ಕುಲಾಲ ಸಮಾಜದ ಮಹಾ ದಾನಿ ಸುನಿಲ್ ಸಾಲಿಯಾನ್ ಯೋಜನೆಯಲ್ಲಿ ಬ್ಯಾಂಕಾಕ್, ಥೈಲ್ಯಾಂಡ್ ಪ್ರವಾಸ

0
17

ಮುಂಬಯಿ : ಕುಲಾಲ ಸಂಘದ ಮುಂಬೈಯ ಕಟ್ಟಡ ನಿರ್ಮಾಣ ಸಮಿತಿಯ ಉಪ ಕಾರ್ಯಧ್ಯಕ್ಷ ಮಹಾ ದಾನಿ ಸುನಿಲ್ ಸಾಲಿಯಾನ್ ದಂಪತಿಯು, ವರ್ಷದ ಹಲವಾರು ಬಾರಿ ದೇಶದ ವಿವಿಧ ಭಾಗಗಳಿಗೆ ಹಾಗೂ ವಿದೇಶಗಳಿಗೆ ಹಿರಿಯ ನಾಗರಿಕರನ್ನು ಹಾಗೂ ಪ್ರವಾಸದ ಬಗ್ಗೆ ಆಸಕ್ತಿ ಇರುವ ಪ್ರವಾಸಿಗರನ್ನು ಅತಿ ಕಡಿಮೆ ವೆಚ್ಚದಲ್ಲಿ ಹಾಗೂ ಕೆಲವರಿಗೆ ತನ್ನ ಸ್ವಂತ ಖರ್ಚಿನಿಂದಲೇ ಪ್ರವಾಸ ಮಾಡುವ ಆ ಯೋಜನೆಯನ್ನು ನಡೆಸುತ್ತಾ ಬಂದಿದ್ದಾರೆ.

ಈ ಬಾರಿ ಬ್ಯಾಂಕಾಕ್, ಥೈಲ್ಯಾಂಡ್, ಪಟ್ಟಾಯ ಅಲ್ಲಿಯ ಬೌದ್ಧ ದೇವಾಲಯಗಳು, ಚಿನ್ನದ ಹೊಳಪಿನ ಅರಮನೆಗಳು , ಆದುನಿಕ ಕಟ್ಟಡಗಳು, ಚಾವು ಪ್ರಯ ನದಿಯ ಸೌಂದರ್ಯ, ದೀಪಗಳ ಸೌಂದರ್ಯ ಇಂಥ ರಮಣೀಯ ಸ್ಥಳಕ್ಕೆ ಬೇಟಿಯಾ ಅವಕಾಶವನ್ನು ಅ.7-12 ತಾರೀಕಿನವರೆಗೆ ಈ ಪ್ರವಾಸ ವನ್ನು ಆಯೋಜಿಸಿಕೊಂಡಿದ್ದ ಈ ಪ್ರವಾಸದಲ್ಲಿ ಮುಂಬೈಯ ಮತ್ತು ಮಂಗಳೂರಿನ ಕುಲಾಲ ಸಮಾಜದ ಹಿರಿಯ ನಾಗರಿಕರು ಯುವ ಸಮುದಾಯದವರನ್ನು ಅತಿ ಕಡಿಮೆ ವೆಚ್ಚದಲ್ಲಿ ಅದರಲ್ಲೂ ಕೆಲವರಿಗೆ ಸುನಿಲ್ ಸಾಲಿಯಾನ್ ಅವರು ಸ್ವಂತ ಖರ್ಚಿಯಿಂದಲ್ಲಿ ಪ್ರವಾಸವನ್ನು ನಡೆಸಿದ್ದಾರೆ.

ತನ್ನ ಆದಾಯದ ಬಹುಪಾಲನ್ನು ಸಮಾಜದ ಬಂಧುಗಳಿಗೆ ಆರ್ಥಿಕ ಸಹಕಾರ ಹಾಗೂ ಹಿರಿಯ ನಾಗರಿಕರಿಗೆ ಪ್ರವಾಸ ಅನಾಥಾಶ್ರಮಗಳಿಗೆ ಸಹಾಯಧನವನ್ನು ನೀಡುತ್ತಾ ಬಂದಿದ್ದಾರೆ. ಕುಲಾಲ ಸಂಘ ಮುಂಬೈಯ ಬಹು ಕೋಟಿ ವೆಚ್ಚದ ಮಂಗಳೂರಿನ ಕುಲಾಲ ಭವನಕ್ಕೆ ಸುನಿಲ್ ಸಾಲಿಯನ್ನು ಮತ್ತು ದೇವಕಿ ಸಾಲ್ಯಾನ್ ಬಹು ದೊಡ್ಡ ಮೊತ್ತವನ್ನು ನೀಡಿದ್ದಾರೆ.