ ತನ್ನ ಗೇಮನ್ನು ಶುರು ಮಾಡಿ ಕೊಳ್ಳಬೇಕೆಂಬ ನಿರೀಕ್ಷೆಯಲ್ಲಿದ್ದ ಅಮೆರಿಕಾದ ಅಧ್ಯಕ್ಷ ಟ್ರಂಪ್ ಜಗತ್ತಿನ ಮುಂದೆ ತನ್ನ ದೊಡ್ಡಸ್ತಿಕೆ ತೋರಿಸಿಕೊಳ್ಳುವ ಉದ್ದೇಶದಿಂದ ಭಾರತ ಮತ್ತು ಪಾಕ್ ನ ಮಧ್ಯೆ ಮೂಗು ತೂರಿಸಿ ಕದನ ವಿರಾಮಕ್ಕೆ ಒಪ್ಪಿಕೊಳ್ಳಲೇಬೇಕೆಂಬ ಒತ್ತಡವನ್ನು ಭಾರತಕ್ಕೆ ಹಾಕಿದ್ದರ ಪರಿಣಾಮವಾಗಿ ಭಾರತ ಕೊನೆಗೂ ಯುದ್ಧವಿ ರಾಮಕ್ಕೆ ಒಪ್ಪಿಕೊಳ್ಳಲೇ ಬೇಕಾಯಿತು.
ಯಾಕೆಂದರೆ ಅಮೆರಿಕವು ಭಾರತಕ್ಕೆ ಹಲವು ಅತ್ಯಾಧುನಿಕ ಯುದ್ಧವಿಮಾನ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳ ಸಹಿತ ಸಾಲಗಳನ್ನೂ ನೀಡಿದೆ.ಅಲ್ಲದೆ ಭಾರತದ ಜೊತೆಗೆ ಹಲವು ಅಭಿವೃದ್ಧಿ ಪೂರಕ ಮತ್ತು ವಾಣಿಜ್ಯ ಹಾಗೂ ವ್ಯಾಪಾರ ಸಂಬಂಧಿ ಬೃಹತ್ ಒಪ್ಪಂದಗಳನ್ನು ಮಾಡಿಕೊಂಡಿರುವುದರಿಂದ ಭಾರತವು ಒಂದು ಹಂತದಲ್ಲಿ ಅಮೆರಿಕಾದ ಮಾತನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಆದರೆ ಕದನ ವಿರಾಮಕ್ಕೆ ಒಪ್ಪಿಕೊಂಡ ಮಾತ್ರಕ್ಕೆ ಯುದ್ಧವನ್ನೇ ಮಾಡುವುದಿಲ್ಲ ಎಂಬುದು ಭಾರತದ ನಿಲುವಲ್ಲ. ಗಮನಾರ್ಹ ಸಂಗತಿಯೇನೆಂದರೆ ಪ್ರಧಾನಿ ಮೋದಿ,ಪಾಪಿ ಪಾಕಿಸ್ತಾನಕ್ಕೆ ಕೊಡುವ ಏಟನೆಲ್ಲ ಕೊಟ್ಟು,ಮೊನ್ನೆ ಪೆಹಲ್ಗಾಮ್ನಲ್ಲಿ ಪಾಕಿಸ್ತಾನದ ಭಯೋತ್ಪಾದಕರಿಂದ ನಡೆದ 26 ಮಂದಿ ಭಾರತೀಯರ ಹತ್ಯೆಗೂ ಪ್ರತೀಕಾರವನ್ನು ತೀರಿಸಿಕೊಂಡು ಪಾಕಿಸ್ತಾನವನ್ನು ವಿರೋಧಿಸುವ ಮತ್ತು ಭಾರತವನ್ನು ಬೆಂಬಲಿಸುವ ಬಲೂಚಿಸ್ತಾನವೆಂಬ ಪ್ರತ್ಯೇಕ ರಾಷ್ಟ್ರ ನಿರ್ಮಾಣವಾಗುತ್ತದೆ ಎಂಬ ಸೂಕ್ಷ್ಮತೆಯನ್ನು ಅರಿತು ಕೊಂಡೇ ಕೊನೆ ಕ್ಷಣದಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದು ಮೋದಿಯವರ ಬಹಳ ಸೂಕ್ಷ್ಮ ರಾಜತಾಂತ್ರಿಕ ನಡೆಯಾಗಿದೆ. ಮೋದಿಯವರ ಈ ಚಾಣಾಕ್ಷ ನಡೆಯಿಂದ ಇದೀಗ ಒಂದು ಕಲ್ಲಿನಿಂದ ಮೂರು ಹಣ್ಣುಗಳನ್ನು ಉದುರಿಸಿದಂತಾಗಿದೆ. ಅದೇನೆಂದರೆ ಜಗತ್ತಿನ ದೊಡ್ಡಣ್ಣನಂತೆ ಫೋಸು ಕೊಡುತ್ತಿರುವ ಟ್ರಂಪ್ ಮಾತಿಗೂ ಬೆಲೆಕೊಟ್ಟಂತಾಗಿ, ಪಾಕ್ ಗೂ ಕೂಡ ತಕ್ಕ ಪಾಠ ಕಲಿಸಿ, ಇತ್ತ ಬಲೂಚಿ ಸ್ಥಾನ ರಚನೆಗೂ ಪರೋಕ್ಷ ಕಾರಣವಾಗಿ ಮುಂದಕ್ಕೆ ನಿಧಾನವಾಗಿ ಪಿಓಕೆಯ ಮೇಲೆ ಪಾಕ್ ನ ಹಿಡಿತವನ್ನು ತಪ್ಪಿಸುವುದು ಮೋದಿಯವರ ಅತ್ಯಂತ ಸೂಕ್ಷ್ಮ ಚಾಣಾಕ್ಷ ನಡೆಯಾಗಿದೆ. ಆದರೆ ಮೋದಿಯವರ ಅತ್ಯಂತ ಸೂ ಕ್ಷ್ಮವಾಗಿರುವ ಈ ಚಾಣಾಕ್ಷ ನಡೆ ಬಹುತೇಕರಿಗೆ ಅರ್ಥವಾಗುತ್ತಿಲ್ಲ.
