ವೇಗವಾಗಿ ಬಂದು ಫುಟ್​ಪಾತ್ ಮೇಲೆ ಮಲಗಿದ್ದವರ ಮೇಲೆ ಹರಿದ ಕಾರು

0
133

ನವದೆಹಲಿ: ಮೈಮೇಲೆ ಪ್ರಜ್ಞೆ ಇಲ್ಲದವರಂತೆ ಕಾರು ಚಾಲನೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಅಪಘಾತ ಪ್ರಕರಣಗಳು ಕೂಡ ಏರಿಕೆಯಾಗಿದೆ. ದೆಹಲಿಯ ವಸಂತ್​ ಕುಂಜ್ ಬಳಿ ಫುಟ್​​ಪಾತ್ ಮೇಲೆ ಮಲಗಿದ್ದ ಮೂವರು ಮೇಲೆ ಬಿಎಂಡಬ್ಲ್ಯೂ ಕಾರು ಹರಿದಿರುವ ಘಟನೆ ವರದಿಯಾಗಿದೆ. ಮೂವರೂ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಆಸ್ಪತ್ರೆಗೆ ದಾಖಲಿಲಸಾಗಿದೆ.

ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಆಂಬಿಯನ್ಸ್ ಮಾಲ್ ಬಳಿ ನಡೆದ ಈ ಘಟನೆ, ನಿವಾಸಿಗಳನ್ನು ಬೆಚ್ಚಿಬೀಳಿಸಿದ್ದು, ನೈಋತ್ಯ ದೆಹಲಿಯ ಈ ಪ್ರದೇಶದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ನಿಯಂತ್ರಣ ತಪ್ಪಿ ಕಾರು ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಮೂವರ ಮೇಲೆ ಹರಿದಿದೆ. ಅಪಘಾತದ ಮೊದಲು ಚಾಲಕ ನಿಯಂತ್ರಣ ಕಾಯ್ದುಕೊಳ್ಳಲು ಕಷ್ಟಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.

ಪೊಲೀಸರು ಕಾರಿ ಚಾಲಕನನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ, ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕಾರು ಹಿಮಾಚಲ ಪ್ರದೇಶ ನೋಂದಣಿಯನ್ನು ಹೊಂದಿದ್ದು, ಇದು ಹೊರ ರಾಜ್ಯದ ಮಾಲೀಕರಿಗೆ ಸೇರಿದ್ದು ಎಂಬುದು ಕಂಡುಬಂದಿದೆ. ವೈದ್ಯಕೀಯ ಪರೀಕ್ಷೆಗಳು ಬಾಕಿ ಉಳಿದಿರುವ ಕಾರಣ, ಮದ್ಯಪಾನ ಮಾಡಿದ್ದರೇ ಎಂಬುದಿನ್ನು ದೃಢಪಟ್ಟಿಲ್ಲ.

ವಸಂತ್ ಕುಂಜ್‌ನಲ್ಲಿರುವ ಆಂಬಿಯನ್ಸ್ ಮಾಲ್‌ನ ಮುಂಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಸ್ಥ

LEAVE A REPLY

Please enter your comment!
Please enter your name here