ಮುಲ್ಕಿ: “ಉಂದು ತುಳುವೆರೆನ ಭವಿಷ್ಯ ಕಟ್ಟುನ ಪುನೆಪು” ಎಂಬ ಮಹಾ ಧ್ಯೇಯದೊಂದಿಗೆ, ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ (ರಿ.) ನೇತೃತ್ವದಲ್ಲಿ ಮುಲ್ಕಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್ 23, 2026 ರಂದು ಹಮ್ಮಿಕೊಳ್ಳಲಾಗಿದ್ದ ‘ತುಳುನಾಡ್ ಕಾನ್ಕ್ಲೇವ್ – 2026’ ಕಾರ್ಯಕ್ರಮವು ತುಳು ನಾಡು-ನುಡಿಯ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಅದ್ಭುತ ಯಶಸ್ಸು ಕಂಡಿತು.
ಬೆಳಗ್ಗೆ 10:00 ಗಂಟೆಗೆ ವಿಧ್ಯುಕ್ತ ಉದ್ಘಾಟನೆಯೊಂದಿಗೆ ಆರಂಭಗೊಂಡ ಈ ಮಹಾಸಮಾವೇಶವು ಬೆಳಗಿನಿಂದ ಸಂಜೆವರೆಗೆ ತುಳುವಿನ ಜವನೆರನ್ನು ಒಟ್ಟುಗೂಡಿಸಿ, ಸಮಾಜಕ್ಕೆ ಮಾರ್ಗದರ್ಶನ ನೀಡುವ ಅತ್ಯುತ್ಕೃಷ್ಟ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯಿತು.
ಡಿಜಿಟಲ್ ಪರದೆಯ ಮೂಲಕ ಪ್ರದರ್ಶಿಸಲ್ಪಟ್ಟ ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ದೃಶ್ಯಾವಳಿಗಳು ನೋಡುಗರ ಮನಸೂರೆಗೊಂಡವು
ಯುವ ಒಮ್ಮತದ ಮಹಾ ಚಿಂತನೆ:- ಗಣ್ಯರ ಮಾರ್ಮಿಕ ನುಡಿಗಳು ಸಂಜೆ ನಡೆದ ‘ಸೊಲ್ಮೆದ ಕಲ’ ಸಭಾ ಕಾರ್ಯಕ್ರಮದಲ್ಲಿ ತುಳುನಾಡಿನ ಹಿರಿಯ ದಿಗ್ಗಜರು ಹಾಗೂ ಮುಖಂಡರು ಭಾಗವಹಿಸಿ ಭವಿಷ್ಯದ ರೂಪುರೇಷೆಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದರು.

ಉದಯ್ ಶೆಟ್ಟಿ ಮುನಿಯಾಲ್ ಮಾತನಾಡಿ, “ತುಳುನಾಡಿನ ಪ್ರತಿ ತಾಲೂಕಿನಲ್ಲಿಯೂ ತುಳು ಭವನ ಆಗಬೇಕಿದೆ ಜೊತೆಗೆ ತುಳುವನ್ನು ಬೆಳೆಸುವ ಕೆಲಸ ನಾವೆಲ್ಲರೂ ಸೇರಿ ಮಾಡಬೇಕಿದೆ” ಎಂದು ಸ್ಪಷ್ಟ ಸಂದೇಶ ನೀಡಿದರು.
ತುಳು ವರ್ಲ್ಡ್ ಫೌಂಡೇಶನ್ ಸ್ಥಾಪಕರಾದ ಡಾ. (hc) ರಾಜೇಶ್ ಆಳ್ವ ಧ್ವನಿಗೂಡಿಸಿ, “ತುಳು ಎಂಬುದು ಕೇವಲ ಭಾಷೆಯಲ್ಲ ಅದು ಜೀವನ. ಸಾವಿರಾರು ವರ್ಷಗಳ ಹಿಂದೆಯೇ ತುಳು ಭಾಷೆ ಇತ್ತು, ತುಳುವರಿಗೆ ತುಳುವೇಶ್ವರ ಮತ್ತು ತುಳುವೇಶ್ವರಿ ಆರಾಧನಾ ಕೇಂದ್ರವಿದೆ, ಈಗ ಈ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೆತ್ತಿಕೊಳ್ಳಲಾಗಿದೆ. ತುಳುವ ಮನಸ್ಕರೆಲ್ಲರೂ ಜಾತಿ ಭೇದ ಮರೆತು ಒಂದಾಗಿ ಈ ಕೆಲಸದಲ್ಲಿ ಕೈಜೋಡಿಸಬೇಕಿದೆ” ಎಂದು ಕರೆ ನೀಡಿದರು.
ಸಾಹಿತ್ಯ ಲೋಕದ ಹೆಮ್ಮೆಯ ಸಂಭ್ರಮ ಹಾಗೂ ಪ್ರಶಸ್ತಿ ಗರಿ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸಾಹಿತ್ಯ ಕೃತಿಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಬಿರ್ದಾಳಿ ಸನ್ಮಾನ ಜರುಗಿತು.
