ಬೆಂಗಳೂರಿನ ಬಾಷ್ ಕಂಪೆನಿಯ ಎಚ್ಆರ್ ಮ್ಯಾನೇಜರ್ ಶ್ರೀ ಪ್ರದೀಪ್ ಮತ್ತು ತಂಡದವರು ಜೂನ್ 05 ರಂದು ಕನ್ಯಾಡಿ ಸೇವಾನಿಕೇತನಕ್ಕೆ ಭೇಟಿ ನೀಡಿ ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಾಮಗಾರಿಯನ್ನು ವೀಕ್ಷಿಸಿದರು. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗತೆ ಮತ್ತು ನಿರ್ವಹಣೆ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ನ ಪ್ರಾಂಶುಪಾಲರಾದ ಶ್ರೀ ವಿಶ್ವೇಶ್ವರ ಪ್ರಸಾದ್, ಸೇವಾಧಾಮ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.