ಹೈದರಾಬಾದ್: ಈಗಿನ ಕಾಲದಲ್ಲಿ ಮನುಷ್ಯರು ಮಾನವೀಯತೆ ಮರೆತೇ ಬಿಟ್ಟಿದ್ದಾರೆ. ತಮ್ಮಂತೆ ಜೀವವಿರುವ ಮಾತು ಬಾರದ ಮೂಕ ಪ್ರಾಣಿಗಳ ಜೊತೆಗೆ ಅಮಾನುಷವಾಗಿ ವರ್ತಿಸಿ ತಮ್ಮ ಕೋಪ ಸಿಟ್ಟನ್ನು ತೀರಿಸಿಕೊಳ್ಳುವುದನ್ನು ನೋಡಿರಬಹುದು. ಇದೀಗ ಇಂತಹದ್ದೆ ಘಟನೆಯೊಂದು ಹೈದರಾಬಾದ್ನ ಫತೇನಗರ ದಲ್ಲಿ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಹೋಮ್ ವ್ಯಾಲಿ ಅಪಾರ್ಟ್‌ಮೆಂಟ್ ನ ನೆಲಮಾಳಿಗೆಯಲ್ಲಿ ವ್ಯಕ್ತಿಯೊಬ್ಬರು ನವಜಾತ ಮರಿಗಳನ್ನು ಎತ್ತಿ ಎತ್ತಿ ನೆಲಕ್ಕೆ ಬಡಿಯುತ್ತಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಅಪಾರ್ಟ್‌ಮೆಂಟ್ ನೆಲಮಾಳಿಗೆಯಲ್ಲಿ ವ್ಯಕ್ತಿಯೊಬ್ಬರು ನಾಯಿ ಜೊತೆಗೆ ಓಡಾಡುತ್ತಿರುವುದನ್ನು ನೋಡಬಹುದು. ಈ ವೇಳೆಯಲ್ಲಿ ನಾಯಿಮರಿಗಳ ಹತ್ತಿರ ಹೋಗಿ ವ್ಯಕ್ತಿಯೂ ನಾಯಿಮರಿಗಳನ್ನು ಎತ್ತಿಕೊಂಡು ನೆಲಕ್ಕೆ ಹೊಡೆದು, ಕಲ್ಲಿನಿಂದ ಜಜ್ಜುತ್ತಿರುವುದನ್ನು ನೋಡಬಹುದು. ಅಷ್ಟೇ ಅಲ್ಲದೇ, ಆ ನಾಯಿಮರಿಗಳು ಸತ್ತಿದೆಯೇ ಎಂದು ನೋಡಿ ಮತ್ತೆ ಕೈಯಿಂದ ಗುದ್ದುತ್ತಿದ್ದಾನೆ. ಈ ವೇಳೆಯಲ್ಲಿ ತಾಯಿ ನಾಯಿಯೊಂದು ಅತ್ತಿಂದ ಇತ್ತ ಓಡಾಡುತ್ತಿದೆ.
ಈ ವಿಡಿಯೋವೊಂದು ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಬಳಕೆದಾರರು ಈ ವ್ಯಕ್ತಿಯ ವಿರುದ್ಧ ಗರಂ ಆಗಿದ್ದು ಖಾರವಾಗಿಯೇ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ಈತನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ‘ನೀವೇನು ಮನುಷ್ಯರೋ, ಮಾತು ಬಾರದ ಪ್ರಾಣಿಗಳನ್ನು ಕೊಂದರೆ ಆ ಶಾಪ ನಿಮ್ಮನ್ನು ತಟ್ಟದೇ ಬಿಡದು’ ಎಂದಿದ್ದಾರೆ. ಮತ್ತೊಬ್ಬರು, ‘ಅವನು ಮನುಷ್ಯನೇ ಅಲ್ಲ, ಅವನ ನಡವಳಿಕೆಯೂ ಕೆಟ್ಟದ್ದಾಗಿದೆ. ಈ ವ್ಯಕ್ತಿಗೆ ಖಂಡಿತ ಶಿಕ್ಷೆಯಾಗಬಹುದು. ಇಂತಹ ಘಟನೆಗಳನ್ನು ನೋಡಿದಾಗ ಮಾನವೀಯತೆ ಅನ್ನೋದೇ ಇಲ್ಲ ಎಂದೆನಿಸುತ್ತದೆ’ ಎಂದಿದ್ದಾರೆ.
ಈ ಐದು ನಾಯಿಮರಿಗಳನ್ನು ಕೊಂದ ಈ ವ್ಯಕ್ತಿಯೂ ಉದ್ಯಮಿಯಾಗಿದ್ದು, ಈತನನ್ನು ಆಶಿಶ್ ಎಂದು ಗುರುತಿಸಲಾಗಿದೆ. ಈಗಾಗಲೇ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಾನು ಮಾಡಿದ ತಪ್ಪನ್ನು ಆರೋಪಿಯೂ ಒಪ್ಪಿಕೊಂಡಿದ್ದು, ಈ ಘಟನೆಗೆ ಸಂಬಂಧ ಪಟ್ಟಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.