ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಋಕ್ ಸಂಹಿತಾ ಯಾಗ ಹಾಗೂ ಶ್ರೀಮದ್ಭಾಗವತ ಸಪ್ತಾಹ ಮಹೋತ್ಸವದಲ್ಲಿ ಉಡುಪಿ ಶ್ರೀ ಕೃಷ್ಣಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹಾಗು ಪ್ರಸಿದ್ಧ ಚತುರ್ಭಾಷಾ ಚಲನಚಿತ್ರ ಕಲಾವಿದರಾದ ಸಂಪತ್ ರಾಜ್ ಅವರು ಭಾಗವಹಿಸಿದರು.

ಉಡುಪಿಯ ನಿಕಟಪೂರ್ವ ಶಾಸಕರು, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕೆ. ರಘುಪತಿ ಭಟ್ ದಂಪತಿಗಳು ಶ್ರೀಪಾದರಿಗೆ ಪಾದ ಪೂಜೆ ನೆರವೇರಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮತ್ತು ಗುರಿಕಾರರು ಉಪಸ್ಥಿತರಿದ್ದು, ಶ್ರೀಪಾದರನ್ನ ಗೌರವಯುತವಾಗಿ ಬರಮಾಡಿಕೊಂಡರು.

ವರದಿ ವಿನೋದ್ ಶೆಟ್ಟಿ ಉಡುಪಿ

