Saturday, April 19, 2025
HomeUncategorizedದೇವರಬಾಳಿನಲ್ಲಿ ವಿಶೇಷವಾದ ವಾಮನಮುದ್ರೆ ಶಿಲಾ ಶಾಸನ ಪತ್ತೆ

ದೇವರಬಾಳಿನಲ್ಲಿ ವಿಶೇಷವಾದ ವಾಮನಮುದ್ರೆ ಶಿಲಾ ಶಾಸನ ಪತ್ತೆ

ಉಡುಪಿ ಜಿಲ್ಲೆಯ, ಬೈಂದೂರ್ ತಾಲೂಕಿನ ಹಳ್ಳಿಹೊಳೆಯ ದೇವರಬಾಳಿನಲ್ಲಿ ಈ ವಿಶೇಷ ಶಾಸನವು ಕಂಡುಬಂದಿದೆ. ಜಟ್ಟಿಗೇಶ್ವರನೆಂದು ಇಲ್ಲಿನ ರಾಘವೇಂದ್ರ ಚಾತ್ರರ ಕುಟುಂಬ ಈ ಶಾಸನವನ್ನು ಪೂಜಿಸುತ್ತಾ ಬಂದಿದ್ದು, ಸುಮಾರು 20 ವರ್ಷಗಳ ಹಿಂದೆ ಶಾಸಕ್ಕೊಂದು ಗುಡಿಯನ್ನೂ ನಿರ್ಮಾಣ ಮಾಡಿದ್ದಾರೆ.

ಈ ಶಾಸನದ ಮಾಹಿತಿಯನ್ನು ಕಲೆ ಹಾಕಿದ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರದೀಪ್ ಯಡಿಯಾಳ ಅವರು ಸ್ಥಳಕ್ಕೆ ತೆರಳಿದ್ದಾರೆ. ಜಟ್ಟಿಗೇಶ್ವರನಾಗಿ ಪೂಜೆ ಮಾಡುವ ಹಿನ್ನಲೆಯಲ್ಲಿ ಫೋಟೋಗಳನ್ನು ತೆಗೆಯಲು ಮಾತ್ರ ಕುಟುಂಬದವರು ಅವಕಾಶ ನೀಡಿದ್ದಾರೆ. ಇದು ಸುಮಾರು ಮೂರು ಕಾಲು ಅಡಿ ಎತ್ತರ ಎರಡು ಕಾಲು ಅಡಿ ಅಗಲ ಇದೆಯೆಂದು ಹಾಗೂ ಇದರ ಮಾಹಿತಿ ಪಡೆಯಬೇಕೆನ್ನುವ ಆಸ್ತೆ ಹೊಂದಿ ಫೋಟೋಗಳನ್ನು ತುಮಕೂರು ವಿ.ವಿ ಸಂಶೋಧನಾರ್ಥಿ ವೈಶಾಲಿ ಜಿ. ಆರ್ ಇವರಿಗೆ ನೀಡಿದ್ದಾರೆ.

