Saturday, June 14, 2025
Homeಮೂಡುಬಿದಿರೆರಾ. ಹೆ. ಅವೈಜ್ಞಾನಿಕ ಕಾಮಗಾರಿ : ಬೈಕ್ ಸವಾರ ಬಲಿ

ರಾ. ಹೆ. ಅವೈಜ್ಞಾನಿಕ ಕಾಮಗಾರಿ : ಬೈಕ್ ಸವಾರ ಬಲಿ

ಮೂಡುಬಿದಿರೆ: ರಾಷ್ಟ್ರೀಯ ‌ಹೆದ್ದಾರಿಯ 169 ರಲ್ಲಿ ಹಾದು ಹೋಗುವ ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜ್ ಪಕ್ಕದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯ ಪರಿಣಾಮವಾಗಿ ಬೈಕ್ ಸವಾರನೊಬ್ಬ ನಿನ್ನೆ ರಾತ್ರಿ ಬಲಿಯಾದ ಘಟನೆ ನಡೆದಿದೆ.
ಗಂಜಿಮಠದ ನಿವಾಸಿ ಅಬ್ದುಲ್ ಖಾದರ್ (69) ಮೃತಪಟ್ಟ ವ್ಯಕ್ತಿ. ಮಿಜಾರಿನಲ್ಲಿ ರಾ. ಹೆ. ಕಾಮಗಾರಿಯು ಅಪೂಣ೯ ಸ್ಥಿತಿಯಲ್ಲಿದ್ದು ಅಲ್ಲಿ ಮೋರಿಯ ದೊಡ್ಡ ಚರಂಡಿಗೆ ಅಡ್ಡವಾಗಿ ಹೊಂಡ ತೋಡಿ ಅದಕ್ಕೆ ಕಾಂಕ್ರೀಟ್ ಬೆಡ್ಡಿಂಗ್ ಹಾಕಲಾಗಿದ್ದು ಅಲ್ಲಿ ಯಾವುದೇ ಸೂಚನಾ ಫಲಕವನ್ನು ಅಳವಡಿಸಲಿಲ್ಲ. ಅಲ್ಲಿ ಹೊಂಡ ಇರುವುದು ರಾತ್ರಿ ಯಾರ ಗಮನಕ್ಕೂ ಬರುವುದಿಲ್ಲ. ಅಬ್ದುಲ್ ಖಾದರ್ ಅವರು ನಿನ್ನೆ ರಾತ್ರಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಹೊಂಡವನ್ನು ಗಮನಿಸದೆ ಓಪನ್ ರೋಡಲ್ಲಿ ಬಂದು ಹೊಂಡಕ್ಕೆ ಬಿದ್ದು ತಲೆ ಭಾಗಕ್ಕೆ ಅತೀವ ಗಾಯಗಳಾಗಿ ಮೃತಪಟ್ಟಿದ್ದಾರೆ.
ಈಗಾಗಲೇ ಕಳೆದ ತಿಂಗಳಿಂದ ಮೂವರು ಈ ಹೊಂಡಕ್ಕೆ ಬಿದ್ದಿದ್ದು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಗೆ ಕಾರಣ ಡಿಬಿಎಲ್ ಅವರ ಅವೈಜ್ಞಾನಿಕ ಕಾಮಗಾರಿಯಾಗಿದೆ.ಇಲ್ಲಿ ಯಾವುದೇ ಸೂಚನಾ ಫಲಕವಿಲ್ಲದೆ ಇಂಥ ಕೆಲಸಗಳನ್ನು ಮಾಡುವುದು ಅಥವಾ ಅದನ್ನು ಮುಗಿಸಿ ಬಿಡುವುದು, ರಾತ್ರೋರಾತ್ರಿ ಜಲ್ಲಿ ತಂದು ಸುರಿದು ರಸ್ತೆಗೆ ಅಡ್ಡ ಇಟ್ಟಿದ್ದಾರೆ. ಅಲ್ಲಿ ಯಾವುದೇ ರೀತಿಯ ಸಿಗ್ನಲ್ ಅಥವಾ ನಾಮಫಲಕವನ್ನು ಅಳವಡಿಸಿಲ್ಲ. ಇದೀಗ ಅವಘಡದಿಂದ ಜೀವ ಕಳೆದುಕೊಂಡಿರುವ ವ್ಯಕ್ತಿಯ ಕುಟುಂಬಕ್ಕೆ ರೂ. 1 ಕೋಟಿ ಪರಿಹಾರ ನೀಡಬೇಕು. ಇಂತಹ ಘಟನೆಗಳು ಮುಂದೆ ಸಂಭವಿಸಿದರೆ ರಸ್ತೆಗೆ ಇಳಿದು ಹೋರಾಟ ಮಾಡುತ್ತೇವೆ ಮತ್ತು ಯಾವುದೇ ಕಾಮಗಾರಿ ಮುಂದುವರೆಸಲು ಬಿಡುವುದಿಲ್ಲ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಸುಧಾಕರ ಪೂಂಜಾ ಎಚ್ಚರಿಸಿದ್ದಾರೆ.

RELATED ARTICLES
- Advertisment -
Google search engine

Most Popular