ಕದನ ವಿರಾಮಕ್ಕೆ ಟ್ರಂಪ್ ಭಾರತವನ್ನು ಒತ್ತಾಯಿಸಿದ್ದೇಕೆ?
ಮೊನ್ನೆ ಪಾಕ್ ನ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಸಂದರ್ಭ ಪಾಕ್ ನ ನೆರವಿಗೆ ಧಾವಿಸಿದ ಟರ್ಕಿ ತನ್ನ ಅತ್ಯಾಧುನಿಕ ಕ್ಷಿಪಣಿ ಹಾಗೂ ಯುದ್ಧ ನೌಕೆಗಳನ್ನು ಕಳುಹಿಸಿಕೊಟ್ಟಿತ್ತು.ಅದೇ ರೀತಿ ಚೀನಾ ಕೂಡ ಅತ್ಯಧುನಿಕ ಡ್ರೋನ್ ಗಳನ್ನು ಗುಟ್ಟಾಗಿ ಕಳುಹಿಸಿಕೊಟ್ಟು ಪಾಕ್ ಬೆಂಬಲಕ್ಕೆ ನಿಂತಿತ್ತು. ಆದರೆ ಭಾರತದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮುಂದೆ ಟರ್ಕಿ ಹಾಗೂ ಚೀನಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳೆಲ್ಲವೂ ಕ್ಷಣಾರ್ಧದಲ್ಲಿ ಪುಡಿಗೈಯ್ಯಲ್ಪಟ್ಟಿದ್ದವು. ಇದರಿಂದಾಗಿ ಭಾರತದ ಯುದ್ಧ ತಂತ್ರ ಮತ್ತು ಭಾರತದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಗೆ ಇಡೀ ಜಗತ್ತೇ ಅಚ್ಚರಿಯಿಂದ ನಿಬ್ಬೆರಗಾಗಿತ್ತು. ಆದರೆ ಭಾರತದ ಜೊತೆ ಸ್ನೇಹಿತನಂತೆ ವರ್ತಿಸುತ್ತಲೇ ಡಬಲ್ ಗೇಮ್ ಆಟ ಆಡುವ ಟ್ರಂಪ್ ಗೆ ಭಾರತ ತನಗಿಂತಲೂ ಬಲಿಷ್ಠ ರಾಷ್ಟ್ರ ಎಂದೆನಿಸಿಕೊಳ್ಳುವುದು ಇಷ್ಟವಿಲ್ಲ. ಹೀಗಾಗಿ ಭಾರತ ತನ್ನ ಅತ್ಯಧುನಿಕ ಶಸ್ತ್ರಾಸ್ತ್ರಗಳಿಂದ,ಟರ್ಕಿ ಚೀನಾದಂತಹ ರಾಷ್ಟ್ರಗಳ ಶಸ್ತ್ರಾಸ್ತ್ರಗಳನ್ನು ಸಹಾ ಪುಡಿಗಟ್ಟಿ ಪಾಕನ್ನು ಪಾಕ ಮಾಡಿದರೆ ತನಗಿಂತಲೂ ಭಾರತ ಬಲಿಷ್ಠ ರಾಷ್ಟ್ರವೆಂದನಿ ಸಿಕೊಳ್ಳುತ್ತದೆ, ಭಾರತದ ದಾಳಿಗೆ ಪಾಕ್ ಸಂಪೂರ್ಣ ಮಕಾಡೆ ಮಲಗಿದರೆ ತಾನು ಪಾಕ್ ಗೆ ನೀಡಿದ್ದ ಸಾಲ ತನಗೆ ಮರುಪಾವತಿಯಾಗುವುದು ಕಷ್ಟ. ಜೊತೆಗೆ ಶಸ್ತ್ರಾಸ್ತ್ರಗಳ ಹೊರತಾಗಿ ವಾಣಿಜ್ಯ ವ್ಯಾಪಾರಗಳ ಸಹಿತ ಬಹುತೇಕ ಎಲ್ಲದಕ್ಕೂ ತನ್ನನ್ನೇ ಆಶ್ರಯಿಸಿಕೊಂಡಿರುವ ಪಾಕ್ ಮುಂದೆ ತನ್ನ ಸಾಲಗಾರ ದೇಶವಾಗಿ ಮುಂದುವರಿಯುವುದು ಕಷ್ಟ ಎಂಬ ಕಾರಣದಿಂದಾಗಿ ಮತ್ತು ಅದಕ್ಕಿಂತಲೂ ಮುಖ್ಯವಾಗಿ ತಾನು ಜಗತ್ತಿನಲ್ಲೇ ದೊಡ್ಡಣ್ಣನೆನೆಸಿಕೊಳ್ಳಬೇಕೆಂಬ ಹಪಾಹಪಿಯಿಂದ ಟ್ರಂಪ್, ಭಾರತ ಮತ್ತು ಪಾಕ್ ಮಧ್ಯೆ ಮೂಗು ತೂರಿಸಿಕೊಂಡು ಬಂದು ಯುದ್ಧವಿರಾಮಕ್ಕೆ ಭಾರತಕ್ಕೆ ಒತ್ತಡವನ್ನು ತಂದಿರುವುದು ಸ್ಪಷ್ಟವಾಗುತ್ತಿದೆ.