ಪ್ರೊ. ಎಂ ಕೊಟ್ರೇಶ್, ಅಧ್ಯಕ್ಷರು, DOSR ಇತಿಹಾಸ ಮತ್ತು ಪುರಾತತ್ವ ವಿಭಾಗ ತುಮಕೂರು ವಿಶ್ವವಿದ್ಯಾನಿಲಯ ಇವರು ಇದೊಂದು ವಾಮನ ಮುದ್ರೆ ಶಾಸನವಾಗಿದ್ದು, ಶಾಸನದ ಬಲ ಭಾಗದಲ್ಲಿ ಸೂರ್ಯ, ಕರುವಿಗೆ ಹಾಲುಣಿಸುತ್ತಿರುವ ಗೋವು, ಒಬ್ಬ ವ್ಯಕ್ತಿಯ ಚಿತ್ರ ಕೆತ್ತಲ್ಪಟ್ಟಿದೆ, ಶಾಸನದ ಮಧ್ಯಭಾಗದಲ್ಲಿ ವಾಮನನ ಕೆತ್ತನೆ, ಎಡ ಭಾಗದಲ್ಲಿ ಚಂದ್ರನ ಕೆತ್ತನೆ ಹಾಗೂ ಅದರ ಕೆಳಭಾಗ ದೀಪದ ಕಂಭದ ಕೆತ್ತನೆ ಇದೆ.22 ಸಾಲುಗಳು ಮೇಲ್ಭಾಗದಲ್ಲಿ ಕಾಣಿಸುತ್ತಿದೆ. ಸಿಮೆಂಟ್ ನಿಂದ ಶಾಸನ ಕಟ್ಟಸಿದ್ದರಿಂದ ಉಳಿದ ಸಾಲುಗಳು ಕಾಣಿಸುವುದಿಲ್ಲ. ಇದು ನಂದಿನಾಗರಿ ಲಿಪಿಯಲ್ಲಿದ್ದು ಮೇಲ್ನೋಟಕ್ಕೆ ವಿಜಯನಗರ ಕಾಲದ ಶಾಸನವಾಗಿ ಕಂಡುಬಂದಿದೆ. ಹಾಗೂ ವೈಷ್ಣವರಿಗೆ ದಾನ ನೀಡಿದ ಶಾಸನವಾಗಿ ಕಂಡು ಬಂದಿದೆ.ಪ್ರತಿ ತೆಗೆದು ಅಧ್ಯಯನ ಮಾಡಿದಾಗ ಮಾತ್ರ ಸಂಪೂರ್ಣ ಮಾಹಿತಿ ನೀಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಈ ಭಾಗದಲ್ಲಿ ದೇವರಪಾಲು, (ದೇವರ ಬಾಳು) ಕಮ್ಮಾರಪಾಲು ಶೆಟ್ಟಿಪಾಲು, ಅಗಸರಪಾಲು, ಕಡೆಪಾಲು, ಬೊಬ್ಬನಪಾಲು, ಗರಡಿಪಾಲು, ವರನಪಾಲು ಮುಂತಾದ ಊರುಗಳ ಹೆಸರುಗಳಿವೆ ಹಾಗೂ 64 ಗೋಪಾಲಕೃಷ್ಣ ಮಠಗಳು ಈ ಭಾಗದಲ್ಲಿವೆಯೆಂದು ತಿಳಿದುಬರುವ ಹಿನ್ನಲೆಯಲ್ಲಿ ಈ ಶಾಸನಾಧ್ಯಯನದ ಅಗತ್ಯತೆಯನ್ನು, ವಿದ್ವಾನ್ ವಾಸುದೇವ ಜೋಯಿಸ್ ಹಾಲಾಡಿ ಇವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಶಾಸದ ಸಮೀಪದಲ್ಲೊಂದು ಕೊಪ್ಪರಿಗೆಗೆ ಇರುವ ಹಿಡಿಕೆಯಂತಿರವ ತೊಟ್ಟು (ಹಿಡಿ) ಕಾಣುತಿದ್ದು ಅದಕ್ಕೆ 40-45 ವರ್ಷಗಳ ಹಿಂದೆ ದನ ಕರುಗಳನ್ನು ಈ ಶಾಸನದ ಸಮೀಪ ಕಟ್ಟುತ್ತಿದ್ದು, ಇಲ್ಲಿನ ಶ್ರೀಮಂತ ವರ್ಗದವರಬ್ಬರು, ಒಬ್ಬ ವ್ಯಕ್ತಿಯನ್ನು ಕೂರಿಸಿ ನಿಧಿ ಇದೆಯಂದು ಕಪ್ಪು ಹಾಕಿ ನೋಡುವ ಪ್ರಯತ್ನ ಮಾಡಿದ್ದರೆಂದು, ಅದು ಸಾಧ್ಯವಾಗದೆ ಆ ವಿಚಾರ ಕೈ ಬಿಟ್ಟರೆಂದು ತಿಳಿದು ಬಂದಿದೆ. ಹಾಗೆಯೇ ಈ ಶಾಸನವನ್ನು ಜಟ್ಟಿಗೇಶ್ವರನೆಂದು ಪೂಜಿಸಿ ಬಂದಿರುವ ಹಿನ್ನಲೆಯಲ್ಲಿ, ಶಾಸನ ಕಲ್ಲನ್ನು ಮುಟ್ಟುವ ಹಾಗಿಲ್ಲವೆಂದು ಆ ಭಾಗದ ಜನರಲ್ಲಿ ಗಾಢವಾದ ನಂಬಿಕೆ ಬೆಳೆದಿದೆ.

ದೇವರ ಬಾಳಿನ ಸಮೀಪ ಕೋಟೆಯೊಂದಿದ್ದು, ಅಲ್ಲಿ ಕೂಡ ಕೋಟೆ ಜಟ್ಟಿಗನಿದ್ದಾನೆ ಅವನನ್ನು ಅಣ್ಣ ಹಾಗೂ ಈ ಜಟ್ಟಿಗನನ್ನು ತಮ್ಮನೆಂದು ಕರೆಯುತ್ತಾರೆ ಎನ್ನುತ್ತಾರೆ. ಅಲ್ಲೂ ಕೂಡ ಒಂದು ಶಾಸನವಿದ್ದಿರಬಹುದೆಂದು ಊಹಿಸಬಹುದಾಗಿದೆಯೆಂದು ತುಮಕೂರು ವಿ.ವಿ ಸಂಶೋಧನಾರ್ಥಿ ಶಶಿಕುಮಾರ್ ನಾಯ್ಕ್ ಅಭಿಪ್ರಾಯಪಟ್ಟಿದ್ದಾರೆ.ಈ ಮಾಹಿತಿಯನ್ನು ಪ್ರದೀಪ್ ಕುಮಾರ್ ಬಸ್ರೂರು ಎ.ಎಸ್.ಐ ಮಾಹಿತಿ ನೀಡಿ ಪತ್ರಿಕೆಗೆ ವರದಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular