ಕಾರ್ಕಳ ಮಹಿಳಾ ಒಕ್ಕೂಟದ ಪಟ್ಟಕ್ಕಾಗಿ ಪಗಡೆಯಾಟ ಆದರೂ ಕೂಡ ಒಕ್ಕೂಟ ಸಭೆಯಲ್ಲಿ ಹಳೆಯ ಅಧ್ಯಕ್ಷರ ಗೈರುಹಾಜರಿಯ ಮೇಲೆ ಹೊಸ ಅಧ್ಯಕ್ಷರ ಆಯ್ಕೆ : ರಮಿತಾ ಸೂರ್ಯವಂಶಿ

0
60

ಮಹಿಳಾ ಒಕ್ಕೂಟದ ಅಧ್ಯಕ್ಷರ ಬದಲಾವಣೆ ಆಗಬೇಕೆಂಬ ಪಟ್ಟು ಹಿಡಿದಿದ್ದಿರುವಂತಹ ಅದೆಷ್ಟು ನಿಷ್ಕಲ್ಮಶ ಮಹಿಳೆಯರಿಗೆ ನ್ಯಾಯ ಸಿಕ್ಕಿರುತ್ತದೆ ನವೆಂಬರ್ 6 ರಂದು ಶುಕ್ರವಾರ ಕಾರ್ಕಳ ತಾಲೂಕು ಸಾಂತ್ವನ ಕೇಂದ್ರದಲ್ಲಿ ಕಾರ್ಕಳ ತಾಲೂಕು ಮಹಿಳಾ ಒಕ್ಕೂಟದ ಮಹಾಯಸಭೆ ನಡೆಯಿತು ಈ ಸಭೆಯಲ್ಲಿ ಪ್ರಸ್ತುತ ಅಧ್ಯಕ್ಷರ ಗೈರು ಹಾಜರಿಯಲ್ಲಿ ನೂತನ ಅಧ್ಯಕ್ಷರು ಹಾಗೂ ಇತರೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ ಒಕ್ಕೂಟದ ನೂತನ ಅಧ್ಯಕ್ಷರಾಗಿ ಕಾಂತಿ ಶೆಟ್ಟಿ ಕಾರ್ಯದರ್ಶಿಯಾಗಿ ಪ್ರಭಾವತಿ ಪ್ರಭಾಕರ್ ಹಾಗೂ ಕೋಶಾಧಿಕಾರಿಯಾಗಿ ಅರುಂಧತಿ ಆಚಾರಿ ಆಯ್ಕೆ ಆಗಿರುತಾರೆ.

ಕಾರ್ಕಳ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷ ಸ್ಥಾನ ನಡೆಯುತ್ತಿರುವಂತಹ ಜಟಾಪಟಿ ನಿನ್ನೆದು ಇವತ್ತಿದು ಅಲ್ಲ ಮಹಿಳಾ ಸಾಂತ್ವನ ಕೇಂದ್ರದ ವತಿಯಿಂದ ನಿರ್ಮಾಣಗೊಂಡ ಶಿಶುಪಾಲನ ನೂತನ ಕಟ್ಟಡ ಉದ್ಘಾಟನೆಯ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಮಣಿಗಳ ಕಿತ್ತಾಟ ಜೋರಾಗಿತ್ತು. ಇದರಿಂದ ಸಾರ್ವಜನಿಕ ವಲಯದಲ್ಲಿ ಸಾಮಾನ್ಯ ಮಹಿಳೆಯರಿಗೆ ತಮ್ಮ ನೋವು ಗಳನ್ನು ಎಲ್ಲಿ ಹೇಳುವಂತದ್ದು ವ್ಯಕ್ತಪಡಿಸುವಂಥದ್ದು ಹಾಗೂ ಸಾಂತ್ವನ ಕೇಂದ್ರ ಹಾಗೂ ಶಿಶುಪಾಲನ ಇಲಾಖೆಯ ನಿರ್ವಹಣೆಯಲ್ಲಿ ಕೂಡ ಸಮಸ್ಯೆಯಾಗಿ ಇದನ್ನು ಹೋರಾಟವಾಗಿ ತೆಗೆದುಕೊಂಡು ಹಲವಾರು ಅಧಿಕಾರಿಗಳನ್ನು ಭೇಟಿಯಾಗಿ ಕೊನೆಗೆ ಯಶೋಧ ಶೆಟ್ಟಿಯವರು ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರಾಕರಿಸಿದ್ದಾಗ ಕಾರ್ಯದರ್ಶಿಯವರ ನೇತ್ರತ್ವದಲ್ಲಿ ಮಹಾಸಭೆ ಸರ್ವಾನುಮತದಿಂದ ಅವರನ್ನು ಬದಲಾಯಿಸಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಹೇಳಲು ಇಚ್ಛೆ ಪಡುತ್ತೇನೆ.

ಕಳೆದ ಅಕ್ಟೋಬರ್ 24ರಂದು ಒಕ್ಕೂಟದ ಅಧ್ಯಕ್ಷರಾಗಿದ್ದ ಶ್ರೀಮತಿಯ ಯಶೋಧ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆದು ಬಳಿಕ ಕೋರಂ ಇಲ್ಲದೆ ಮುಂದೂಡಲಾಗಿತ್ತು, ಆದರೆ ಈ ಸಭೆಯಲ್ಲಿ ಅಧ್ಯಕ್ಷರಾಗಿ ಪ್ರಕ್ರಿಯೆ ನಡೆದರು ಬಳಿಕ ಎರಡು ಬಣಗಳ ವಾಗ್ವಾದದಿಂದ ಸಭೆ ರದ್ದಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ ಹಾಗಾಗಿ ನವೆಂಬರ್ 6 ರಂದು ಮತ್ತೆ ಮಹಾಸಬೆ ನಡೆಸಿದ್ದು ಈ ಸಭೆಯಲ್ಲಿ ಕಾರ್ಯದರ್ಶಿಯವರ ನೇತೃತ್ವದಲ್ಲಿ ಹೊಸ ತಂಡವನ್ನು ರಚಿಸಿ ಸಾಂತ್ವನ ಕೇಂದ್ರ ಹಾಗೂ ಶಿಶುಪಾಲನ ಕೇಂದ್ರದ ನಿರ್ವಹಣೆಗೆ ಬಹಳ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ ಈ ಬೆಳವಣಿಗೆ ಸಾಕಷ್ಟು ಕುತೂಹಲ ಎಡ ಮಾಡಿಕೊಟ್ಟಿದ್ದರು ಕೂಡ ಮುಂದಿನ ದಿನಗಳಲ್ಲಿ ಸಂತಾನ ಕೇಂದ್ರ ಮತ್ತು ಶಿಶು ಕಾರಣ ಇಲಾಖೆಗೆ ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದು ರಮಿತಾ ಸೂರ್ಯವಂಶಿ ತಿಳಿಸಿದ್ದಾರೆ.