ಕಾಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದಕೃಷ್ಣದಾಸ್ ಶೆಣೈ ಯವರಿಗೆ ನುಡಿ ನಮನ ಕಾರ್ಯಕ್ರಮ

0
259

ಕಾರ್ಕಳ : ಕಾಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ,ಕೃಷ್ಣದಾಸ್ ಶೆಣೈ ಯವರಿಗೆ ನುಡಿ ನಮನ ಕಾರ್ಯಕ್ರಮವು ತಾರೀಕು ನವೆಂಬರ್ 28 ರಂದು ಕಾಬೆಟ್ಟು ಗಣೇಶೋತ್ಸವ ಮೈದಾನದಲ್ಲಿ ಜರಗಿತು. ಕಾಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸ್ಥಾಪಕ ಸದಸ್ಯರು, ಮಾಜಿ ಅಧ್ಯಕ್ಷರು, ಎಮ್. ಪಿ ಎಮ್ ಕಾಲೇಜಿನ ಮಾಜಿ ಆಡಳಿತ ಮಂಡಳಿ ಸದಸ್ಯರು, ಕಾರ್ಕಳ ತಾಲೂಕು ಧ್ವನಿ ಬೆಳಕು ಸ ಯೋಜನೆ ಸಮಿತಿಯ ಮಾಜಿ ಅಧ್ಯಕ್ಷರು, ಹಲವಾರು ಸಂಘ ಸಂಸ್ಥೆಯ ನಿರ್ದೇಶಕರಾದ ಹಾಡಿ ಮನೆ ಕೃಷ್ಣದಾಸ್ ಶೆಣೈ ಯವರ ನುಡಿ ನಮನ ಕಾರ್ಯ ಕ್ರಮದಲ್ಲಿ ಉದ್ಯಮಿ ಜಗದೀಶ್ ಮಲ್ಯ, ಉದ್ಯಮಿ ಗಣಪತಿ ಪೈ, ಕಾಬೆಟ್ಟು ಗಣೇಶೋತ್ಸವ ಸಮಿತಿಯ ವೈಕುಂಠ ಶೆಣೈ, ಮಂಜುನಾಥ ಪೈ ಸಭಾ ಭವನ ದ ಗಣೇಶೋತ್ಸವ ಸಮಿತಿಯ ಟಿ. ರಾಮಚಂದ್ರ ನಾಯಕ್, ಕಾಬೆಟ್ಟು ಶ್ರೀ ವೇಣುಗೋಪಾಲ ದೇವಸ್ಥಾನದ ಸಂಕೇತ್ ಉಪಧ್ಯಾಯ, ಸುಧೀಶ್ ಭಟ್, ಬಸ್ಸ್ಟ್ಯಾಂಡ್ ಗಣೇಶೋತ್ಸವ ಸಮಿತಿಯ ಶುಭೋದ್ ರಾವ್, ಹಿರ್ಗಾನ ಗಣೇಶೋತ್ಸವ ಸಮಿತಿಯ ಆಶೀತಾ ಎಸ್ ಕಡಂಬ ಪ್ರಕಾಶ್ ರಾವ್, ರೋಟರಿ ಕ್ಲಬ್ ಅಧ್ಯಕ್ಷರಾದ ನವೀನಚಂದ್ರ ಶೆಟ್ಟಿ, ಧ್ವನಿ ಬೆಳಕು ಸಂಯೋಜನೆಯ ಕಾರ್ಕಳ ದ ಜಗದೀಶ್ ಆಚಾರ್ಯ, ಪರ್ಪಳೆ ಕಲ್ಕೂಡ ಟ್ರಸ್ಟ್ ಅಧಕ್ಷ ಸುಭಾಸ್ ಹೆಗ್ಡೆ ಮೃತರ ಗುಣಗಾಯನ ಮಾಡಿದರು ಕಾಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನವೀನ ದೇವಾಡಿಗ ಸ್ವಾಗಿಸಿದರು ಶ್ರೀ ರಾಮ ಮಂದಿರ ಇದರ ಭಗವಾದ್ ಗೀತಾ ಪಠಣ ಸದಸ್ಯ ರಿಂದ ಗೀತಾ ಪಠಣ ಕಾರ್ಯಕ್ರಮ ಜರಗಿತು. ಸಮಾರಂಭದಲ್ಲಿ ಭಾಗವಹಿಸಿದವರಿಗೆ ಮಿತ್ರ ಭೋಜನದ ನಂತರ ಶ್ರೀಮತಿ ವಿಜಯಲಕ್ಷ್ಮಿ ಕೃಷ್ಣದಾಸ್ ಶೆಣೈ ಮತ್ತು ಮಕ್ಕಳಿಂದ ಹೂ, ಹಣ್ಣಿನ ಗಿಡ ವನ್ನು ವಿತರಣೆ ಮಾಡಲಾಯಿತು ಅನಿಲ್ ಧನ್ಯವಾದ ಅರ್ಪಿಸಿದರು ಶೋಭಾ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here