ಬಂಟ್ವಾಳ: ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿಯಲ್ಲಿ ಕೊಳತ್ತಮಜಲು ನಿವಾಸಿ ಪಿಕಪ್ ಚಾಲಕ ಹನೀಫ್ ಎಂಬಾತನನ್ನು ತಲ್ವಾರಿನಿಂದ ಕಡಿದು ಕೊಲೆಮಾಡಿದ ಘಟನೆ ಮೇ 27 ರಂದು ನಡೆದಿದೆ.
ಇರಾಕೋಡಿ ಎಂಬಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲ್ವಾರ್ ದಾಳಿ ನಡೆಸಿದ್ದಾರೆ.
ಜೊತೆಗಿದ್ದ ರಹೀಮ್ ಎಂಬಾತನ ಮೇಲೂ ದಾಳಿ ನಡೆದಿದೆ.ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.