ಜೀವಮಾನೋ ಸಾಧಕೋ ಬಿರ್ದಾಳಿ (“ತುಳುವಾಲ ಕುಲಸಿರಿ”): ಹಿರಿಯ ದೈವ ಪಾತ್ರಿಗಳಾದ ಶ್ರೀ ಶೀನ ಪಾತ್ರಿ, ನಂದಿಕೂರು ಅವರಿಗೆ ತುಳು ಪರಂಪರೆಗೆ ಅವರು ನೀಡಿದ ಅನನ್ಯ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ಪುಸ್ತಕ ಲೋಕಾರ್ಪಣೆ:- ‘ಕಾಂತಾಬಾರೆ ಬೂದಾಬಾರೆ’, ‘ಬೀರದ ಬೊಲ್ಪು , ‘ಅಪ್ಪೆ’, ‘ವಜ್ರದಾರಿಗೆ’, ಹಾಗೂ ‘ಜೀಟಿಗೇ’ ಎಂಬ ಐದು ಪ್ರಮುಖ ಕೃತಿಗಳು ಬಿಡುಗಡೆಗೊಂಡವು.
ಪಂತೊ ಬಹುಮಾನ ವಿತರಣೆ:-
“ತುಳು ಕಬಿತೆ ಪಂತೊ – 2026”, “ಚಿತ್ರಕಲಾ ಪಂತೊ – 2026”, ಮತ್ತು “ಪಾತೆರೋದ ಬಿರ್ಸೆರ್ – 2026” ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಯುವ ಪಡೆಯ ಅಚ್ಚುಕಟ್ಟು ನಿರ್ವಹಣೆ:-
ಮಹಿ ಮುಲ್ಕಿ (ಸ್ಥಾಪಕರು) ಅವರ ಮಾರ್ಗದರ್ಶನದಲ್ಲಿ, ನಿಶ್ಚಿತ್ ರಾಮಕುಂಜ (ಅಧ್ಯಕ್ಷರು), ಅಭಿಷೇಕ್ ಕೆ. (ಉಪಾಧ್ಯಕ್ಷರು), ಸುಶಾನ್ ಕೋಟ್ಯಾನ್ (ಕಾರ್ಯದರ್ಶಿ), ಬ್ಲೆನ್ಸನ್ ಕಾರ್ಡೋಜಾ (ಖಜಾಂಚಿ), ಪೃಥ್ವಿರಾಜ್ ಎಂ.ಕೆ. (ಪುಣ್ಣಮೆ ಪ್ರಕಾಶನ ಸಂಚಾಲಕರು) ಹಾಗೂ ಕಾನ್ಕ್ಲೇವ್ ಸಂಚಾಲಕರಾದ ರಜತ್ ಬೋಳ, ಗಗನ್ ರೈ, ಸುವಿತ್ ಎಸ್ ಶೆಟ್ಟಿ, ಅಕ್ಷಯ್ ಎಸ್ ರೈ ಅವರ ಯುವ ತಂಡ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿತು.
ವೇದಿಕೆ ನಿರ್ವಹಣೆ:- ಸುವಿತ್ ಶೆಟ್ಟಿ (ನಿರೂಪಣೆ), ಅಭಿಷೇಕ್ ಕೆ (ಸ್ವಾಗತ), ಸುಶಾನ್ ಕೋಟ್ಯಾನ್ (ಪ್ರಸ್ತಾವನೆ), ನಿಶ್ಚಿತ್ ರಾಮಕುಂಜ (ಅಧ್ಯಕ್ಷೀಯ ಭಾಷಣ) ಹಾಗೂ ಮಹಿ ಮುಲ್ಕಿ (ಸೊಲ್ಮೆಲು/ವಂದನಾರ್ಪಣೆ).
ಗಣ್ಯರ ಉಪಸ್ಥಿತಿ:- ಡಾ| ವಾಸುದೇವ ಬೆಳ್ಳೆ (ಪ್ರಾಂಶುಪಾಲರು, ಸರಕಾರಿ ಪ.ಪೂ. ಕಾಲೇಜು, ಮುಲ್ಕಿ), ದಿನೇಶ್ ಸುವರ್ಣ ರಾಯಿ, ಅಶೋಕ್ ಕುಮಾರ್ ಶೆಟ್ಟಿ, ಕುಶಾಲಾಕ್ಷಿ ವಿ. ಕುಲಾಲ್ ಕಣ್ಣತೀರ್ಥ, ಭಾನುಮತಿ ಶೆಟ್ಟಿ ಕಕ್ವಗುತ್ತು, ಕುಮಾರಿ ರೂಪಿಕಾ ಶೆಟ್ಟಿ ಹಾಗೂ ಶಾರದಾಮಣಿ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.
-ಮಂದಾರ ರಾಜೇಶ್ ಭಟ್

