ಯುವಶಕ್ತಿ ರಕ್ತನಿಧಿ ಮಂಗಳೂರು ವತಿಯಿಂದ ಸ್ನೇಹಿತರ ದಿನಾಚರಣೆ ಕಾರ್ಯಕ್ರಮ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

0
25

ಕಲ್ಲಡ್ಕ : ಯುವಜನತೆ ರಕ್ತದಾನ ಶಿಬಿರ ದಂತಹ ಕಾರ್ಯಕ್ರಮಗಳ ಮೂಲಕ ಜೀವದಾನದ ಕೆಲಸವನ್ನು ನಿರ್ವಹಿಸಿದಾಗ ಆರೋಗ್ಯವಂತ ಸಮಾಜದ ರಚನೆಯಾಗಿ ದೇಶದ ಭದ್ರ ಅಡಿಪಾಯವನ್ನು ರಚಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಇಂದಿನ ಯುವಕರು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಉತ್ತಮ ಹವ್ಯಾಸವನ್ನು ಬೆಳೆಸಿಕೊಂಡಿರುವುದು ಅಭಿನಂದನೀಯವಾಗಿದೆ ಎಂದು ಮಾಜಿ ಸೈನಿಕ ಚಂದ್ರಶೇಖರ್ ಮೃಗಶಿರ ತೆಕ್ಕಿಪಾಪು ಹೇಳಿದರು.

ಅವರು ಆಗಸ್ಟ್ 2 ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಮಜಿ ವೀರಕಂಬ ಇಲ್ಲಿ ಸ್ನೇಹಿತರ ದಿನಾಚರಣೆಯ ಪ್ರಯುಕ್ತ ಯುವಶಕ್ತಿ ರಕ್ತ ನಿಧಿ ಮಂಗಳೂರು ಇದರ ಆಶ್ರಯದಲ್ಲಿ ಕೆ ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು, ಓಂ ಶ್ರೀ ಸಾಯಿಗಣೇಶ ಸೇವಾ ಸಂಘ ಕಲ್ಲಡ್ಕ, ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರಾಥಮಿಕ ಶಾಲೆ ಮಜಿ ವೀರಕಂಭ, ಮಾತೃಶ್ರೀ ಗೆಳೆಯರ ಬಳಗ ವೀರಕಂಭ, ಯುವಶಕ್ತಿ ಫ್ರೆಂಡ್ಸ್ ವೀರಕಂಭ, ಯುವಕೇಸರಿ ಫ್ರೆಂಡ್ಸ್ ಅರೆಬೆಟ್ಟು, ಸ್ವಸ್ತಿಕ್ ಫ್ರೆಂಡ್ಸ್ ಅಂಕದಡ್ಕ, ಕೇಸರಿ ಫ್ರೆಂಡ್ಸ್ ಕೆಲಿಂಜ, ಓಂಕಾರ ಫ್ರೆಂಡ್ಸ್ ವೀರಕಂಭ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಇದರ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ , ಕೋಡಿ ಫ್ರೆಂಡ್ಸ್ ಸರ್ಕಲ್ ಕರಿಂಗಾಣ ಕೋಡಿ ಅಮ್ಟೂರು ಈ ಎಲ್ಲಾ ಸಂಘ ಸಂಸ್ಥೆಗಳು ಸಹಕಾರದೊಂದಿಗೆ ನಡೆದ ಬ್ರಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ‌

ಕಾರ್ಯಕ್ರಮದಲ್ಲಿ ಕೆ ಎಂ ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇಲ್ಲಿನ ಡಾಕ್ಟರ್ ತರುಣ್ ನಾಯಕ್ ತಂಡ ದಾನಿಗಳಿಂದ 98 ಯೂನಿಟ್ ರಕ್ತ ಸಂಗ್ರಹಿಸಿದರು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡ ಯುವ ಸೇವಾಪಥದ ಸಕ್ರಿಯ ಸದಸ್ಯ ರಾಮಚಂದ್ರ ಸಾಲಿಯಾನ್ ಗಣೇಶ್ ಕೋಡಿ ವಂದಿಸಿದರು. ವೀರಕಂಭ ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು.